ಮೂಡುಬಿದಿರೆ: ಹೋಬಳಿಯ 12 ಗ್ರಾ.ಪಂ.ಗಳ ಬಹುತೇಕ ಪಂ.ಗಳಲ್ಲಿ ಬಿಜೆಪಿ ಯಾವುದೇ ಗೊಂದಲವಿಲ್ಲದೇ ತನ್ನಲ್ಲಿಂದಲೇ ಅಧ್ಯಕ್ಷ-ಉಪಾಧ್ಯಕ್ಷರೊಳಗೊಂಡ ಆಡಳಿತ ಮಾಡುವ ಸಿದ್ಧತೆಯಲ್ಲಿದೆ. ಅಧ್ಯಕ್ಷ ಸ್ಥಾನಕ್ಕೆ 7 ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 7 ಮಹಿಳೆಯರು ಆಯ್ಕೆಯಗುವ `ಮಹಿಳೆ’ಯರಿಗೆ ಸಮಪಾಲು ದೊರಗಿದೆ.
ಪ್ರಮೀಳೆಯರ ಆಡಳಿತ:
12 ಪಂಚಾಯಿತಿಗಳ 194 ಸ್ಥಾನಗಳಿಗೆ ನಡೆದ ಚುನಾವಣೆಗಳಲ್ಲಿ 211 ಮಹಿಳೆಯರು ಸ್ಪರ್ದಿಸಿದ್ದರು. ಇರುವೈಲ್ ಗ್ರಾ.ಪಂ.ನ ತೋಡಾರು 2ನೇ ವಾರ್ಡ್ ನ ಅಭ್ಯರ್ಥಿ ಕಸುಮ ಅವಿರೋಧವಾಗಿ ಆಯ್ಕೆಯಾಗಿದ್ದು, ಅವರನ್ನು ಒಳಗೊಂಡಂತೆ 88 ಮಹಿಳೆಯರು ಗ್ರಾ.ಪಂ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಇದೀಗ 13 ಮಂದಿ ಮಹಿಳೆಯರು ಅಧ್ಯಕ್ಷ-ಉಪಾಧ್ಯಕ್ಷರಾಗಲು ತುದಿಗಾಲಲ್ಲಿ ನಿಂತಿದ್ದಾರೆ. ಧರೆಗುಡ್ಡೆ ಗ್ರಾ.ಪಂ.ಗೆ ಎಸ್ಸಿ(ಮಹಿಳೆ), ಕಲ್ಲಮುಂಡ್ಕೂರು-ಸಾಮಾನ್ಯ(ಮಹಿಳೆ), .ಪಾಲಡ್ಕ-ಸಾಮಾನ್ಯ (ಮಹಿಳೆ), ಪುತ್ತಿಗೆ-ಹಿಂದುಳಿದ ವರ್ಗ(ಮಹಿಳೆ),.ಶಿತರ್ಾಡಿ-ಸಾಮಾನ್ಯ(ಮಹಿಳೆ), ಪುತ್ತಿಗೆ-ಹಿಂ.ವರ್ಗ (ಮಹಿಳೆ), ವಾಲ್ಪಾಡಿ-ಹಿಂ.ವರ್ಗ(ಮಹಿಳೆ) ಅಧ್ಯಕ್ಷರಾಗಿ ಮಹಿಳೆಯರು ಗದ್ದುಗೆ ಏರಲಿದ್ದಾರೆ.
ಹೊಸಬೆಟ್ಟು-ಸಾಮಾನ್ಯ(ಮಹಿಳೆ),ಇರುವೈಲ್-ಸಾಮಾನ್ಯ (ಮಹಿಳೆ), ಬೆಳುವಾಯಿ-ಸಾಮಾನ್ಯ (ಮಹಿಳೆ),ಪಡುಮಾರ್ನಾಡು-ಹಿಂದು.ವರ್ಗ ಬಿ(ಮಹಿಳೆ), ಪುತ್ತಿಗೆ-ಸಾಮಾನ್ಯ (ಮಹಿಳೆ),ತೆಂಕಮಿಜಾರು-ಹಿಂದು ವರ್ಗ.ಎ(ಮಹಿಳೆ), ನೆಲ್ಲಿಕಾರಿನಲ್ಲಿ ಹಿಂ.ವರ್ಗ-ಎ (ಮಹಿಳೆ) ಉಪಾಧ್ಯಕ್ಷರಾಗಿ ಆಯ್ಕೆಯಾಗಲಿದ್ದಾರೆ.
ಬಂಡಾಯ ನಿರ್ಣಾಯಕರು:
ಕಲ್ಲಮುಂಡ್ಕೂರಿನಲ್ಲಿ ಕಾಂಗ್ರೆಸ್ ಹಾಗೂ ಬೆಜೆಪಿಯ ಬಂಡಾಯ ಅಭ್ಯರ್ಥಿಗಳಿರುವುದರಿಂದ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲೂ ಪರಿಣಾಮ ಬೀರಲಿದೆ. ಇಲ್ಲಿ ಕಾಂಗ್ರೆಸ್ 7 ಸ್ಥಾನ, ಕಾಂಗ್ರೆಸ್ ಬಂಡಾಯ 3 ಸ್ಥಾನ, ಬಿಜೆಪಿ 4 ಸ್ಥಾನ, ಬಿಜೆಪಿ ಬಂಡಾಯ 2 ಸ್ಥಾನ ಗಳಿಸಿರುವುದರಿಂದ ಬಂಡಾಯ ಅಭ್ಯರ್ಥಿಗಳ ಚಿತ್ತ ಎತ್ತ ಸಾಗಬಹುದು?, ಯಾವ ಪಕ್ಷದ ಬೆಂಬಲಿಗರು ಚುಕ್ಕಾಣಿ ಹಿಡಿಯಬಹುದು?, ಯಾರ ಬೆಂಬಲಿಗರು ಅಧ್ಯಕ್ಷರು-ಉಪಾಧ್ಯಕ್ಷರಾಗಹುದೆಂಬ ಕುತೂಹಲ ಹೋಬಳಿಯಲ್ಲೇ ಮೂಡಿದೆ.
ಸಂಭಾವ್ಯರಿವರು:
ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅಧ್ಯಕ್ಷರ-ಉಪಾಧ್ಯಕ್ಷ ಆಯ್ಕೆಯ ಲೆಕ್ಕಾಚಾರಗಳು ಹೆಚ್ಚಾಗಿದ್ದು, ಇದೀಗ ಮೀಸಲಾತಿ ಪ್ರಕಟಗೊಂಡಿರುವುದರಿಂದ ಅದು ಮತ್ತಷ್ಟು ತೀವ್ರತೆಯನ್ನು ಪಡೆದುಕೊಂಡಿದೆ. ಬೆಳುವಾಯಿ ಪಂಚಾಯಿತಿ ಹಿಂದುಳಿದ ಎ ವರ್ಗದವರಿಗೆ ಅಧ್ಯಕ್ಷ ಸ್ಥಾನ ಮೀಸಲಾಗಿದ್ದು, ಬಿಜೆಪಿ ಬೆಂಬಲಿತ ಭಾಸ್ಕರ್ ಆಚಾರ್ಯ ಅಥವಾ ಸೋಮನಾಥ ಕೋಟ್ಯಾನ್ ಅವರು ಅಧ್ಯಕ್ಷರಾಗುವರಲ್ಲಿ ಮುಂಚೂಣಿಯಲ್ಲಿದ್ದಾರೆ. ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳುವಾಯಿ ಗ್ರಾ.ಪಂ.ನಲ್ಲಿ ಬಿಜೆಪಿಯನ್ನು ಬಲಗೊಳಿಸಿದ್ದಾರೆ. ಈ ಇಬ್ಬರ ಪ್ರಮುಖ ನೇತೃತ್ವದಲ್ಲಿ ಪಂಚಾಯಿತಿಯ 26 ಸ್ಥಾನಗಳಲ್ಲಿ 19 ಸ್ಥಾನಗಳು ಬಿಜೆಪಿ ಪಾಲಾಗಿವೆ.
ಹೊಸಬೆಟ್ಟುವಿನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮೀಸಲಾತಿಗೆ ಸಿಕ್ಕಿರುವುರಿಂದ ಮನೋಜ್ ಆಳ್ವಾರಿಸ್, ಯೋಗೀಶ್ ಶೆಟ್ಟಿ ಅವರಿಗೆ ಅವಕಾಶವಿದೆ. ಬಿಜೆಪಿ ಪಾರಮ್ಯವಿರುವ ಇರುವೈಲಿನಲ್ಲಿ ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾಗಿದ್ದು, ವೇದಾವತಿ ಎಂಬವರು ಅಧ್ಯಕ್ಷರಾಗಬಹುದೆಂಬ ಲೆಕ್ಕಚಾರ ನಡೆಯುತ್ತಿದೆ. ಬಿಜೆಪಿ ಹಿಡಿತ ಸಾಧಿಸಿರುವ ನೆಲ್ಲಿಕಾರಿನಲ್ಲಿ ಸಾಮಾನ್ಯ ಮೀಸಲಿನ ಅಧ್ಯಕ್ಷ ಸ್ಥಾನಕ್ಕೆ ಜಯಂತ್ ಹೆಗ್ಡೆ ಅವರ ಹೆಸರು ಕೇಳಿಬರುತ್ತಿದೆ. ಜಯಂತ್ ಹೆಗ್ಡೆ ಈ ಭಾಗದ ಪ್ರಭಾವಿ ನಾಯಕರಲ್ಲಿ ಒಬ್ಬರು. ಕಾಂಗ್ರೆಸ್ ಬೆಂಬಲಿತರ ತೆಕ್ಕೆಯಲ್ಲಿರುವ ಪಾಲಡ್ಕದಲ್ಲಿ ಸಾಮಾನ್ಯ ಮಹಿಳೆಗೆ ಅಧ್ಯಕ್ಷ ಸ್ಥಾನ ಧಕ್ಕಿದೆ. ತಾ.ಪಂ ಮಾಜಿ ಅಧ್ಯಕ್ಷೆ ಸವಿತಾ ಟಿ.ಎನ್ ಅಥವಾ ಭವಾನಿ ಅವರು ಅಧ್ಯಕ್ಷರಾಗುವ ನಿರೀಕ್ಷೆಯಿದೆ. ಕಾಂಗ್ರೆಸ್ ಬೆಂಬಲ ರಹಿತ ಸದಸ್ಯರು ಆಯ್ಕೆಯಾಗಿರುವ ಪುತ್ತಿಗೆಯಲ್ಲಿ ಹಿಂದುಳಿದ ಬಿ ವರ್ಗದ ಮಹಿಳೆ ಅಧ್ಯಕ್ಷೆಯಾಗಲಿದ್ದು ಮೋಹಿನಿ ಶೆಟ್ಟಿ, ಅಸಿಲ್ಲಾ ಮೆಟಿಲ್ಡಾ ಕಡರ್ೋಜ ಅವರಿಗೆ ಅವಕಾಶ ಲಭ್ಯವಾಗಬಹುದು. ಕಾಂಗ್ರೆಸ್ ಬಹುಮತ ಪಡೆದಿರುವ ತೆಂಕಮಿಜಾರಿನಲ್ಲಿ ಸಾಮಾನ್ಯ ಮೀಸಲಾತಿಯಿರುವುದರಿಂದ ಭಾಲಕೃಷ್ಣ ದೇವಾಡಿಗ ಹೆಸರು ಅಧ್ಯಕ್ಷ ಸ್ಥಾನದಲ್ಲಿ ಕೇಳಿಬರುತ್ತಿದೆ. ಕಾಂಗ್ರೆಸ್ ವಶದಲ್ಲಿರುವ ಮತ್ತೊಂದು ಗ್ರಾ.ಪಂ ವಾಲ್ಪಾಡಿಯಲ್ಲಿ ಹಿಂದುಳಿದ ಮಹಿಳೆಗೆ ಅಧ್ಯಕ್ಷೆಯಾಗುವ ಅವಕಾಶವಿದ್ದು ವಸಂತಿ ಎಂಬವರು ಅಧ್ಯಕ್ಷರಾಗುವ ನಿರೀಕ್ಷೆಯಿದೆ.
ಯಶೋಧರ ವಿ.ಬಂಗೇರ