ಬಂಟ್ವಾಳ: ಕಸ ರಾಶಿ ಬಿದ್ದಿದೆ ಕಸ ವನ್ನು ತೆಗೆಯುವವರು ಬರುವುದಿಲ್ಲ ಎಂದೆಲ್ಲಾ ದೂರು ನೀಡುವ ನಾವು ಒಂದು ಕ್ಷಣಾವಾದರೂ ಕಸ ತೆಗೆಯುವವರ ಬಗ್ಗೆ ಯೋಚನೆ ಮಾಡಿದ್ದೇವಾ| ಅವರ ಸ್ಥಿತಿ ಗತಿಯ ಬಗ್ಗೆ ಕೇಳಿದ್ದೇವಾ, ಮಾತಾನಾಡಿದ್ದೇವಾ, ಕಣ್ಣೇತ್ತಿ ನೋಡಿದ್ದೇವಾ, ಕನಿಕರ ತೊರಿದ್ದೇವಾ, ಅದರ ಬದಲಿಗೆ ಅವರ ಎದುರಲ್ಲೇ ಮೂಗಿಗೆ ಕೈಹಿಡಿದು ಮುಖ ತಿರುಗಿಸಿ ಕೈಯಲ್ಲಿ ತ್ಯಾಜ್ಯದ ಲಕೋಟೆಯನ್ನು ಬಿಸಾಡಿ ಹೋಗುವುದನ್ನು ಮಾಮೂಲಿ ಮಾಡಿದ್ದೇವೆ.

ಒಂದು ರಾಶಿ ಕಸ ಬಿದ್ದರೆ ನಾವು ಅಸಹನೆಯನ್ನು ವ್ಯಕ್ತಪಡಿಸುತ್ತೇವೆ. ಅವರು ಮನುಷ್ಯರು ಅನ್ನುವುದನ್ನು ಒಮ್ಮೆಯಾದರೂ ಯೋಚನೆ ಮಾಡಿದ್ದೇವಾ, ನಮಗೆ ಕಸ ರಾಶಿ ಬಿದ್ದರೆ ಅದರಲ್ಲಿ ಸಾಂಕ್ರಮಿಕ ರೋಗ ಹರಡುತ್ತದೆ ಎನ್ನುವ ಬೀತಿ, ಆದರೆ ಅವರಿಗೆ ಕೊಳಚೆಯೆ ಅವರ ದಿನದ 24 ಗಂಟೆಯೂ ಜೀವನ. ದಿನವಿಡೀ ಇದೇ ಕೊಳಚೆಯನ್ನು ಮೈಗಂಟಿಸಿಕೊಂಡು ಬದುಕುವ ಕಾರ್ಮಿಕರ ಕಾರ್ಯ ನೋಡಿದರೆ ಮರುಕ ಹುಟ್ಟುತ್ತದೆ.
ಬೆಳಗ್ಗೆ ಕೆಲಸ ಆರಂಭಿಸಿದರೆ ಮಳೆಯಿರಲಿ ಬಿಸಿಲಿರಲಿ ಇವರಿಗೆ ಕೆಲಸವೊಂದೆ ಗುರಿ. ಸಾಂಕ್ರಮಿಕ ರೋಗಗಳನ್ನು ಹರಡುವ ಸೊಳ್ಳೆ, ನೊಣ, ಬ್ಯಾಕ್ಟರೀಯರಗಳ ಮಧ್ಯೆ ಇವರ ಜೀವನ. ಇಡೀ ದಿನ ಕೊಚ್ಚೆಯಲ್ಲೇ ಕೆಲಸ ಮಾಡುತ್ತಾರೆ. ಕೊಳಚೆಯನ್ನು ತೆರವುಗೊಳಿಸಿ ಸ್ವಚ್ಚತೆಯನ್ನು ಕಾಪಾಡುತ್ತಾರೆ. ಕೈಗಾಗಲಿ, ಕಾಲಿಗಾಗಲಿ ಸುರಕ್ಷಾ ಕವಚ ಧರಿಸದೆ , ದುರ್ವಾಸನೆಯನ್ನು ಮುಚ್ಚಿಕೊಳ್ಳಲು ಮುಖಕ್ಕೆ ಕರವಸ್ರ್ತವನ್ನು ಕಟ್ಟಿಕೊಳ್ಳದೆ, ದಿನದ ತುತ್ತಿಗಾಗಿ ಅಪಾಯಕಾರಿ ಕೆಲಸವನ್ನು ಅಲಂಬಿಸಿದ್ದಾರೆ. . ಈ ಕಾರ್ಮಿ ಕರಿಲ್ಲದೇ ಹೋದರೆ ಎಲ್ಲಡೆ ಅಶುಚಿತ್ವ ತಾಂಡವವಾಡಿ ಸಾಂಕ್ರಮಿಕ ರೋಗಗಳು ಕಾಣಿಸಿಕೊಳ್ಳಬಹುದು. ಆದರೆ ಅದರಲ್ಲೇ ನಿತ್ಯ ಬದುಕುತ್ತಿರುವ ಇವರಿಗೆ ರೋಗ ಬಾರದಂತೆ ಎಚ್ಚರವಹಿಸ ಬೇಕಾದವರು ಮಾತ್ರ ನಿರ್ಲಕ್ಷ ವಹಿಸಿದ್ದಾರೆ.
ಬಂಟ್ವಾಳ ಪುರಸಭೆಯ ತ್ಯಾಜ್ಯ ವಿಲೇವಾರಿ ಮಾಡುವ ಗುತ್ತಿಗೆದಾರನೊಂದಿಗೆ ನಾಲ್ಕೈದು ಮಂದಿ ಕೂಲಿ ಕಾರ್ಮಿಕರಿದ್ದರೆ. ಮೂರು ಮಂದಿ ಪುರುಷರು ಇಬ್ಬರು ಮಹಿಳೆಯರು ಕಸ ಸಾಗಿಸುವ ಲಾರಿಯೊಂದಿಗೆ ನಿತ್ಯ ಕಾಣ ಸಿಗುತ್ತಾರೆ. ಕಸದ ರಾಶಿಯತ್ತ ತೆರಳಿ ತ್ಯಾಜ್ಯ ಸ್ವಚ್ಚಗೊಳಿಸುವ ಇವರು ಅದರೊಳಗೇನಿದೆ, ಏನು ಸತ್ತಿದೆ ಎಂದು ನೋಡುವುದಿಲ್ಲ. ಏನೇ ಇದ್ದೆರೂ ಇರುವ ಸಲಕರಣೆಗಳೊಂದಿಗೆ ಕೈಕಾಲುಗಳನ್ನು ಬಳಸಿ ಲಾರಿಗೆ ಕಸ ತುಂಬುವುದಷ್ಟೇ ಇವರ ಕೆಲಸ. ಇಂತಹ ಸ್ಥಿತಿಯಲ್ಲಿ ಕೆಲಸ ಮಾಡುವ ಈ ಕಾರ್ಮಿಕರಿಗೆ ಯಾವುದೇ ಮೂಲ ಸೌಕರ್ಯಗಳನ್ನು ಗುತ್ತಿಗೆದಾರ ಒದಗಿಸಿಲ್ಲ ಎನ್ನುವ ಆರೋಪ ಕೂಡಾ ಇವರದ್ದು. ಈ ಬಗ್ಗೆ ದೂರು ನೀಡಿದರೆ ಅವರು ಕೆಲಸವನ್ನು ಕಳೆದುಕೊಳ್ಳುತ್ತೇವಾ ಎನ್ನುವ ಭಯ ತೊಟ್ಟಿನಲ್ಲಿ ಗುತ್ತಿದಾರನ ಕೈಯ ಅಡಿಯಲ್ಲಿ ಕೆಲಸ ನಿರ್ವಹಿಸುವವರ ಬಾಳು ಮಾತ್ರ ನಾಯಿಪಾಡಾಗಿದೆ.



