ಮೂಲ್ಕಿ: ಕಿನ್ನಿಗೋಳಿ ರಸ್ತೆಯ ಪುನರೂರು ದ್ವಾರದ ಬಳಿಯ ರಾಜ್ಯ ಹೆದ್ದಾರಿಯಲ್ಲಿ ಶುಕ್ರವಾರ ರಾತ್ರಿ 8.30ರ ವೇಳೆಗೆ ಭಾರೀ ಗಾಳಿ-ಮಳೆಗೆ ಮರವೊಂದು ರಸ್ತೆಗೆ ಉರುಳಿ ಬಿದ್ದು ಸುಮಾರು ಒಂದು ಗಂಟೆ ರಸ್ತೆ ಸಂಚಾರಕ್ಕೆ ಅಡೆತಡೆಯಾಯಿತು. ಮರದಡಿಗೆ ಸಿಲುಕಿದ ಬೈಕ್ ಸವಾರರಿಬ್ಬರು ಗಾಯಗೊಂಡಿದ್ದಾರೆ.


ಪರ್ವೇಜ್ ಮತ್ತು ರೆಹಮಾನ್ ಗಾಯಗೊಂಡವರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮೆಸ್ಕಾಂ ಸಿಬಂದಿ ಮತ್ತು ಪುನರೂರು –É್ರಂಡ್ಸ್ ಕಾರ್ಯಾಚರಣೆ ನಡೆಸಿ ಮರವನ್ನು ತೆರವು ಗೊಳಿಸಿದರು. ಕಿನ್ನಿಗೋಳಿಯಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.
ಸಮೀಪದ ಮುತ್ತಪ್ಪ ಮತ್ತು ಚುಕುಡ ಅವರ ಮನೆಗೆ ಹಾನಿ ಮರವೊಂದು ಬಿದ್ದು ಹಾನಿ ಮರ ಬಿದ್ದು ಬೈಕ್ ಸವಾರರಿಗೆ ಗಾಯ ಸಂಭವಿಸಿದೆ. ಸದಾಶಿವ ಶೆಟ್ಟಿಗಾರ್ ಅವರ ಅಂಗಡಿ ಛಾವಣಿಯ ಶೀಟ್ ಗಳು ಹಾರಿಹೋಗಿವೆ.