ಬಂಟ್ವಾಳ: ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ ಮಧ್ಯೆಯೇ ನೀರಿನ ಚಿಲುಮೆಯೊಂದು ಉಧ್ಭವಗೊಂಡಿದೆ. ನೀರಿನ ಬುಗ್ಗೆಯಿಂದ ಶುದ್ದ ನೀರು ಹೊರ ಚಿಮ್ಮುತ್ತಿದ್ದು ರಸ್ತೆಯಿಡೀ ಹರಡಿ ವ್ಯರ್ಥವಾಗುತ್ತಿದೆ. ಹಾಗಂತ ಇದು ಉದ್ಭವ ಗಂಗೆಯಲ್ಲ. ಬದಲಾಗಿ ಕುಡಿಯುವ ನೀರಿನ ಪೈಪ್ಲೈನ್ ತೆರವುಗೊಳಿಸದೇ ರಾಷ್ಟ್ರೀಯ ಹೆದ್ದಾರಿ ನಿರ್ಮಿಸಿದ ದುಷ್ಪಾರಿಣಾಮ.

DSC_7728

DSC_7724

DSC_7727
ಬಿ.ಸಿ.ರೋಡಿನ ರಾಷ್ಟ್ರೀಯ ಹೆದ್ದಾರಿ ಮೂಲಕ ಬಂಟ್ವಾಳ ಪುರಸಭೆಯ ಕುಡಿಯುವ ನೀರಿನ ಪೈಪ್ಲೈನ್ ಹಾದು ಹೋಗಿದೆ. ಚತುಷ್ಪಥ ಮೇಲ್ಸೆತುವೆ ನಿರ್ಮಾಣದ ವೇಳೆ ಪೈಪ್ಲೈನ್ ತೆರವುಗೊಳಿಸಬೇಕೆಂದು ಸೂಚನೆ ನೀಡಿದರೂ ನಿರ್ಲಕ್ಷ ವಹಿಸಲಾಗಿತ್ತು. ಕೆಲ ಸಮಯದ ಹಿಂದೆಯಷ್ಟೇ ರೈಲು ಮೇಲ್ಸತುವೆಯನ್ನು  ನಿರ್ಮಿಸಿ ಅದರ ಮೂಲಕ ಹೆದ್ದಾರಿ ಸಂಪರ್ಕ ನೀಡಿದಾಗಲೂ ಪೈಪ್ಲೈನ್ ತೆರವುಗೊಳಿಸಬೇಕು ಎನ್ನುವ ಪ್ರಸ್ತಾಪ ಬಂದಿದ್ದರೂ ತರಾತುರಿಯಲ್ಲಿ ಹೆದ್ದಾರಿ ಕಾಮಾಗಾರಿ ಪೂರ್ತಿ ಗೊಳಿಸಿ ಡಾಮಾರೀಕರಣ ನಡೆಸಲಾಗಿತ್ತು. ಇದೀಗ ಪೈಪ್ಲೈನ್ ಹೊಡೆದು ನೀರು ಹೊರಚಿಮ್ಮುತ್ತಿದ್ದು ವ್ಯರ್ಥವಾಗಿ ಹೋಗುತ್ತಿದೆ. ಇದರಿಂದಾಗಿ ನೂತನವಾಗಿ ನಿರ್ಮಣಗೊಂಡ ರಸ್ತೆಗೆ ಕಂಟಕ ಎದುರಾಗಿದೆ. ಪೈಪ್ಲೈನ್ ದುರಸ್ತಿಗೊಳಿಸ ಬೇಕಾದರೂ ಡಾಮರನ್ನು ಅಗೆಯಬೇಕಿದೆ. ದುರಸ್ತಿಗೊಳಿಸದೇ ಬಿಟ್ಟಲ್ಲಿ ನೀರು ಹರಿದು ಕೆಲವೇ ದಿನಗಳಲ್ಲಿ ಈ ರಸ್ತೆಯಲ್ಲೀ ಹೊಂಡಗಳು ಕಾಣಿಸಿ ಕೊಳ್ಳಲಿದೆ. ಒಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ನಿರ್ಮಿಸುವಾಗ ಪೈಪ್ಲೈನ್ ಬಗ್ಗೆ ಹೆಚ್ಚಿನ ಗಮನ ಹರಿಸದಿರುವ ಪರಿಣಾಮ ಈಗ ತೊಂದರೆ ಪಡುವಂತಾಗಿದೆ.

By suddi9

Leave a Reply

Your email address will not be published. Required fields are marked *