ಮೂಲ್ಕಿ: ನೂತನವಾಗಿ ನಿರ್ಮಾಣಗೊಂಡ ಅತಿಕಾರಿ ಬೆಟ್ಟು ಪಂಚಾಯತಿಯ ಚೊಚ್ಚಲ ಅಧ್ಯಕ್ಷರಾಗಿ ಶಾರದಾ ವಸಂತ್ ಮತ್ತು ಉಪಾಧ್ಯಕ್ಷರಾಗಿ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಆಯ್ಕೆಯಾಗಿದ್ದಾರೆ.
10 ಸದಸ್ಯ ಬಲದ ಅತಿಕಾರಿಬೆಟ್ಟು ಪಂಚಾಯತಿಯ ಚುಣಾಮಣೆಯಲ್ಲಿ ಕಾಂಗ್ರೆಸ್ 6ಸ್ಥಾನಗಳನ್ನು ಮತ್ತು ಬಿಜೆಪಿ 4 ಸ್ಥಾನಗಳನ್ನು ಗಳಿಸಿತ್ತು.
atikari bettu
ಅಧ್ಯಕ್ಷೇಯ ಚುಣಾವಣೆಗಾಗಿ ಕಾಂಗ್ರೆಸ್ ಬೆಂಬಲಿತ ಶಾರದಾ ವಸಂತ್ ಮತ್ತು ಬಿಜೆಪಿ ಬೆಂಬಲಿತ ಕಲಾವತಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ದೆಪ್ಪುಣಿಗುತ್ತು ಕಿಶೋರ್ ಶೆಟ್ಟಿ ಮತ್ತು ಬಿಜೆಪಿ ಬೆಂಬಲಿತ ಜೀವನ್ ಶೆಟ್ಟಿ ನಾಮಪತ್ರ ಸಲ್ಲಿಸಿದರು. ಚುಣಾವಣೆಯಲ್ಲಿ ಶಾರದಾ ವಸಂತ್ ಮತ್ತು ಕಿಶೋರ್ ಶೆಟ್ಟಿ 6-4 ಮತದ ಅಂತರದಲ್ಲಿ ಜಯಶಾಲಿಯಾದರು. ಮಂಗಳೂರು ಯೋಜನಾ ವಿಭಾಗದ ಸಹಾಯಕ ಇಂಜಿನಿಯರ್ ಸೂರ್ಯನಾರಾಯಣ ಚುಣಾವಣೆ ಪ್ರಕ್ರಿಯೆ ನಡೆಸಿದರು.ಅತಿಕಾರಿ ಬೆಟ್ಟು ಪಿಡಿಒ ಯೋಗೀಶ್ ನಾನಿಲ್ ಉಪಸ್ಥಿತರಿದ್ದರು. ಈ ಸಂದರ್ಭ ಕಿಲ್ಪಾಡಿ ಪಂ.ಸದಸ್ಯ ಗೋಪೀನಾಥ ಪಡಂಗ, ಶರೀಪ್ ಕಿಲ್ಪಾಡಿ,ಧನಂಜಯ ಮಟ್ಟು, ಮತ್ತಿತರರು ಹಾಗೂ ಸಾರ್ವಜನಿಕರು ವಿಜೇತರನ್ನು ಅಭಿನಂದಿಸಿದರು.

By suddi9

Leave a Reply

Your email address will not be published. Required fields are marked *