ಹಳೆಯಂಗಡಿ ಗ್ರಾಮ ಪಂಚಾಯತ್ನ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತರಾದ ಜಲಜ ಮತ್ತು ಉಪಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.

Haleangady.jpg
ಕಾಂಗ್ರೆಸ್ ಬೆಂಬಲಿತ 14 ಹಾಗೂ ಬಿಜೆಪಿ ಬೆಂಬಲಿತ 8 ಸದಸ್ಯರಲ್ಲಿ ಬಿ.ಜೆ.ಪಿ ಬೆಂಬಲಿತ ಯಾವುದೇ ನಾಮಪತ್ರ ಬರದ ಹಿನ್ನೆಲೆ ಜಲಜ ಮತ್ತು ಪದ್ಮಾವತಿ ಶೆಟ್ತಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಎನ್.ರಾಜಣ್ಣರವರು ಚುನಾವಣ ಅಧಿಕಾರಿಯಾಗಿದ್ದರು. ಹಳೆಯಂಗಡಿ ಗ್ರಾಮ ಪಂಚಾಯತ್ನ ಪಿಡಿಒ ಅಬೂಬಕ್ಕರ್ ಉಪಸ್ಥಿತರಿದ್ದರು.
ಈ ಸಂದರ್ಭ ಸದಸ್ಯರಾದ ವಸಂತ , ಅಬ್ದುಲ್ ಖಾದರ್, ಚಿತ್ರಾ ಸುರೇಶ್, ಜಲಜಾ, ಹಮೀದ್ ಸಾಗ್, ಅಬ್ದುಲ್ ಬಶೀರ್, ಪದ್ಮಾವತಿ ಶೆಟ್ಟಿ, ಅಬ್ದುಲ್ ಅಜೀಜ್, ಪ್ರವೀಣ್ ಸಾಲ್ಯಾನ್, ಶರ್ಮಿಳಾ ಎಸ್.ಕೋಟ್ಯಾನ್, ಮಾಲತಿ ಡಿ. ಕೋಟ್ಯಾನ್, ಗುಣವತಿ, ಚಂದ್ರಕುಮಾರ್, ಅನಿಲ್ಕುಮಾರ್, ಲೀಲಾ, ವಿನೋದ್ಕುಮಾರ್, ಬೇಬಿ ಸುಲೋಚನಾ, ಜೀವನ್ ಪ್ರಕಾಶ್, ಸುಗಂಧಿ, ಜಯಂತಿ, ಅಶೋಕ್ ಬಂಗೇರ, ಚಿತ್ರಾ ಸುಖೇಶ್ ಚುನಾವಣ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *