ಮೂಡುಬಿದಿರೆ : ಇಲ್ಲಿನ ಪುರಸಭೆಯ ನೂತನ ಅಧ್ಯಕ್ಷೆಯಾಗಿ ರೂಪಾ ಡಿ. ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಪುರಸಭೆಯ ಅಧ್ಯಕ್ಷೆಯಾಗಿದ್ದ ಸುಪ್ರಿಯಾ ಡಿ ಶೆಟ್ಟಿಯವರ 15 ತಿಂಗಳ ಅಧಿಕಾರಾವಧಿ ಮುಗಿದಿದ್ದು ಶುಕ್ರವಾರ ಚುನಾವಣೆ ನಡೆಯಿತು. 16ನೇ ವಿಶಾಲ ನಗರ ವಾರ್ಡ್ ನಿಂದ ಪ್ರತಿನಿಧಿಸಿದ ರೂಪಾ ಡಿ ಶೆಟ್ಟಿಯವರು ಮಾತ್ರ ನಾಮಪತ್ರ ಸಲ್ಲಿಸಿರುವುದರಿಂದ ಅವಿರೋಧವಾಗಿ ಆಯ್ಕೆಯಾದರು. ತಹಸೀಲ್ದಾರ್ ಮಹಮ್ಮದ್ ಇಸಾಕ್ ಚುನಾವಣೆ ನಡೆಸಿಕೊಟ್ಟರು.

mbd_july10_4 (1)

mbd_july10_4 (2)

mbd_july10_4 (3)
ನೂತನ ಅಧ್ಯಕ್ಷೆ ರೂಪಾ ಡಿ ಶೆಟ್ಟಿ ಅವರನ್ನು ಅಭಿನಂದಿಸಿ ಮಾತನಾಡಿದ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಅಭಯಚಂದ್ರ ಜೈನ್ ಮೂಡುಬಿದಿರೆ ಪುರಸಭೆಗೆ ಕುಡಿಯುವ ನೀರು ಒದಗಿಸಲು ಬದಲಿ ಯೋಜನೆಯನ್ನು ರೂಪಿಸಲಾಗುವುದು. ಕಡಲಕೆರೆಯ ಹೂಳೆತ್ತಲು ರಾಜ್ಯ ಸರ್ಕಾರದಿಂದ 1 ಕೋಟಿ ರೂಪಾಯಿ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು ಹಾಗೂ ಜ್ಯೋತಿನಗರದ ಮಹಾತ್ಮಾಗಾಂಧಿ ಪಾರ್ಕನ್ನು ಮಾದರಿಯಾಗಿ ರೂಪಿಲಾಗುವುದು. ಪಾರದರ್ಶಕ ಆಡಳಿತ ನಡೆಸಲು ಸದಸ್ಯರು ಸಹಕರಿಸಬೇಕು ಎಂದರು. ಅಧ್ಯಕ್ಷೆ ರೂಪಾ ಡಿ. ಶೆಟ್ಟಿ ಮಾತನಾಡಿ ಎಲ್ಲಾ ಸದಸ್ಯರ ವಿಶ್ವಾಸವನ್ನು ಪಡೆದು ಉತ್ತಮ ಆಡಳಿತವನ್ನು ನೀಡಲು ಪ್ರಯತ್ನಿಸುತ್ತೇನೆ ಎಂದರು. ನಿರ್ಗಮನ ಅಧ್ಯಕ್ಷೆ ಸುಪ್ರಿಯಾ ಡಿ. ಶೆಟ್ಟಿ ಮಾತನಾಡಿ ತಮ್ಮ ಸೇವಾ ಅವಧಿಯಲ್ಲಿ ಸಹಕರಿಸಿದವರಿಗೆ ಕೃತಜ್ಷತೆ ಸಲ್ಲಿಸಿದರು. ಮೂಡಾದ ಅಧ್ಯಕ್ಷ ಸುರೇಶ್ ಕೋಟ್ಯಾನ್, ಸದಸ್ಯರಾದ ಬಾಹುಬಲಿ ಪ್ರಸಾದ್, ಅನೀಫ್ ಅಲಂಗಾರು, ರಮಣಿ ಪಿ.ಕೆ.ಥೋಮಸ್ ಮಾತನಾಡಿ ಅಭಿನಂದಿಸಿದರು. ಮುಖ್ಯಾಧಿಕಾರಿ ಶೀನಾ ನಾಯ್ಕ್ ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *