ಬಂಟ್ವಾಳ: ಬಂಟ್ವಾಳ ತಾಲ್ಲೂಕಿನ ನಾವೂರು ಗ್ರಾಮದ ಸೂರ ಕ್ವಾಟ್ರಸ್ ಎಂಬಲ್ಲಿ ಬಸ್ ಕ್ಲೀನರ್ ನೇಣಿಗೆ ಶರಣಾದ ಘಟನೆ ಬುಧವಾರ ರಾತ್ರಿ ನಡೆದಿದೆ. ಮೃತರನ್ನು ಇಲ್ಲಿನ ನಿವಾಸಿ ಕೃಷ್ಣಪ್ಪ ಮೂಲ್ಯ(55) ಎಂದು ಗುರುತಿಸಲಾಗಿದ್ದು, ಇವರು ಮಂಗಳೂರಿನಲ್ಲಿ ಬಸ್ ಕ್ಲೀನರ್ ಆಗಿ ದುಡಿಯುತ್ತಿದ್ದರು ಎನ್ನಲಾಗಿದೆ.
ಕಳೆದ 10 ವರ್ಷಗಳ ಹಿಂದೆಯಷ್ಟೇ ಇವರ ಪತ್ನಿ ಅಸೌಖ್ಯದಿಂದ ತೀರಿಕೊಂಡಿದ್ದು, ಇದರಿಂದಾಗಿ ಇವರು ತೀರಾ ಮಾನಸಿಕ ಖಿನ್ನತೆಗೊಳಗಾಗಿದ್ದರು ಎನ್ನಲಾಗಿದೆ.
ಇಬ್ಬರು ಪುತ್ರರು ವಿದೇಶದಲ್ಲಿ ಉದ್ಯೋಗದಲ್ಲಿದ್ದು, ಬುಧವಾರ ರಾತ್ರಿ ತನ್ನ ಮೂರನೇ ಪುತ್ರನೊಂದಿಗೆ ಮನೆಯಲ್ಲಿ ಮಲಗಿದ್ದು ಬೆಳಿಗ್ಗೆ ಮನೆಯ ಮಾಡಿನಲ್ಲಿ ನೇಣು ಹಾಕಿಕೊಂಡಿರುವುದು ಕಂಡು ಬಮದಿದೆ ಎಂದು ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.