ಬಂಟ್ವಾಳ:ಬಂಟ್ವಾಳ ತಾಲೂಕಿನಾದ್ಯಂತ ಈದ್ ಉಲ್-ಫಿತರ್ ಹಬ್ಬವನ್ನು ಶನಿವಾರ ಮುಸ್ಲಿಂ ಬಾಂಧವರು ಸಡಗರದಿಂದ ಆಚರಿಸಿದರು. ಈಲ್ಲಿನ ಫರಂಗಿಪೇಟೆಯ ಮೊಯ್ಯುದ್ದೀನ್ ಜುಮ್ಮಾ ಮಸೀದಿಯಲ್ಲಿ ಅಪಾರ ಸಂಖ್ಯೆಯಲ್ಲಿ ಮುಸ್ಲಿಂ ಬಂಧುಗಳು ಭಾಗವಹಿಸಿ ಪ್ರಾರ್ಥನೆ ಸಲ್ಲಿಸಿದರು. ಮಸೀದಿ ಖತೀಬರಾದ ಉಸ್ಮಾನ್ ದಾರೀಮಿಯವರು ಖುತುಬಾ ನಿರ್ವಹಿಸಿ ಪ್ರವಚನ ನೀಡಿದರು. ಬಳಿಕ ಮುಸ್ಲಿಂ ಬಂಧುಗಳು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

6
1 (1)

3 (1)

2

5

4 (1)
ಈ ಸಂದರ್ಭ ಮಸೀದಿ ಅಧ್ಯಕ್ಷ ಅಹಮ್ಮದ್ ಬಾವಾ, ಉಪಾಧ್ಯಕ್ಷ ಇಬ್ರಾಹಿಂ ಕುಂಪಣ ಮಜಲು, ಕಾರ್ಯದರ್ಶಿ ಯೂಸುಫ್ ಅಲಂಕಾರು, ಜತೆಕಾರ್ಯದರ್ಶಿ, ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಖಜಾಂಚಿ ಮಜೀದ್, ತಾ.ಪಂ.ಸದಸ್ಯ ಆಸೀಫ್ ಇಕ್ಬಾಲ್, ಪ್ರಮುಖರಾದ ಟಿ.ಕೆ.ಬಶೀರ್, ಖಾದರ್ ಪಾವೂರು, ಫೈರೋಜ್ ಎಫ್.ಆರ್., ಇಸ್ಮಾಯಿಲ್ ಪಾವೂರು ಮತ್ತಿತರರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *