ಸುದ್ದಿ9 ಬಂಟ್ವಾಳ : ಕಳೆದ ಹಲವು ದಿನಗಳಿಂದ ಬಿಸಿಲ ಬೇಗೆಯಿಂದ ಬಳಲುತ್ತಿದ್ದ ಜನತೆಗೆ ಮಂಗಳವಾರ ಸಂಜೆ ಗುಡುಗು, ಮಿಂಚು ಸಹಿತ ಸುರಿದ ಮಳೆ ಕೊಂಚ ತಂಪಿನ ಸಿಂಚನ ನೀಡಿತು.
ಮೊದಲ ಗುಡುಗು-ಮಿಂಚಿಗೆ ಬಂಟ್ವಾಳ ಸಮೀಪದ ಲೊರೆಟ್ಟೊ ಎಂಬಲ್ಲಿ ತೆಂಗಿನ ಮರಕ್ಕೆ ಸಿಡಿಲು ಬಡಿದಿದೆ. ಬಳಿಕ ಪಕ್ಕದ ಮನೆಯೊಂದಕ್ಕೆ ಸಿಡಿಲಿನ ಆಘಾತ ತಟ್ಟಿ ಹಾನಿಗೊಂಡಿದೆ ಎಂದು ತಿಳಿದು ಬಂದಿದೆ. ಸಿಡಿಲಿನ ಅಬ್ಬರಕ್ಕೆ ವಿದ್ಯುತ್ ಕೂಡಾ ಕೈಕೊಟ್ಟಿದ್ದು ಕೆಲವೆಡೆ ತಂತಿಗಳು ತುಂಡಾಗಿ ನೆಲಕ್ಕುರುಳಿರುವ ಬಗ್ಗೆಯೂ ಮೆಸ್ಕಾಂ ಮೂಲಗಳು ತಿಳಿಸಿವೆ. ಪರಿಣಾಮ ಪದೇ ಪದೇ ವಿದ್ಯುತ್ ಕಣ್ಣುಮುಚ್ಚಾಲೆಯಾಟ ರಾತ್ರಿವರೆಗೂ ಮುಂದುವರೆದಿತ್ತು. ಬಂಟ್ವಾಳದಲ್ಲಿ ಸಂಜೆ ಕಡಿತಗೊಂಡ ವಿದ್ಯುತ್ ರಾತ್ರಿ ವೆರಗೂ ಮರಳಿ ಬಂದಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.

ಚಿತ್ರ ; ಕಿಶೋರ್ ಪೆರಾಜೆ

bantwala  Rain
bantwala Rain

08 Apr Rain 5

08 Apr Rain 10
ಸಂಜೆ ಸುಮಾರು 5 ರ ವೇಳೆಗೆ ಸುರಿದ ಈ ಅನಿರೀಕ್ಷಿತ ಮಳೆಯಿಂದ ಸಾರ್ವಜನಿಕರು ಅಂಗಡಿ-ಮುಂಗಟ್ಟುಗಳ ಅಡಿಗೆ ಸರಿದು ನಿಂತರು. ಬಿ.ಸಿ.ರೋಡಿನ ಮೇಲ್ಸೇತುವೆಯಡಿ ಜನ ಮಳೆಗೆ ರಕ್ಷಣೆ ಪಡೆಯುತ್ತಿರುವ ದೃಶ್ಯವೂ ಕಂಡು ಬಂತು. ಮೊದಲ ಮಳೆ ನೀರು ಚರಂಡಿಯಲ್ಲಿ ಹರಿಯುವ ಬದಲು ರಸ್ತೆಯಲ್ಲೇ ಹರಿಯುತ್ತಿದ್ದರಿಂದ ಜನಸಾಮಾನ್ಯರು ತೊಂದರೆಪಡುವಂತಾಯಿತು. ಮಳೆರಾಯನ ಆರ್ಭಟದಿಂದ ಪೊಳಲಿ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ 3ನೇ ಚೆಂಡು ಹಾಕಲು ಗದ್ದೆಯಲ್ಲಿ ನೀರು ತುಂಬಿದ ಕಾರಣ ಚೆಂಡನ್ನು ಅಮ್ಮುಂಜೆ ಮತ್ತು ಮಳಲಿ ಕಡೆಯ ಗದ್ದೆಯ ಭಾಗಕ್ಕೆ ತಾಗಿಸಿ ನಿಯಮನುಸಾರವಾಗಿ ಚೆಂಡಿನ ಬಲಿ ನಡೆಯಿತು. ಅಂಗಡಿಗಳಿಗೆ ನೀರು ಬಂದು ವ್ಯಾಪರಸ್ಥರು ತೊಂದರೆ ಅನುಭವಿಸಿದರು.

9 vp polali  jathre

9vp polali

By suddi9

Leave a Reply

Your email address will not be published. Required fields are marked *