ಬಂಟ್ವಾಳ:ಬಂಟ್ವಾಳ ಪುರಸಭಾ ವ್ಯಾಪ್ತಿಯ ಮೆಲ್ಕಾರ್ ರಾಷ್ಟ್ರೀಯ ಹೆದ್ದಾರಿ ಬಳಿ ಈಚೆಗೆ ಸುರಿದ ಭಾರೀ ಮಳೆಗೆ ನೆರೆ ನೀರು ಹರಿದು ಹೋಗಲು ಸೂಕ್ತ ಚರಂಡಿ ಇಲ್ಲದೆ ನೀರಿನ ರಭಸಕ್ಕೆ ಇಲ್ಲಿನ ಮೋರಿಯೊಂದರ ತಡೆಗೋಡೆ ಕುಸಿದು ಬಿದ್ದ ಘಟನೆ ಶುಕ್ರವಾರ ನಡೆದಿದೆ.
24btl-melkar

ಇಲ್ಲಿನ ಮೆಲ್ಕಾರ್-ರೆಂಗೇಲು ಕಾಂಕ್ರೀಟ್ ರಸ್ತೆ ನಿರ್ಮಾಣಕ್ಕಾಗಿ ರಸ್ತೆ ಬದಿ ಹಳೆ ಚರಂಡಿಯನ್ನು ಮುಚ್ಚಲಾಗಿದ್ದು, ಈಚೆಗೆ ಸುರಿದ ಭಾರೀ ಮಳೆ ಮಳೆ ನೀರು ಹರಿದು ಹೋಗಲು ಅವಕಾಶ ಇಲ್ಲದಂತಾಗಿತ್ತು. ಇದರಿಂದಾಗಿ ಇಳಿಮುಖವಾಗಿರುವ ಕಾಂಕ್ರೀಟ್ ರಸ್ತೆ ಕಡೆಗೆ ಕೆಸರು ನೀರು ರಭಸದಿಂದ ಹರಿಯುತ್ತಿತ್ತು. ಇದೀಗ ಮೋರಿ ತಡೆಗೋಡೆ ದಿಢೀರ್ ಕುಸಿತಕ್ಕೀಡಾಗಿದ್ದು, ಇಲ್ಲಿನ ಕಾಂಕ್ರೀಟು ರಸ್ತೆಗೂ ಹಾನಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಪುರಸಭೆ ಮತ್ತು ವಿವಿಧ ಅಧಿಕಾರಿಗಳಿಗೆ ಮೊದಲೇ ಗಮನ ಸೆಳೆಯಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ತುರ್ತಾಗಿ ಸುಸಜ್ಜಿತ ಚರಂಡಿ ನಿರ್ಮಿಸಿ ಕಾಂಕ್ರೀಟು ರಸ್ತೆ ಉಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

By suddi9

Leave a Reply

Your email address will not be published. Required fields are marked *