ಬಂಟ್ವಾಳ : ತುಳುನಾಡ ಸಂಸ್ಕೃತಿಯು ದೇಶ ವಿದೇಶದಲ್ಲಿ ಉತ್ತುಂಗ ಸ್ಥಾನದಲ್ಲಿದ್ದು ತುಳುನಾಡಿನ ರಕ್ಷಣೆಗೆ ಜಾತಿ-ಮತ-ಧರ್ಮ ಭೇದವಿಲ್ಲದೆ ಎಲ್ಲರೂ ಒಂದಾಗಬೇಕು. ಯುಗಾದಿ ಹಬ್ಬದಂತಹ ಆಚರಣೆಗಳ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಯಪಡಿಸಬೇಕು ಎಂದು ಮಿಸ್ಟರ್  ವರ್ಲ್ಡ್ ಖ್ಯಾತಿಯ ರೇಮಂಡ್ ಡಿಸೋಜಾ ಅವರು ಹೇಳಿದರು.
ತುಳುನಾಡ ರಕ್ಷಣಾ ವೇದಿಕೆ ಪುಂಜಾಲಕಟ್ಟೆ ಘಟಕದ ಆಶ್ರಯದಲ್ಲಿ ಪುಂಜಾಲಕಟ್ಟೆಯ ಬಂಗ್ಲೆ ಮೈದಾನದಲ್ಲಿ ಎ.3ರಂದು ಜರಗಿದ ಯುಗಾದಿ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

yugadi habba
yugadi habba

ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುನಾಡಿಗೆ ಒದಗುವ ವಿಪತ್ತುಗಳನ್ನು ದೂರೀಕರಿಸುವ ನಿಟ್ಟಿನಲ್ಲಿ ರಕ್ಷಣಾ ವೇದಿಕೆ ಸಂಪೂರ್ಣವಾಗಿ ಕಾಯರ್ಾಚರಿಸುತ್ತಿದ್ದು ಎತ್ತಿನಹೊಳೆ ಯೋಜನೆಯ ಹೆಸರಿನಲ್ಲಿ ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಸಿ ಅದರ ವಿರುದ್ಧ ಯೋರಾಟ ನಡೆಸುತ್ತಿದ್ದೇವೆ. ಈ ಎಲ್ಲಾ ಕಾರ್ಯಗಳಿಗೆ ಅವಿಭಜಿತ ಜಿಲ್ಲೆಗಳಲ್ಲಿರುವ ಘಟಕಗಳಿಗೆ ಶಕ್ತಿ ತುಂಬಲು ತುಳುವರು ಸಹಕರಿಸಬೇಕು ಎಂದು ಹೇಳಿದರು. ರಾಜ್ಯ ಹಿಂದುಳಿದ ಆಯೋಗದ ಸದಸ್ಯ ಎಂ.ತುಂಗಪ್ಪ ಬಂಗೇರ, ಬೆಳ್ತಂಗಡಿ ಕುಲಾಲ ಸಂಘದ ಅಧ್ಯಕ್ಷ ಪದ್ಮಮೂಲ್ಯ ಅನಿಲಡೆ, ವೃದ್ಧಿ ಕ್ರೆಡಿಟ್ ಸೌಹಾರ್ಧ ಸಹಕಾರಿ ಅಧ್ಯಕ್ಷ ವಿನಯ ನಾಯಕ್, ಉದ್ಯಮಿಗಳಾದ ಗಣೇಶ್ ಶೆಟ್ಟಿ , ಪುರುಷೋತ್ತಮ ಶೆಟ್ಟಿ ಬಾರೆಕ್ಕಿನಡೆ, ಮಡಂತ್ಯಾರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕಿಶೋರ್ ಶೆಟ್ಟಿ ಮುಡಯೂರು, ಪ್ರಗತಿಪರ ಕೃಷಿಕ ದಿವಾಕರ ಶೆಟ್ಟಿ ಕಂಗಿತ್ತಿಲು, ಮಡಂತ್ಯಾರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ ರಾಜಶೇಖರ್ ಶೆಟ್ಟಿ , ರಕ್ಷಣಾ ವೇದಿಕೆ ಗೌರವಾಧ್ಯಕ್ಷ ಜೇಮ್ಸ್ ಸುನಿಲ್ ಅಂಚನ್, ಹರೀಶ್ ಶೆಟ್ಟಿ ಪಡೀಲ್ಬೆಟ್ಟು , ಪ್ರವೀಣ್ ಶೆಟ್ಟಿ ಕುಡ್ರಮೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿದ, ನಾಟಕ ರಚನಾಕಾರ ಎಚ್ಕೆ ನಯನಾಡು ಮತ್ತು ಮೀನುಗಾರಿಕಾ ಸೂಕ್ಷ್ಮಾಣು ಜೀವಿಶಾಸ್ತ್ರ ಪಿ.ಎಚ್.ಡಿ.ಪದವೀಧರ ಡಾ|ಪ್ರವೀಣ್ ರೈ ಕುಡರ್ುಮೆ ಅವರನ್ನು ಸಮ್ಮಾನಿಸಲಾಯಿತು.
ಕಾರ್ಯದರ್ಶಿ  ಉದಯ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಅಧ್ಯಕ್ಷ ರಮೇಶ್ ಶೆಟ್ಟಿ ಮಜಲೋಡಿ ವಂದಿಸಿದರು. ಎಚ್ಕೆ ನಯನಾಡು ಕಾರ್ಯಕ್ರಮ ನಿರೂಪಿಸಿದರು. ಬಳಿಕ ಎಲ್ಯ ವಿಷಯ ಮಲ್ಲ ಮಲ್ಪೊಡ್ಚಿ ಎಂಬ ನಾಟಕ ಪ್ರದರ್ಶನ ನಡೆಯಿತು

By suddi9

Leave a Reply

Your email address will not be published. Required fields are marked *