ಬಂಟ್ವಾಳ : ಕಡೇಶಿವಾಲಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ಕ್ಯಾಂಪ್ಕೋ ಅಡಿಕೆ ಖರೀದಿ ಕೇಂದ್ರ ಶಾಖೆಯ ಉದ್ಘಾಟನೆಯನ್ನು ಹಿರಿಯ ಕೃಷಿಕ ಎಸ್. ಅನಂತರಾಮ ರಾವ್ ಸಂಪೆÇೀಳಿ ದೀಪ ಬೆಳಗಿಸಿ ನೆರವೇರಿಸಿದರು.

ವಾರದ ಮೂರು ದಿನ ಅಂದರೆ ಸೋಮವಾರ, ಬುಧವಾರ, ಶುಕ್ರವಾರ ಅಡಿಕೆ ಖರೀದಿ ವ್ಯವಸ್ಥೆ ಇರುವುದಾಗಿ ಸಂಘದ ಅಧ್ಯಕ್ಷ ವಿದ್ಯಾಧರ ರೈ ತಿಳಿಸಿದರು. ಸ್ಥಳೀಯರ ಅಡಿಕೆ ಬೆಳೆಗಾರರ ಬೇಡಿಕೆಯಂತೆ ಈ ವ್ಯವಸ್ಥೆ ಮಾಡಿದ್ದು ಇದರ ಪ್ರಯೋಜನ ಪಡೆಯುವಂತೆ ಮನವಿ ಮಾಡಿದ್ದಾರೆ.
ಸಹಕಾರಿ ಸಂಸ್ಥೆಯ ಉಪಾಧ್ಕಕ್ಷ ಆನಂದ ಪಾಪೆತ್ತಿಮಾರು,ಗ್ರಾ.ಪಂ. ಅಧ್ಯಕ್ಷೆ ಶ್ಯಾಮಲಾ ಶೆಟ್ಟಿ, ಎಪಿಎಂಸಿ ಅಧ್ಯಕ್ಷ ಸಾಂತಪ್ಪ ಪೂಜಾರಿ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.