ಕಿನ್ನಿಗೋಳಿ: ಯಕ್ಷ ಲಹರಿಯಂತಹ ಸಂಸ್ಥೆ ಮಳೆಗಾಲದಲ್ಲೂ ಕಲಾವಿದರಿಗೆ ತಾಳ ಮದ್ದಳೆಯಂತಹ ಕಾರ್ಯಕ್ರಮದಲ್ಲಿ ಬಾಗವಹಿಸುವ ಅವಕಾಶ ಕಲ್ಪಿಸಿ ಕಲೆ ಮತ್ತು ಕಲಾವಿದರನ್ನು ಉಳಿಸಿ ಬೆಳೆಸುವ ಕೆಲಸವನ್ನು ಮಾಡುತ್ತಿದ್ದು ಒಂದು ಮಾದರಿ ಸಂಸ್ಥೆಯಾಗಿದೆ ಎಂದು ಮುಲ್ಕಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಲಯನ್ ದೇವ ಪ್ರಸಾದ್ ಪುನರೂರು ಹೇಳಿದರು ಅವರು ಮಂಗಳವಾರ ಕಿನ್ನಿಗೋಳಿ ಯುಗಪುರುಷ ಸಭಾಭವನದಲ್ಲಿ ಕಿನ್ನಿಗೋಳಿಯ ಯಕ್ಷಲಹರಿ ಮತ್ತು ಯುಗಪುರುಷ ಆಶ್ರಯದಲ್ಲಿ ನಡೆಯುತ್ತಿರುವ ಯಕ್ಷಲಹರಿ ಸಂಸ್ಥೆಯ ರಜತ ಸಂಭ್ರಮ ಆಚರಣೆ ಕರ್ಣಾಟಕ ಬ್ಯಾಂಕ್ ಪ್ರಧಾನ ಪ್ರಾಯೋಜಕತ್ವದಲ್ಲಿ ತಾಳಮದ್ದಳೆ ದಶಾಹಃ ಯತೋಧರ್ಮ: ತತೋಜಯ: ಐದನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಗುರುರಾಜ್ ಭಟ್ ಮಾತನಾಡಿ 25 ವರ್ಷಗಳ ಯಕ್ಷ ಲಹರಿಯ ಸಾಧನೆ ಅಬಿನಂದನಾರ್ಹವಾಗಿದೆ, ಯುಗಪುರುಷ ಎಂಬ ಬಾನಂಗಳದಲ್ಲಿ ಯಕ್ಷಲಹರಿ ಎಂಬ ನಕ್ಷತ್ರ ನಿರಂತರ ಮಿನುಗುತಿರಲಿ ಎಂದರು ಈ ಸಂದರ್ಭ ಆಡ್ ಮ್ಯಾಟ್ರಿಕ್ಸ್ ಸುರತ್ಕಲ್ ನ ಶ್ರೀ ಗುರುರಾಜ್ ಉಡುಪ ಮತ್ತು ಕಿನ್ನಿಗೋಳಿ ಗುತ್ತಕಾಡು ಶ್ರೀ ಮೂಕಾಂಬಿಕ ದೇವಸ್ಥಾನದ ಧರ್ಮದರ್ಶಿ ವಿವೇಕಾನಂದರವರನ್ನು ಸನ್ಮಾನಿಸಲಾಯಿತು ಈ ಸಂದರ್ಭ ಪುನರೂರು ವಿಪ್ರ ಸಂಪದದ ಅಧ್ಯಕ್ಷರಾದ ಶ್ರೀ ಸುರೇಶ್ ರಾವ್ ನೀರಳಿಕೆ, ಉದ್ಯಮಿ ಶ್ರೀಪತಿ ಭಟ್, ಯುಗಪುರುಷದ ಪ್ರಧಾನ ಸಂಪಾದಕ ಕೆ. ಭುವನಾಭಿರಾಮ ಉಡುಪ, ,ಕಾರ್ಯದರ್ಶಿ ಪಿ.ಸತೀಶ ರಾವ್,ಉಪಸ್ಥಿತರಿದ್ದರು.
ಪಿ ಸತೀಶ್ ರಾವ್ ಸ್ವಾಗತಿಸಿದರು. ವೈ ಕ್ರಷ್ಣರಾಜ ಭಟ್ ಮತ್ತು ವಿನಯ್ ಆಚಾರ್ ಪ್ರಶಸ್ತಿ ಪತ್ರ ವಾಚಿಸಿದರು ವಸಂತ ದೇವಾಡಿಗ ನಿರೂಪಿಸಿ ವಂದಿಸಿದರು.