ಮೂಡುಬಿದರೆ: ತವರು ಮನೆಯಿಂದ ಗಂಡನ ಮನೆಗೆ ಹೋಗುತ್ತೇನೆಂದು ಹೋದ ಮಹಿಳೆಯೊಬ್ಬಳು ಕಾಣೆಯಾದ ಪ್ರಕರಣ ಮೂಡುಬಿದರೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ವಾಲ್ಪಾಡಿ ಗ್ರಾಮದ ಕಲ್ಲಗುಡ್ಡೆ ದರ್ಖಾಸು ಮನೆಯ ಸುಮತಿ ಎಂಬವರ ಪುತ್ರಿ, ಕಾರ್ಕಳ ಮಿಯಾರಿನ ಅನಿಲ್ ಎಂಬವರ ಪತ್ನಿ ಅಶ್ವಿನಿ (21 ವ.) ಎಂಬಾಕೆ ಕಾಣೆಯಾದವಳು. ಅಗಸ್ಟ್ 2 ರಂದು ತನ್ನ ತಾಯಿ ಮನೆಯಿಂದ ತನ್ನ ಗಂಡನ ಮನೆಗೆ ಹೋಗುತ್ತೇನೆಂದು ಹೇಳಿ ಹೋದವಳು ಗಂಡನ ಮನೆಗು ಹೋಗದೆ ಮರಳಿ ತವರು ಮನೆಗೂ ಬಾರದೇ ಕಾಣೆಯಾಗಿದ್ದಾಳೆಂದು ಅಗಸ್ಟ್ 4 ರಂದು ಮೂಡುಬಿದರೆ ಪೊಲೀಸ್ ಠಾಣೆಗೆ ಆಕೆಯ ತಾಯಿ ದೂರು ನೀಡಿದ್ದರು.
ಚಹರೆ ಇಂತಿವೆ:
ಸುಮಾರು 4 ಅಡಿ ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ದಪ್ಪ ಶರೀರ ಹೊಂದಿರುವ ಈಕೆ ಬಿಳಿ ಬಣ್ಣದ ಕಪ್ಪು ಕೆಂಪು ಚುಕ್ಕೆಗಳಿರುವ ಟಾಪ್ ಮತ್ತು ಕೆಂಪು ಕಪ್ಪು ಬಣ್ಣದ ಕಪ್ಪು ಚುಕ್ಕೆಗಳಿರುವ ಪ್ಯಾಂಟ್ ಧರಿಸಿರುತ್ತಾಳೆ. 8ನೇ ತರಗತಿ ವಿದ್ಯಾಭ್ಯಾಸ ಮಾಡಿದ್ದು ಕನ್ನಡ, ತುಳು ಮಾತನಾಡುತ್ತಾಳೆ.
ಈಕೆ ಸುಳಿವು ಸಿಕ್ಕಲ್ಲಿ ಸಾರ್ವಜನಿಕರು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:
ಪೊಲೀಸು ಆಯುಕ್ತರು: 0824-2220801; 2220800.
ಮೂಡುಬಿದರೆ ಪೊಲೀಸ್ ಠಾಣೆ- 08258-236333.
ಪೊಲೀಸು ನಿರೀಕ್ಷಕರು-9480802314.