ಸುದ್ದಿ9ಬಂಟ್ವಾಳ : ತಾಲೂಕು ಕುಕ್ಕಿಪಾಡಿ ನೇಲ್ಯಕುಮೇರು ಯುವ ಫ್ರೆಂಡ್ಸ್ ಬಳಗ ಇದರ ಉದ್ಘಾಟನಾ ಕಾರ್ಯಕ್ರಮ ಎ.11ರಂದು ನೇಲ್ಯಕುಮೇರು ಮೈದಾನದಲ್ಲಿ ಜರಗಿತು.
ಕುಕ್ಕಿಪಾಡಿ ಸಂತ ಬಾರ್ತಲೋಮಿಯ ಹಿ.ಪ್ರಾ.ಶಾಲೆಯ ನಿವೃತ್ತ ಶಿಕ್ಷಕಿ ಮಾಸರ್ೆಲಿನ್ ಎಫ್. ಡಿಕೋಸ್ತ ಅವರು ದೀಪ ಬೆಳಗಿಸಿ ನೂತನ ಯುವಕ ಸಂಘವನ್ನು ಉದ್ಘಾಟಿಸಿ ಮಾತನಾಡಿ ಯುವಕರು ಯುವಕ ಸಂಘಗಳಲ್ಲಿ ತೊಡಗಿಸಿಕೊಂಡು ಸಮಾಜಸೇವೆಯ ಕಾರ್ಯ ಮಾಡಬೇಕು. ಸಮಾಜಮುಖಿ ಉತ್ತಮ ಕಾರ್ಯಗಳಿಂದ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಬೆಳವಣಿಗೆ ಹೊಂದಬೇಕು ಎಂದು ಶುಭ ಹಾರೈಕೆ ಮಾಡಿದರು. ಚಲನಚಿತ್ರ ಹಾಸ್ಯ ನಟ ಅರವಿಂದ ಬೋಳಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಿನಿಮಾ ಛಾಯಾಗ್ರಾಹಕ ರಾಜೇಶ್ ಹಳೆಯಂಗಡಿ, ತುಳು ಚಲನಚಿತ್ರ ನಿಮರ್ಾಪಕ ಅಶೋಕ್ ಹಲಾಯಿ, ಉದ್ಯಮಿ ವಾಲ್ಟರ್ ಡಿಸೋಜ, ರಂಗಭೂಮಿ ಕಲಾವಿದೆ ನಳಿನಿ, ಪತ್ರಕರ್ತ ರತ್ನದೇವ್ ಪುಂಜಾಲಕಟ್ಟೆ ಉಪಸ್ಥಿತರಿದ್ದರು. ಯುವಕ ಸಂಘದ ಅಧ್ಯಕ್ಷ ನಿತಿನ್ ಕುಮಾರ್, ಪ್ರ.ಕಾರ್ಯದಶರ್ಿ ಶ್ರೀಧರ, ಕೋಶಾದಿಕಾರಿ ಫೈಜಲ್ ಮತ್ತಿತರ ಪದಾದಿಕಾರಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಮಾಸರ್ೆಲಿನ್ ಎಫ್. ಡಿಕೋಸ್ತ ಅವರನ್ನು ಸಮ್ಮಾನಿಸಲಾಯಿತು.
ಜತೆ ಕೋಶಾಧಿಕಾರಿ ಪ್ರದೀಪ್ ಸ್ವಾಗತಿಸಿದರು. ಕಾರ್ಯದಶರ್ಿ ರಂಜಿತ್ ಪ್ರಸ್ತಾವಿಸಿದರು. ಕು|ಶೈಲಾ ನಾಯಕ್ ವಂದಿಸಿದರು.
ಬಳಿಕ ಸ್ಥಳೀಯ ಮಕ್ಕಳಿಂದ ನೃತ್ಯ ವೈಭವ, ಕೊಯಿಲ ಗುರುಗಣೇಶ್ ತಂಡದವರಿಂದ ತೆಲಿಕೆದ ಪುಳಿಮುಂಚಿ ಎಂಬ ಹಾಸ್ಯ ಪ್ರಹಸನ ಮತ್ತು ತುಳು ಕಿರು ಚಲನಚಿತ್ರ ಪೂರ ಪೊಕ್ಕಡೆ ಪ್ರದರ್ಶನ ನಡೆಯಿತು.
