ಬಂಟ್ವಾಳ : ರಾಷ್ಟ್ರಭಕ್ತಿಯಿಂದ ರಾಜಕಾರಣವು ಶುದ್ಧವಾಗಬೇಕು ಹಾಗಾದರೆ ಭಾರತಮಾತೆ ಜಗಜ್ಜನನಿಯಾಗುತ್ತಾಳೆ ಎಂದು ರಾಷ್ಟ್ರ ಪ್ರಶಸ್ತಿ ವಿಜೇತ ನಿವೃತ್ತ ಡೆಪ್ಯೂಟಿ ಕಮಾಂಡೆಂಟ್ , ಬಿ.ಎಸ್.ಎಫ್ ಬೆಂಗಳೂರು ಮತ್ತು ನಿವೃತ್ತ ಬಿ.ಎಸ್.ಎಫ್ ಯೋಧರ ಸೇವಾ ಅಭಿವೃದ್ಧಿ ಸಂಘದ ಕರ್ನಾಟಕ ರಾಜ್ಯಾಧ್ಯಕ್ಷ ಡಿ.ಚಂದಪ್ಪ ಮೂಲ್ಯ ನುಡಿದರು. ಅವರು ಹಿಂದೂ ಜಾಗರಣಾ ವೇದಿಕೆ ಬಂಟ್ವಾಳ ತಾಲೂಕು ಇದರ ಆಶ್ರಯದಲ್ಲಿ ಬಿ.ಸಿ.ರೋಡ್ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆದ ಅಖಂಡ ಭಾರತ ಸಂಕಲ್ಪ ದಿನದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹನುಮ ಶಕ್ತಿಯ ಪ್ರೇರಣೆಯಿಂದ ದೇಶ ಸೇವೆ ಮಾಡುವ ಸಂಕಲ್ಪ ನಮ್ಮದಾಗಲಿ ಎಂದು ರಾ ಷ್ಟ್ರೀಯ ಸ್ವಯಂ ಸೇವಕ ಸಂಘದ ಮಡಿಕೇರಿ ಜಿಲ್ಲಾ ಸಂಪರ್ಕ ಪ್ರಮುಖ್ ಸೋಮೇಶ್ ಮಡಿಕೇರಿ ದಿಕ್ಸೂಚಿ ಭಾಷಣಗೈದರು.
ಕಡಬ ಜಿಲ್ಲಾ ಸಂಚಾಲಕ ರವಿರಾಜ್ ಶೆಟ್ಟಿ ಪ್ರಸ್ತಾವನೆಗೈದರು. ವೇದಿಕೆಯಲ್ಲಿ ಹಿ.ಜಾ. ವೇ.ಮಂಗಳೂರು ವಿಭಾಗ ಸಂಚಾಲಕ ರವಿರಾಜ್ ಬಿ.ಸಿ.ರೋಡ್, ಗೌರವಾಧ್ಯಕ್ಷ ವಿಠಲ ಅಲ್ಲಿಪಾದೆ , ಹಿ.ಜಾ. ವೇ.ಅಧ್ಯಕ್ಷ ಜಗದೀಶ ನೆತ್ತರೆಕೆರೆ , ಸಂಚಾಲಕ ಚಂದ್ರ ಕಲಾಯಿ ಉಪಸ್ಥಿತರಿದ್ದರು. ತಾಲೂಕು ಸಹಸಂಚಾಲಕ ಸಂತೋಷ್ ನೆತ್ತರೆಕೆರೆ ಸ್ವಾಗತಿಸಿದರು. ರಮೇಶ್ ವಗ್ಗ ವಂದಿಸಿ , ಸಂದೀಪ್ ಕಾಮಾಜೆ ಕಾರ್ಯಕ್ರಮ ನಿರೂಪಿಸಿದರು. ಕೈಕಂಬ ಪೊಳಲಿ ದ್ವಾರದ ಬಳಿಯಿಂದ ಹೊರಟು ಬಿ.ಸಿ.ರೋಡ್ ವಿವೇಕಾನಂದ ವೃತ್ತವಾಗಿ ತಾಲೂಕು ಕಚೇರಿ ಮುಂಭಾಗದ ವರೆಗೆ ಪಂಜಿನ ಮೆರವಣಿಗೆ ಜರಗಿತು.

