ಬಂಟ್ವಾಳ: ತಾಲೂಕು ಕುಲಾಲ ಸುಧಾಕರ ಸಂಘ(ರಿ)ಮಯ್ಯರಬೈಲು ಇದರ ವತಿಯಿಂದ ಪಿಯುಸಿಯ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುವ, ಆಯ್ಕೆ ಮಾಡಲ್ಪಟ್ಟ ಸ್ವಜಾತಿಯ ವಿದ್ಯಾರ್ಥಿಗಳಿಗೆ ಪಿಯುಸಿ ಪದವಿ ಹಾಗೂ ಡಿಪ್ಲೋಮ ವ್ಯಾಸಂಗದ ಕೊನೆಯ ವರ್ಷದವರೆಗೆ ಪ್ರತಿವರ್ಷ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ತಾಲೂಕಿನ ವ್ಯಾಪ್ತಿಯಲ್ಲಿ ವಾಸ್ತವ್ಯವಿದ್ದು, ಬಡ ಕುಟುಂಬದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 70ಕ್ಕಿಂತ ಅಧಿಕ ಅಂಕ ಪಡೆದಿರುವ ವಿದ್ಯಾರ್ಥಿಗಳು, ವಾರ್ಷಿಕ ಪರೀಕ್ಷೆಯ ಅಂಕ ಪಟ್ಟಿಯ ಪ್ರತಿ, ಪ್ರಸ್ತುತ ವ್ಯಾಸಂಗ ಸಂಸ್ಥೆಯ ವ್ಯಾಸಂಗ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರದ ಪ್ರತಿ, ಪಡಿತರ ಚೀಟಿಯ ಪ್ರತಿ, ಭಾವಚಿತ್ರ, ದೂರವಾಣೆ ಸಂಖ್ಯೆ ಹಾಗೂ ಹೆತ್ತವರ ಸಹಿಯೊಂದಿಗೆ ಸಪ್ಟಂಬರ್ 10 ರ ಒಳಗೆ ಸಂಘದ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಲು ಪ್ರಕಟನೆ ತಿಳಿಸಿದೆ.