ಬಂಟ್ವಾಳ:ಬಂಟ್ವಾಳ ತಾಲ್ಲೂಕಿನ ನೈನಾಡು ಸರ್ಕಾರಿ ಪ್ರೌಢಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಸ್ಥಳೀಯ ದಾನಿಗಳ ವತಿಯಿಂದ ಶನಿವಾರ ಹೊಸ ಧ್ವಜಸ್ತಂಭ ಸಮರ್ಪಿಸಲಾಯಿತು. ಇದೇ ವೇಳೆ ಧ್ವಜಸ್ತಂಭ ಕೊಡುಗೆ ಸಲ್ಲಿಸಿದ ಸ್ಥಳೀಯ ಉದ್ಯಮಿ ಹರೀಂದ್ರ ಟಿ.ಪೈ ಮತ್ತು ನೀತಾ ಪಿಂಟೋ ಇವರನ್ನು ಮುಖ್ಯಶಿಕ್ಷಕ ಅಶೋಕ್ ಕುಮಾರ್ ಅಭಿನಂದಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಇನಾಸ್ ರೋಡ್ರಿಗಸ್, ಪಿಲಾತಬೆಟ್ಟು ಗ್ರಾಮ ಪಂಚಾಯಿತಿ ಸದಸ್ಯರಾದ ಲಕ್ಷ್ಮೀನಾರಾಯಣ ಹೆಗ್ಡೆ, ಸುಮಿತ್ರ, ರಾಜೀವಿ, ಸರೋಜ ಶೆಟ್ಟಿ, ಪ್ರಮುಖರಾದ ಹರೀಶ ಶೆಟ್ಟಿ, ಹರೀಶ ಪೂಜಾರಿ, ಪುಷ್ಪರಾಜ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
