ಸಜೀಪನಡು ದ.ಕ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದ.ಕ ಜಿಲ್ಲಾ ವಕ್ಫ್ ಬೋರ್ಡ್ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ, ಇವರಿಂದ ವಿಶಿಷ್ಟ ಸ್ವಾತಂತ್ರ್ಯೊತ್ಸವ,


ಸಜೀಪನಡು ದ.ಕ.ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅದ್ಯಾಪಕರಾಗಿ ಸೇವೆಯನ್ನು ಸಲ್ಲಿಸಿದಂತಹ ಪೂವಪ್ಪ ಬಂಡಾರಿ ಯವರ ಪುತ್ರರಾದ ಪ್ರಾಯ ಸುಮಾರು 70 ವರ್ಷದವರಾದ ಉಮೇಶ ಭಂಡಾರಿಯವರು ವೃತ್ತಿಯಲ್ಲಿ ಕ್ಷೌರಿಕರಾಗಿದ್ದು ಸುಮಾರು 49 ವರ್ಷ ಸಜೀಪನಡುವಿನಲ್ಲಿ ಕ್ಷೌರಿಕರಾಗಿ ಒಂದೇ ಊರಿನಲ್ಲಿ ದುಡಿದು ಅದರೊಂದಿಗೆ ಬಡವರಿಗೆ ಉಚಿತವಾಗಿ ಕ್ಷೌರವನ್ನು ಮಾಡುತ್ತಾ ಅಲ್ಲದೇ ಪ್ರತೀ ಸ್ವಾತಂತ್ರ್ಯ ದಿನಾಚರಣೆಯಂದು ಶಾಲೆಯ ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸುತ್ತಾ ತನ್ನ ಧೇಶ ಪ್ರೇಮವನ್ನು ಮೆರೆಯುತ್ತಿದ್ದ ಶ್ರೀಯುತ ಉಮೇಶ ಭಂಡಾರಿಯವರು ಕೆಳತಿಂಗಳ ಹಿಂದೆ ರಸ್ತೆ ಅಪಘಾತಕ್ಕೆ ತುತ್ತಾಗಿ ತನ್ನ ಕೈ ಕಾಲುಗಳಿಗೆ ಆದ ವಿಪರೀತ ಪೆಟ್ಟಿನಿಂದ ಇನ್ನೂ ಚೇತರಿಸದೇ ಮನೆಯಲ್ಲಿ ತನಗಾದ ಅಘಾತ ಮತ್ತು ಬಡತನದಿಂದ ಬಳಲುತ್ತಿದ್ದು, ಇದನ್ನು ಗಮನಿಸಿದ ದ.ಕ ಜಿಲ್ಲಾ ವಕ್ಫ್ ಬೋಡರ್್ ಇದರ ಉಪಾಧ್ಯಕ್ಷರಾದ ಎಸ್.ಅಬೂಬಕ್ಕರ್ ಸಜೀಪ ಇವರು ಉಮೇಶ ಭಂಡಾರಿಯವರ ಮನೆಗೆ ತನ್ನ ಸಂಘಡಿಗರೊಂದಿಗೆ ತೆರಳಿ ಅವರನ್ನು ಸನ್ಮಾನಿಸಿ ಗೌರವವನ್ನು ನೀಡುವ ಮುಖಾಂತರ ಅಲ್ಲಿಯೇ ಸ್ವಾತಂತ್ರ್ಯೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಿದರು, ಅವರು ಉಮೇಶ್ ಭಂಡಾರಿಯವರಿಗೆ ಧೇಶದಮೇಲೆ ಇದ್ದಂತಹ ಪ್ರೇಮ ಮತ್ತು ಅವರು ನೀಡುತ್ತಿದ್ದ ಕೊಡುಗೆಗಳನ್ನು ನೆನಪಿಸುತ್ತಾ ಉಮೇಶ್ ಭಂಡಾರಿಯವರು ಶೀಘ್ರ ಗುಣಮುಖರಾಗಳೆಂದು ಹಾರೈಸಿದರು, ಈ ಸಂಧರ್ಭದಲ್ಲಿ ಸಜೀಪಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ವೆಂಕಟ್ರಮಣ ಭಟ್, ಸಜೀಪನಡು ಪಂಚಾಯತ್ ಸದಸ್ಯರಾದ ರಫೀಕ್ ಗೋಳಿಪಡ್ಪು, ಪಂಚಾಯತ್ ಮಾಜಿ ಅಧ್ಯಕ್ಷರಾದ ಸೋಮನಾಥ್ ಭಂಡಾರಿ, ಮಾಜಿ ಸದಸ್ಯರಾದ ಸತ್ತಾರ್ ಹಾಜಿ, ಗೋಳಿಪಡ್ಪು ಜುಮ್ಮಾ ಮಸೀದಿಯ ಮಾಜಿ ಅಧ್ಯಕ್ಷರಾದ ರಝಾಕ್, ಸಜೀಪನಡು ವಲಯ ಕಾಂಗ್ರೆಸ್ ಅಧ್ಯಕ್ಷರಾದ ಬಶೀರ್ ಬೋಲಮೆ,ಹಾಗೂ ಮನ್ಸೂರ್ ಸಜಿಪ, ಹನೀಫ್ ಸಜೀಪ, ಹಬೀಬ್ ಸಜೀಪ, ತ್ವಾಹಿರ್ ಗೋಳಿಪಡ್ಪು, ಅಬ್ದುಲ್ ರಹಿಮಾನ್, ಫೈಝಲ್, ಹನೀಫ್ ಗೋಳಿಪಡ್ಪು, ಎಸ್.ಕೆ ಅಬ್ದುಲ್ ರಹಿಮಾನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.