ಬಂಟ್ವಾಳ: ಪುರಸಭೆಗೆ ಒಳಪಟ್ಟ ಪರ್ಲಿಯಾ ನರ್ಸಿಂಗ್ ಹೋಮ್‍ನಿಂದ ಮದ್ದಕ್ಕೆ ಹೋಗುವ ರಸ್ತೆ, ಕೈಕಂಬ ಮೀನು ಮಾರುಕಟ್ಟೆಯಿಂದ ಮದ್ದಕ್ಕೆ ಹಾದುಹೋಗುವ ರಸ್ತೆ ಹಾಗೂ ಪರ್ಲಿಯಾ ನರ್ಸಿಂಗ್ ಹೋಮ್‍ನಿಂದ ಪರ್ಲಿಯಕ್ಕೆ ಹೋಗುವ ಮುಖ್ಯ ರಸ್ತೆಗಳು ಕಳೆದ ಹಲವಾರು ವರ್ಷಗಳಿಂದ ಸಂಪೂರ್ಣವಾಗಿ ಕೆಟ್ಟು ಹೋಗಿದ್ದು ಸಾರ್ವಜನಿಕರಿಗೆ ಸಂಚರಿಸಲು ಅಯೋಗ್ಯವಾಗಿದೆ ಎಂದು ಆರೋಪಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬಂಟ್ವಾಳ ಕ್ಷೇತ್ರ ಸಮಿತಿ ಮತ್ತು ಸಾರ್ವಜನಿಕರ ವತಿಯಿಂದ ಪ್ರತಿಭಟನಾ ರೂಪವಾಗಿ ಶ್ರಮದಾನ ಕಾರ್ಯಕ್ರಮ ನಡೆಯಿತು. ಅ ಮೂಲಕ ರಸ್ತೆ ದುರಸ್ತಿ ಕಾರ್ಯವನ್ನು ಮಾಡಲಾಯಿತು.
3 (1)

1 (1)

2ಮಾತ್ರವಲ್ಲದೆ ಈ ಎಲ್ಲಾ ರಸ್ತೆಯಲ್ಲಿ ದಾರಿದೀಪ ಹಾಗೂ ಸಮರ್ಪಕ ಚರಂಡಿ ವ್ಯವಸ್ಥೆಯ ಕೊರತೆಯಿದ್ದು ಪ್ರಸ್ತುತ ಪ್ರದೇಶದ ನಿವಾಸಿಗಳು ಇದರಿಂದಾಗಿ ಹಲವಾರು ರೀತಿಯ ತೊಂದರೆಗಳನ್ನು ಅನುಭವಿಸುತ್ತಿದ್ದಾರೆ. ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಈ ವಿಚಾರವಾಗಿ ಹಲವಾರು ಬಾರಿ ಪುರಸಭೆಗೆ ಮತ್ತು ಸಂಬಂದ ಪಟ್ಟ ಇಲಾಖೆಗೆ ಮನವಿ ನೀಡಿದ್ದರೂ ಕೂಡ ಯಾವುದೇ ರೀತಿಯ ಸ್ಪಂದನೆ ದೊರೆತಿಲ್ಲ. ಈ ನಿಟ್ಟಿನಲ್ಲಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಪ್ರತಿಭಟನೆಯ ರೂಪದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಸೇರಿಸಿಕೊಂಡು ಶ್ರಮದಾನವನ್ನು ನಡೆಸಿ ಪುರಸಭಾ ಸದಸ್ಯರಿಗೆ ಎಚ್ಚರಿಕೆಯನ್ನು ನೀಡಿದರು.
ಅವ್ಯವಸ್ಥೆಯನ್ನು ಸರಿಪಡಿಸುವಂತೆ ಒತ್ತಾಯಿಸಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾವು ಪ್ರದೇಶದ ನಿವಾಸಿಗಳ ಹಸ್ತಾಕ್ಷರ ಸಂಗ್ರಹ ಅಭಿಯಾನವನ್ನು ನಡೆಸಿದ್ದು ಅದನ್ನು ಸಂಬಂದಪಟ್ಟವರಿಗೆ ನೀಡಲಿದ್ದಾರೆ. ರಸ್ತೆಗಳ ಕಾಂಕ್ರೀಟೀಕರಣ ಹಾಗೂ ಇತರ ಅವ್ಯವಸ್ಥೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸಬೇಕೆಂದು ಮನವಿಯ ಮೂಲಕ ಮೂಲಕವಾಗಿ ವಿನಂತಿಸಿದ್ದಾರೆ. ಕೂಡಲೇ ಈ ರಸ್ತೆಗೆ ಕಾಂಕ್ರೀಟಿಕರಣ ಮತ್ತು ಮೂಲಭೂತ ಸೌಕರ್ಯವನ್ನು ಒದಗಿಸದಿದ್ದಲ್ಲಿ ಉಗ್ರವಾದ ಹೋರಾಟವನ್ನು ಮಾಡುವುದಾಗಿ ಎಚ್ಚರಿಸಿದ್ದಾರೆ. ಬಂಟ್ವಾಳ ಕ್ಷೇತ್ರ ಸಮಿತಿ ಅಧ್ಯಕ್ಷ ಮುಸ್ತಾಕ್ ಅನ್ಸಾರ್ ಮತ್ತು ಆಶೀಕ್ ಹಾಗೂ ಪಾರ್ಟಿಯ ಸದಸ್ಯರು ಹಾಜರಿದ್ದರು.

By suddi9

Leave a Reply

Your email address will not be published. Required fields are marked *