ಕಿನ್ನಿಗೋಳಿ:ಖ್ಯಾತ ಹವ್ಯಾಸಿ ಯಕ್ಷಗಾನ ಕಲಾವಿದ ಸಂಘಟಕ ಯಕ್ಷಲಹರಿ ಕಿನ್ನಿಗೋಳಿ ಸಂಸ್ಥೆಯ ಅಧ್ಯಕ್ಷ ಶ್ರೀನಿವಾಸ್ ಭಟ್ (೬೫) ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಇಂದು ನಿಧನರಾದರು,
srinivas bhat
ಹಲವಾರು ವರ್ಷಗಳಿಂದ ಯಕ್ಷಗಾನ ಮತ್ತು ಯಕ್ಷಗಾನ ತಾಳ ಮದ್ದಳೆಗಳಲ್ಲಿ ಪಾತ್ರ ನಿರ್ವಹಿಸಿದ್ದು, ಈ ವರ್ಷ ರಜತ ಸಂಭ್ರಮವನ್ನು ಆಚರಿಸಿದ ಯಕ್ಷಲಹರಿ ಕಿನ್ನಿಗೋಳಿಯ ಅಧ್ಯಕ್ಷ ಸ್ಥಾನದಲ್ಲಿದ್ದು ರಜತೋತ್ಸವದ ಯಶ್ವಸಿಗಾಗಿ ಸಾಕಷ್ಟು ಶ್ರಮಿಸಿದ್ದರು, ಕಿನ್ನಿಗೋಳಿ ಲಯನ್ಸ್ ಕ್ಲಬ್, ಮಣಿಪಾಲ ಸಮೂಹ ಸಂಸ್ಥ್ಜೆಗಳ ಮಣಿಪಾಲ್ ಪೈನೆನ್ಸ್ ನಲ್ಲಿ ಪ್ರಭಂಧಕರಾಗಿ ಅಧಿಕಾರಿಯಾಗಿ ದುಡಿದಿದ್ದರು, ಮುಂಡ್ಕೂರು ಮೇಳ ಮತ್ತು ಇನ್ನಿತರ ಸಂಘ ಸಂಸ್ಥೆಗಳಲ್ಲಿ ಯಕ್ಷಗಾನ ಸ್ರೀ ಮತ್ತು ಪುರುಷ ಪಾತ್ರದಾರಿಯಾಗಿ ಸಾಕಷ್ಟು ಪ್ರಸಿದ್ದಿಯನ್ನು ಪಡೆದಿದ್ದರು, ಇವರು ಮಗಳು ಟೀವಿ ನಿರೂಪಕಿ ದೀಪ್ತಿ ಬಾಲಕ್ರಷ್ಣ ಭಟ್ , ಪತ್ನಿ ಪದ್ಮಾವತಿ ಶಿಕ್ಷಕಿ ಮತ್ತು ಒರ್ವ ಪುತ್ರನನ್ನು ಅಗಲಿದ್ದಾರೆ, ಇವರ ನಿಧನಕ್ಕೆ ಹಲವಾರು ಗಣ್ಯರು ಸಂತಾಪ ಸೂಚಿಸಿದ್ದಾರೆ.

By suddi9

Leave a Reply

Your email address will not be published. Required fields are marked *