ಬಂಟ್ವಾಳ,ಆ.21:ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಕಾರಿಗಳ ಕಛೇರಿ ಬಂಟ್ವಾಳ ಇದರ ಉಲ್ಲೇಖ (1)ರಂತೆ 2015-16ನೇ ಸಾಲಿನಲ್ಲಿ ಹೊಸದಾಗಿ ಮಂಜೂರು ಆಗಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿ ನಿಲಯ ವಾಮದಪದವು ಚೆನ್ನೈತ್ತೋಡಿ ಬಂಟ್ವಾಳ ತಾಲೂಕು ವಿದ್ಯಾರ್ಥಿ ನಿಲಯವನ್ನು ಆ.19ರಂದು 100 ಸಂಖ್ಯಾಬಲದ ವಿದ್ಯಾರ್ಥಿನಿಯರ ನಿಲಯವನ್ನುಪ್ರಾರಂಭಿಸಲಾಗಿದೆ.

ಪ್ರವರ್ಗ-1 ಮತ್ತು ಪರಿಶಿಷ್ಟ ಜಾತಿ , ಪರಿಶಿಷ್ಟ ಪಂಗಡಗಳ ವಾರ್ಷಿಕ ಆದಾಯ 2.50ಲಕ್ಷ ಹಾಗೂ ವರ್ಗ 2ಎ, 2ಬಿ, 3ಎ,3ಬಿ, ವಿದ್ಯಾರ್ಥಿನಿಯರ ವಾರ್ಷಿಕ ಆದಾಯ 1.ಲಕ್ಷ ಮಿತಿಯೊಳಗಿರಬೇಕು.
ಆರ್ಹತೆ ಹೊಂದಿರುವ ವಿದ್ಯಾರ್ಥಿಗಳನ್ನು ಅರ್ಜಿಯನ್ನು ಜಾತಿ ಆದಾಯ ಪ್ರಮಾಣ ಜಾತಿ ಆದಾಯ ಪ್ರಮಾಣ ಪತ್ರ ಹಿಂದಿನ ವರ್ಷದ ತೇರ್ಗಡೆ ಹೊಂದಿರುವ ಬಗ್ಗೆ ಅಂಕಪಟ್ಟಿ , ವ್ಯಾಸಂಗ ಧೃಢೀಕರಣ ಪತ್ರದೊಂದಿಗೆ ಸೆ.5ರ ಒಳಗೆ ಸಂಬಧಪಟ್ಟ ನಿಲಯದ ನಿಲಯ ಪಾಲಕರಿಗೆ ಅಥಾವಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಕಾರಿಗಳ ಕಛೇರಿ ತಾಲೂಕು ಪಂಚಾಯತ್ ಬಂಟ್ವಾಳ ಇಲ್ಲಿಗೆ ಸಲ್ಲಿಸಲು ಸೂಚಿಸಿದೆ.

By suddi9

Leave a Reply

Your email address will not be published. Required fields are marked *