ಕಿನ್ನಿಗೋಳಿ: ಪ್ರಾಥಮಿಕ ಶಾಲಾ ಹಂತದಲ್ಲಿ ಎಳೆಯ ಕ್ರೀಡಾಳುಗಳನ್ನು ಗುರುತಿಸಿದರೆ ಮುಂದಿನ ಹಂತದಲ್ಲಿ ಉತ್ತಮ ಸಾಧನೆ ತೋರಲು ಪ್ರೇರಣೆ ನೀಡಿದಂತಾಗುವುದೆಂದು ಯುಗಪುರುಷದ ಸಂಪಾದಕ ಕೊಡೆತ್ತೂರು ಭುವನಾಭಿರಾಮ ಉಡುಪ ಹೇಳಿದರು.
kinnigoli kabhadiಅವರು ಶುಕ್ರವಾರ ಲಿಟ್ಲ್ ಫ್ಲವರ್ ಶಾಲಾ ಮೈದಾನದಲ್ಲಿ ಪ್ರಾಥಮಿಕ ಶಾಲಾ ವಿಬಾಗದ ಕಬಡ್ಡಿಯಲ್ಲ್ಲಿ ಕಾರ್ಕಳ ತಾಲೂಕು ಮಟ್ಟಕ್ಕೆ ಆಯ್ಕೆಯಾದ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಮಂಗಳೂರು ತಾಲೂಕು ಮಟ್ಟಕ್ಕೆ ಆಯ್ಕೆಯಾದ ಲಿಟ್ಲ್ ಫ್ಲವರ್ ಶಾಲೆಯ ಕಬಡ್ಡಿ ತಂಡದ ಆಟಗಾರರನ್ನು ರೋಟರ್ಯಾಕ್ಟ್ ವತಿಯಿಂದ ಗೌರವಿಸಿ ಮಾತನಾಡಿದರು.
ರೋಟರ್ಯಾಕ್ಟ್ ಅಧ್ಯಕ್ಷ ಜಾಕ್ಸನ್,ಕಾರ್ಯದರ್ಶಿ ವಿಜೇತ್ ಸಿಕ್ವೇರಾ,ಲಿಟ್ಲ್ ಫ್ಲವರ್ ಶಾಲೆಯ ಮುಖ್ಯೋಪಾದ್ಯಾಯಿನಿ ಭಗಿನಿ ಅರುಣಾ,ಶಿಕ್ಷಕ ರೆಹಮಾನ್,ಪ್ರೌಢಶಾಲಾ ಶಿಕ್ಷಕ ನಾಗರಾಜ್,ತರಬೇತುದಾರರಾದ ನಿತಿನ್,ರವಿ,ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ದೈಹಿಕ ಶಿಕ್ಷಕಿ ಮಮತಾ ಶೆಟ್ಟಿ,ಎಸ್‍ಡಿಎಂಸಿ ಅಧಕ್ಷ ಬಾಸ್ಕರ ಪೂಜಾರಿ,ಸದಸ್ಯ ದೀಪಕ್, ತರಬೇತುದಾರರಾದ ಸುನಿಲ್, ಅನಿಲ್, ಮಂಜುನಾಥ, ಹರೀಶ್ ಮತ್ತಿತರರಿದ್ದರು.ಶರತ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ರೆಹಮಾನ್ ವಂದಿಸಿದರು.
ಬಳಿಕ ಮುಂಡ್ಕೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಹಾಗೂ ಲಿಟ್ಲ್ ಫ್ಲವರ್ ಶಾಲೆಯ ಕಬಡ್ಡಿ ತಂಡದ ನಡುವೆ ಸೌಹಾರ್ದ ಪಂದ್ಯ ನಡೆಯಿತು.

By suddi9

Leave a Reply

Your email address will not be published. Required fields are marked *