ಬಂಟ್ವಾಳ:ಸಹಕಾರ ಭಾರತಿ ಬಂಟ್ವಾಳ ಮತ್ತುಕಲ್ಲಡ್ಕರೈತರ ಸೇವಾ ಸಹಕಾರಿ ಸಂಘದಆಶ್ರಯದಲ್ಲಿ ಗೋಳ್ತಮಜಲು, ಅಮ್ಟೂರು, ಬಾಳ್ತಿಲ,ವೀರಕಂಭ.ಬೋಳಂತೂರು ಗ್ರಾಮ ಪಂಚಾಯತ್ ಸದಸ್ಯರುಗಳಿಗೆ,ಹಾಲು ಉತ್ಪಾದಕರ ಸಹಕಾರ ಸ0ಘಗಳ ನಿರ್ದೇಶಕರುಗಳಿಗೆ, ಕಲ್ಲಡ್ಕರೈತರ ಸೇವಾ ಸಹಕಾರ ಸಂಘದ ನಿರ್ದೇಶಕರುಗಳಿಗೆ ಹಾಗೂ ಗ್ರಾಮ ವಿಕಾಸದ ಆಸಕ್ತರುಗಳಿಗೆ 1 ದಿನದಅಭ್ಯಾಸವರ್ಗವು ಆ.16ರಂದು ಭಾನುವಾರ ಕಲ್ಲಡ್ಕ ಪಂಚವಟಿ ವಾಣಿಜ್ಯ ಸಂಕೀರ್ಣದ “ಪದ್ಮಾವತಿಕಲ್ಯಾಣ ಮಂಟಪ” ದಲ್ಲಿಜರಗಿತು.


ಕಾರ್ಯಕ್ರಮವನ್ನು ಮಾಜಿ ಶಾಸಕರಾದಎ.ರುಕ್ಮಯ ಪೂಜಾರಿಯವರು ಉದ್ಘಾಟಿಸಿ ಸಹಕಾರಿ ಸ0ಘಗಳು ಗ್ರಾಮ ಪಂಚಾಯತ್ ಸದಸ್ಯರು ಸಮಾಜದ ಒಳಿತಿಗೆ ಯಾವರೀತಿ ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಮಾಹಿತಿ ನೀಡಿ ಶುಭ ಹಾರೈಸಿದರು. ಸ0ಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ಸದ.ಕ.ಜಿಲ್ಲಾ ಹಾಲು ಉತ್ಪಾದಕರಒಕ್ಕೂಟದ ನಿರ್ದೇಶಕರಾದಡಾ|| ಕೆ.ಎಂ. ಕೃಷ್ಣ ಭಟ್ಇವರು ಹೈನುಗಾರಿಕೆ ಸಮಾಜಕ್ಕೆ ಹೇಗೆ ಪೂರಕ ಮತ್ತು ಸಹಕಾರಿ ಸಂಘಗಳ ನಿರ್ದೇಶಕರುಗಳು ನಾಗರಿಕ ಸಮಾಜದ ಒಳಿತಿಗೆ ಹೇಗೆ ತೊಡಗಿಸಿಕೊಳ್ಳಬಹುದೆಂಬ ಬಗ್ಗೆ ಮಾರ್ಗದರ್ಶನ ಮಾಡದರು. ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾದ ಸಹಕಾರ ಭಾರತಿಯರಾಜ್ಯ ಸಂಚಾಲಕರಾದ ಎಸ್.ಆರ್.ಸತೀಶ್ಚಂದ್ರಇವರು ಸಹಕಾರಿ ಸಂಘಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸಿದಾಗ ಸಮಾಜದಉನ್ನತಿಗೆ ಹೇಗೆ ಸಹಕಾರಿಯಾಗಬಹುದು ಮತ್ತು ಜನಪ್ರತಿಧಿಗಳು ಮತ್ತು ಸಹಕಾರಿ ಸಂಘಗಳ ನಿರ್ದೇಶಕರುಜಂಟಿಯಾಗಿ ಸಮಾಜದಅಭಿವೃದ್ದಿಗೆಯಾವರೀತಿ ತೊಡಗಿಸಿಕೊಳ್ಳಬಹುದು ಎಂಬ ಬಗ್ಗೆ ಸವಿವರವಾದ ಮಾಹಿತಿಯನ್ನು ನೀಡಿದರು. ಕೊನೆಯಲ್ಲಿ ವಿಧಾನಪರಿಷತ್ ಸದಸ್ಯರಾದಕೋಟ ಶ್ರೀನಿವಾಸ ಪೂಜಾರಿಯವರುಗ್ರಾ.ಪಂ.ಸದಸ್ಯರಜವಾಬ್ದಾರಿ ಮತ್ತು ಕರ್ತವ್ಯಗಳ ಬಗ್ಗೆ ಮಾಹಿತಿ ನೀಡಿಆಸಕ್ತರಿಗೆ ಪ್ರಶ್ನೋತ್ತರ ಮಾಡುವ ಮೂಲಕ ಸೂಕ್ತ ಮಾಹಿತಿ ನೀಡಿದರು. ಕಲ್ಲಡ್ಕರೈತರ ಸೇವಾ ಸಹಕಾರಿ ಸಂಘದಅಧ್ಯಕರು ಮಾಜಿ ಶಾಸಕರಾದ ಕೆ.ಪದ್ಮನಾಭಕೊಟ್ಟಾರಿಯವರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಭೆಯಲ್ಲಿ ಜಿ.ಪಂ.ಸದಸ್ಯರಾದಚೆನ್ನಪ್ಪಕೋಟ್ಯಾನ್, ಗೋಳ್ತಮಜಲು ಪಂಚಾಯತ್ಅಧ್ಯಕ್ಷರಾದಜಯಲಕ್ಷ್ಮೀ ಭಟ್, ಕಲ್ಲಡ್ಕರೈತರ ಸೇವಾ ಸಹಕಾರಿ ಸಂಘದಉಪಾಧ್ಯಕ್ಷರಾದ ಸುಧಾಕರರೈ ಬೋಳಂತೂರು, ನಿರ್ದೇಶಕರುಗಳಾದ ಜಯರಾಮರೈ, ವೆಂಕಟ್ರಾಯ ಪ್ರಭು, ಪೂವಪ್ಪಟೈಲರ್, ಮೀನಾಕ್ಷಿ, ಮೃಣಾಲಿನಿ ಸಿ ನಾಯಕ್, ಲೋಕಾನಂದ, ಗಿರಿಯಪ್ಪಗೌಡ,ಕೊರಗಪ್ಪ ನಾಯ್ಕ. ಮಂಗಿಲಪದವು ಹಾಲು ಉತ್ಪಾದಕರ ಸಹಕಾರಿ ಸಂಘದಅಧ್ಯಕ್ಷರಾದರೋಹಿತಾಕ್ಷ ಭಂಗ ಉಪಸ್ಥಿತರಿದ್ದರು. ಕು ಅನುಷ್ಸಾ ನಾಯ್ಕ್ ಪ್ರಾರ್ಥನೆ ಮಾಡಿ ಗೋಳ್ತಮಜಲು ಪಂ.ಸದಸ್ಯರಾದರಾಜೇಶ್ಕೊಟ್ಟಾರಿಯವರುಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಮಾಡಿದರು.
