ಬಂಟ್ಟಾಳ : ಕಲ್ಲಡ್ಕ ಶ್ರೀ ರಾಮ ಪದವಿ ಕಾಲೇಜಿನ ಪ್ರಭಾಸ ಮಾನವಿಕ ಸಂಘದ ವತಿಯಿಂದ ನಡೆದ ಭಾರತೀಯ ಸೇನೆ ಮತ್ತು ರಕ್ಷಣಾ ಪಡೆಯ ಎಂಬ ವಿಷಯದ ಬಗ್ಗೆ ಯುವಬ್ರಿಗೇಡ್‍ಯರ್ ಮಹಾರಕ್ಷಕ ವಿಭಾಗದ ರಾಜ್ಯ ಸಂಚಾಲಕರಾದ ಸುಮುಖ ಬೆಲಗೇರಿ ಇವರು ಮಾಹಿತಿ ನೀಡಿ ಮಾತಾನಾಡಿದ ಅವರು ಕರ್ನಾಟಕದಿಂದ 100 ವಿದ್ಯಾರ್ಥಿಗಳನ್ನು ಸೇನೆಗೆ ಸೇರಿಸುವುದು ಯುವಬ್ರಿಗೇಡ್‍ಯರ್‍ನ ಮುಖ್ಯ ಗುರಿಯಗಿದೆ. ದೇಶ ಕಟ್ಟುವ, ದೇಶದ ರಕ್ಷಣೆಗೆ ಯುವಪೀಳಿಗೆಯು ಮುಂದಾಗಬೇಕು ಎನ್ನುವುದೇ ನಮ್ಮ ತಂಡದ ಉದ್ಧೇಶ ಎಂದರು.

ಈ ಸಂದರ್ಭದಲ್ಲಿ ಯುವ ಬ್ರಿಗೇಡಿಯರ್‍ನ ಸದ್ಯಸರುಗಳಾದ ಹೇಮಂತ್ ಕುಮಾರ್, ಸಮಿತ್ ರಾವ್, ಮೋಹನ್‍ಕುಮಾರ್, ಪಾಲಾಕ್ಷ ಉಪಸ್ಥಿತರಿದ್ದರು. ಇತಿಹಾಸ ಉಪನ್ಯಾಸಕಿ ರೇಕಾ ಸ್ವಾಗತಿಸಿ, ವಂದಿಸಿದರು.