ಜೈ ಶಕ್ತಿ ಮಿತ್ರ ಮಂಡಳಿ ಇರಾ ಇದರ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಶಮಾನೋತ್ಸವದ ಪ್ರಯುಕ್ತ `ಕೆಸರ್ಡೊಂಜಿ ಗೌಜಿ ಗಮ್ಮತ್ತ್’ ಇರಾ ಬಾವಬೀಡು ಗದ್ದೆಯಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಒಡಿಯೂರಿನ ಶ್ರೀ ಗುರುದೇವಾ ಗ್ರಾಮವಿಕಾಸ ಯೋಜನೆಯ ಪ್ರ.ಸಂಚಾಲಕ ತಾರಾನಾಥ ಕೊಟ್ಟಾರಿ ಉದ್ಘಾಟಿಸಿದರು. ಜೈ ಶಕ್ತಿ ಮಿತ್ರ ಮಂಡಳಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ದಶಮಾನೋತ್ಸವದ ಸಮಿತಿ ಅಧ್ಯಕ್ಷ ಹರೀಶ್ ಇರಾ ಅಧ್ಯಕ್ಷತೆ ವಹಿಸಿದ್ದರು.


ಪ್ರಗತಿಪರ ಕೃಷಿಕ ರಾಜೇಶ್ ನಾಕ್ ಉಳಿಪಾಡಿಗುತ್ತು, ಉದ್ಯಮಿ ಸತ್ಯಪಾಲ್ ರೈ ಕಡೆಂಜ, ಭಗವತೀ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸದಾಶಿವ ಉಳ್ಳಾಲ್, ಕೋಸ್ಟಲ್ ಗ್ರೂಫ್ ಮಂಗಳೂರು ಮ್ಯಾನೆಜರ್ ವೈ.ಬಿ.ಸುಂದರ್, ಪ್ರಗತಿಪರ ಕೃಷಿಕ ವೇಣುಗೋಪಾಲ ಭಂಡಾರಿ, ಜಿಲ್ಲಾ ಪಂಚಾಯತ್ ಸದಸ್ಯ ಸಂತೋಷ್ ಕುಮಾರ್ ರೈ ಬೋಳ್ಯಾರ್, ಉದ್ಯಮಿ ವಿಜೇಶ್ ನಾಕ್ ನಾರ್ಯನಡಿಗುತ್ತು, ಜೈಶಕ್ತಿ ಮಿತ್ರ ಮಂಡಳಿ ಇರಾ ಅಧ್ಯಕ್ಷ ವರದರಾಜ್ ಎಂ.ಎಲದರಬಾವ ಮುಂತಾದವರು ಉಪಸ್ಥಿತರಿದ್ದರು. ಕುಸಲ್ದರಸೆ ನವೀನ್ ಡಿ.ಪಡೀಲ್, `ಸೂಪರ್ ಮರ್ಮಯೆ’ ಚಿತ್ರದ ನಾಯಕ ರಾಘವೇಂದ್ರ ರೈ ಮುಖ್ಯ ಅತಿಥಿಗಳಾಗಿದ್ದರು.
ವಾಲಿಬಾಲ್, ಹಗ್ಗಜಗ್ಗಾಟ, ಪಿರಮಿಡ್ ರಚನೆ, ತಪ್ಪಂಗಾಯಿ, ತ್ರೋಬಾಲ್, ಹಗ್ಗಜಗ್ಗಾಟ, ಸಂಗೀತ ಕುಚರ್ಿ ಸೇರಿದಂತೆ ಮಕ್ಕಳಿಗೆ ವಿವಿಧ ಸ್ಪರ್ಧೆಗಳು ಹಾಗೂ ವೈಯಕ್ತಿಕ ಸ್ಪರ್ಧೆಗಳು ದಿನಪೂರ್ತಿ ಕೆಸರಿನ ಗದ್ದೆಯಲ್ಲಿ ನಡೆಯಿತು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಇರಾ ಗ್ರಾ.ಪಂ. ಸದಸ್ಯ ಗೋಪಾಲ ಅಶ್ವತ್ಥಡಿ ಅಧ್ಯಕ್ಷತೆ ವಹಿಸಿದ್ದರು. ಇರಾ ಗ್ರಾ.ಪಂ. ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ತುಂಬೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರವೀಣ್ ಬಿ.ತುಂಬೆ, ಬಂಟ್ವಾಳ ತಾಲೂಕು ಪಂಚಾಯತ್ ಅಧ್ಯಕ್ಷ ಯಶವಂತ ಡಿ.ದೇರಾಜೆ, ಪ್ರಮುಖರಾದ ಪ್ರಸಾದ್ ರೈ ಕಲ್ಲಿಮಾರ್, ಸದಾನಂದ ಆಳ್ವ ಅಕರ್ುಲ, ಹರೀಶ್ ಇರಾ, ವರದರಾಜ ಎಂ. ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಯತಿರಾಜ್ ಶೆಟ್ಟಿ ಸಂಪಿಲ, ದಿನೇಶ್ ಇರಾ, ವೈ.ಬಿ.ಸುಂದರ್, ನಾಗೇಶ್ ಪೂಜಾರಿ ಕುರಿಯಾಡಿ ಕಾರ್ಯಕ್ರಮ ನಿರೂಪಿಸಿದರು.




