ಮೂಡುಬಿದರೆ: ಪುಟಾಣಿಗಳಲ್ಲಿ ಪ್ರತಿಭೆಗಳಿದ್ದರು ವೇದಿಕೆಗೆ ಬರಲು ಹಿಂಜರಿಕೆಯಿರುತ್ತದೆ. ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿ ಪ್ರತಿಭಾ ಪ್ರದರ್ಶನಕ್ಕೆ ಪ್ರೋತ್ಸಾಹ ನೀಡಬೇಕು ಎಂದು ಮೂಡುಬಿದರೆ ಆರೋಗ್ಯ ಇಲಾಖೆಯ ಸುಶೀಲ ಹೇಳಿದರು.
ಮಾರ್ಪಾಡಿ ಗ್ರಾಮದ ಮರಿಯಾಡಿ ಅಂಗನವಾಡಿ ಕೇಂದ್ರದಲ್ಲಿ ಗುರುವಾರ ನಡೆದ ಮುದ್ದುಕೃಷ್ಣ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಅಂಗನವಾಡಿ ಕೇಂದ್ರದ ಪುಟಾಣಿಗಳು ಸ್ಪರ್ಧೆಯನ್ನು ಉದ್ಘಾಟಿಸಿದರು. ಆರೋಗ್ಯ ಇಲಾಖೆಯ ಕಾರ್ಯಕರ್ತ ನಟರಾಜ್, ನಡ್ಯೋಡಿ ಮಹಿಳಾ ಮಂಡಲದ ಸ್ಥಾಪಕ ಅಧ್ಯಕೆ ಗೀತಾ ಪಿ. ಶೆಟ್ಟಿ, ನಡ್ಯೋಡಿ ಪ್ರಾಥಮಿಕ ಶಾಲೆಯ ಮುಖ್ಯೋಪಧ್ಯಾಯಿನಿ ಕಸ್ತೂರಿ, ಶಿಕ್ಷಕಿ ವಿಶಾಲಾಕ್ಷಿ, ಎಸ್ಡಿಎಂಸಿ ಅಧ್ಯಕ್ಷ ರಮೇಶ ಪೂಜಾರಿ, ಪತ್ರಕರ್ತ ಪ್ರಸನ್ನ ಹೆಗ್ಡೆ, ತೀರ್ಪುಗಾರರಾದ ಕಾಂತಿ ಜಿ. ಭಟ್, ಪ್ರಜ್ಞಾ.ಬಿ. ಪಾಲ್ತಾಡಿ ಮತ್ತಿತರರು ಇದ್ದರು. ಅಂಗನವಾಡಿ ಶಿಕ್ಷಕಿ ಹೇಮಾವತಿ.ಆರ್ ಪೂಜಾರಿ ಸ್ವಾಗತಿಸಿದರು. ನಿವೃತ್ತ ಶಿಕ್ಷಕ ಪಾಲ್ತಾಡಿ ಭಾಸ್ಕರ ಆಚಾರ್ಯ ನಿರೂಪಿಸಿದರು.