ಮೂಡುಬಿದಿರೆ: ಶಿಕ್ಷಕರು ಜ್ಞಾನದಾಹಿಗಳಾಗಬೇಕು. ನಿರಂತರ ಕಲಿಕೆ ಅವರ ವೃತ್ತಿಯ ಒಂದು ಭಾಗವಾಗಬೇಕು. ಶಿಕ್ಷಕರ ವೃತ್ತಿಪರತೆ ರಾಷ್ಟ್ರ ನಿರ್ಮಾಣಕ್ಕೆ ಕೊಡುಗೆಯಾಗುತ್ತದೆ ಎಂದು ನಿವೃತ್ತ ಶಿಕ್ಷಕ ಎಂ. ಬಾಬು ಶೆಟ್ಟಿ ನಾರಾವಿ ಹೇಳಿದರು.

5mood exelent (2)ಎಕ್ಸಲೆಂಟ್ ಕಾಲೇಜು ಕಲ್ಲಬೆಟ್ಟು ಇಲ್ಲಿ ಶನಿವಾರ ನಡೆದ ಶಿಕ್ಷಕಕರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸರ್ಕಾರ ಪ್ರಶಸ್ತಿ ಕೊಟ್ಟ ಮಾತ್ರಕ್ಕೆ ಶಿಕ್ಷಕ ಸಮುದಾಯದ ಸಮಸ್ಯೆ ಪರಿಹಾರವಾಗುವುದಿಲ್ಲ. ಶಿಕ್ಷಕರ ಮೂಲ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಬಾಬು ಶೆಟ್ಟಿ ಸಹಿತ ನಿವೃತ್ತ ಶಿಕ್ಷಕರಾದ ಮಲ್ಲಿಪಾಡಿ ನಮಿರಾಜ ಹೆಗ್ಡೆ, ಜನಾರ್ಧನ ಜೋಯಿಸ್, ನಿರಂಜನ ಕುಮಾರ್ ಶೆಟ್ಟಿ ಅವರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಅಧ್ಯಕ್ಷತೆ ವಹಿಸಿದರು. ಮಂಡ್ಯದ ಕೃಷಿ ಅಧಿಕಾರಿ ಎಸ್. ಪಾಂಡುರಾಜ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಯು.ಜೈನ್, ಹೈಸ್ಕೂಲ್ ಮುಖ್ಯೋಪಧ್ಯಾಯ ಪ್ರದೀಪ್ ಕುಮಾರ್, ಉಪಸ್ಥಿತರಿದ್ದರು. ಪ್ರಾಚಾರ್ಯ ಸುರೇಶ್ ಬಾಬು ಸ್ವಾಗತಿಸಿದರು. ಆಡಳಿತಾಧಿಕಾರಿ ಶೃತಕೀರ್ತಿರಾಜ್ ಸನ್ಮಾನಿತರ ಪರಿಚಯ ಮಾಡಿದರು. ರಂಜಿತ್ ಜೈನ್ ನಿರೂಪಿಸಿದರು. ಗಣೇಶ ಹೆಗಡೆ ವಂದಿಸಿದರು.

By suddi9

Leave a Reply

Your email address will not be published. Required fields are marked *