ಬಂಟ್ವಾಳ: ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶ ನೀಡಿದ ಮಹನ್ ದಾರ್ಶನಿಕ ಬ್ರಹ್ಮಶ್ರೀ ನಾರಾಯಣಗುರುವನ್ನು ಕೇರಳದಲ್ಲಿ ಸೆ. 5ರಂದು ನಡೆದ ಶ್ರೀ ಕೃಷ್ಣಜನ್ಮಾಷ್ಠಮಿಯ ಆಚರಣೆ ಮಾಡಿದ್ದ ಸಿಪಿಐ(ಎಂ) ಪಕ್ಷ ಮೆರವಣಿಗೆಯಲ್ಲಿ ಸ್ತಬ್ದಚಿತ್ರದಲ್ಲಿ ನಾರಾಯಣ ಗುರುವಿನ ವೇಷಧಾರಿಯ್ನನ್ನು ಶಿಲುಬೆಗೆ ಏರಿಸಿದ ದೃಶ್ಯ ಮತ್ತು ಅವರ ಬಗ್ಗೆ ಅಸಂಬದ್ದವಾಗಿ ಸಂದೇಶವನ್ನು ಬರೆದಿದ್ದ ಬಗ್ಗೆ, ನಾರಾಯಣ ಗುರುವನ್ನು ಈ ರೀತಿ ಕೆಟ್ಟದಾಗಿ ಅವಮಾನಿಸಿರುವುದನ್ನು ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯು ಸಿಪಿಐ(ಎಂ) ಪಕ್ಷದ ಈ ನೀಚಕೃತ್ಯವನ್ನು ತೀವ್ರವಾಗಿ ಖಂಡಿಸಿದೆ.

ಈ ಬಗ್ಗೆ ತನಿಖೆ ನಡೆಸಿ ಕಾನೂನುಕ್ರಮ ಕೈಗೊಳ್ಳಬೇಕಾಗಿ, ಸಿಪಿಐ(ಎಂ) ಪಕ್ಷವು ಜನತೆಯಲ್ಲಿ ಕ್ಷಮೆಯಾಚನೆ ಮಾಡುವಂತೆ ಬಿಜೆಪಿ ಬಂಟ್ವಾಳ ಕ್ಷೇತ್ರ ಸಮಿತಿಯು ಒತ್ತಾಯಿಸಿದೆ. ಇಲ್ಲದಿದ್ದಲ್ಲಿ ಜಿಲ್ಲಾ ಬಂದ್ಗೆ ಕರೆ ನೀಡುವುದಾಗಿ ಎಚ್ಚರಿಸಿ ಬಂಟ್ವಾಳ ತಾಲೂಕು ತಹಶೀಲ್ದಾರರ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭ ಬಿಜೆಪಿಯ ಪ್ರಮುಖರಾದ ಜಿ. ಆನಂದ, ರಾಮ್ದಾಸ್ ಬಂಟ್ವಾಳ, ದೇವಪ್ಪ ಪೂಜಾರಿ, ತುಂಗಪ್ಪ ಬಂಗೇರ, ದಿನೇಶ್ ಭಂಡಾರಿ, ದೇವದಾಸ್ ಶೆಟ್ಟಿ, ಕೃಷ್ಣಪ್ಪ ಪೂಜಾರಿ, ಗೋಪಾಲ್ ಸುವರ್ಣ, ಸೀತಾರಾಮ್ ಪೂಜಾರಿ, ಆನಂದ ಶಂಭೂರು, ಪುರುಷ ಸಾಲ್ಯಾನ್ ಮತ್ತಿತರರು ಉಪಸ್ಥಿತರಿದ್ದರು.
