ಮೂಡಬಿದ್ರೆ: ಜಾಗದ ವಿಚಾರಕ್ಕೆ ಸಂಬಂಧಿಸಿ ಗ್ರಾಮ ಪಂಚಾಯತ್ ಸದಸ್ಯ ಸೇರಿದಂತೆ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ನೆಲ್ಲಿಕಾರು ಸಮೀಪದ ಪಣಪಿಲ ಎಂಬಲ್ಲಿ ನಡೆದಿದೆ.
ನೆಲ್ಲಿಕಾರ್ ಗ್ರಾಮ ಪಂಚಾಯತ್ ಸದಸ್ಯ ಉದಯ ಪೂಜಾರಿ ಹಾಗೂ ಪ್ರಶಾಂತ್ ಹಲ್ಲೆಗೊಳಗಾಗಿದ್ದು, ಮಿತ್ರಸೇನಾ ಜೈನ್ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪಿ. ಉದಯ ಪೂಜಾರಿಯ ಕಿವಿ ತುಂಡಾದ್ದು, ದೇಹದ ಮೇಲೆ ಗಂಭೀರ ಏಟು ತಗಲಿದೆ. ಉದಯ್ ಮತ್ತು ಮಿತ್ರಸೇನಾ ಜೊತೆ ಹಲವು ಸಮಯದಿಂದ ಕುಮ್ಕಿ ಜಾಗದ ವಿಚಾರವಾಗಿ ತಕರಾರು ನಡೆದು ಈ ಹಲ್ಲೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ.