ಮುಂಬಯಿ: ಶ್ರೀ ಲಕ್ಷ್ಮೀನಾರಾಯಣ ಹೃದಯ ಹವನವು ಕಳೆದ ಬುಧವಾರ ದಹಿಸರ್ ಪೂರ್ವದಲ್ಲಿನ ಕಾಶಿಮಠದಲ್ಲಿ ನಡೆಸಲಾಯಿತು.

ವೇದಮೂರ್ತಿ ಹರಿಖಂಡಿಗೆ ಉಲ್ಲಾಸ್‍ಭಟ್ ಅವರು ಸಮಗ್ರ ಸಮಾಜದ ಅಭಿವೃದ್ಧಿಗಾಗಿ ನಡೆಸಿದ ಲಕ್ಷ್ಮೀ ನಾರಯಣ ಹೃದಯ ಹವನದಲ್ಲಿ ವಾಲ್ಕೇಶ್ವರ ಲಕ್ಷ್ಮೀನಾರಾಯಣ ಭಟ್ ಹಾಗೂ ಇತರ ವೈದಿಕರು ಶಾಸ್ತೋಕ್ತವಾಗಿ, ಪೂಜೆ, ಪಾರಾಯಣ ಹವನವನ್ನು ನೇರವೇರಿಸಿದರು.
ಈ ಕಾರ್ಯಕ್ರಮಕ್ಕೆ ಶೋಭಾ ವಿನಾಯಕ್ ಕುಲಕರ್ಣಿ, ಸುಗುಣ ಕಮಲಾಕ್ಷ ಕಾಮತ್ ಹಾಗೂ ಸಮಾಜ ಬಾಂಧವರು ಪ್ರಧಾನವಾಗಿ ಉಪಸ್ಥಿತರಿದ್ದರು. ಧಾರ್ಮಿಕ ಕಾರ್ಯಕ್ರಮದ ಅಂಗವಾಗಿ ಸುಧೀಂದ್ರ ಭಜನಾ ಮಂಡಳಿ ಅವರಿಂದ ಭಜನಾ ಕಾರ್ಯಕ್ರಮ ಜರಗಿಸಿತು.

