ಬಂಟ್ವಾಳ: ಬಿ.ಸಿ.ರೋಡಿನ ಕೈಕಂಬ ಬಳಿ ರೌಡಿಶೀಟರ್ ಒರ್ವ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಕೆಎಸ್ಆರ್ಟಿಸಿ ಐರಾವತ ಬಸ್ನ ಚಾಲಕನನ್ನು ರಸ್ತೆಗೆ ಎಳೆದುಹಾಕಿ ಹಲ್ಲೆಗೈದುದಲ್ಲದೆ ಬಸ್ನ ಗಾಜನ್ನು ಕಲ್ಲೆಸೆದು ಹಾನಿಗೊಳಿಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ಈ ಪ್ರಕರಣವನ್ನು ಬಂಟ್ವಾಳ ನಗರ ಪೊಲಿಸರು ರಾಜಿಸಂಧಾನದ ಮೂಲಕ ಇತ್ಯರ್ಥಗೊಳಿಸಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಬಿ.ಸಿ.ರೋಡು ಪರ್ಲಿಯ ನಿವಾಸಿ ಹಸೈನಾರ್ ದಾಂಧಲೆ ನಡೆಸಿದ ಆರೋಪಿಯಾಗಿದ್ದು ಈತ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದಾನೆ. ಶುಕ್ರವಾರ ರಾತ್ರಿ 11 ಗಂಟೆಯ ಸುಮಾರಿಗೆ ಬೆಂಗಳೂರಿಗೆ ತೆರಳುತ್ತಿದ್ದ ಐರಾವತ ಬಸ್ ಕೈಕಂಬ ಬಳಿ ಪ್ರಯಾಣಿಕರೋರ್ವರನ್ನು ಹತ್ತಿಸಲೆಂದು ರಸ್ತೆ ಬದಿಗೆ ತಂದು ಬಸ್ಸನ್ನು ನಿಲ್ಲಿಸಲಾಗಿತ್ತು. ಈ ಸಂದರ್ಭ ಪಾನಮತ್ತನಾಗಿ ಬಸ್ ನಿಲ್ದಾಣದ ಬಳಿ ನಿಂತಿದ್ದ ಹಸೈನಾರ್ ಏಕಾಏಕಿಯಾಗಿ ಚಾಲಕನ ಬಳಿ ಬಂದು ಅವಾಚ್ಯವಾಗಿ ನಿಂದಿಸಿದ್ದಲ್ಲದೆ ಆತನನ್ನು ರಸ್ತೆಗೆಳೆದು ಹಾಕಿ ಹಲ್ಲೆ ನಡೆಸಿದ್ದಾನೆ. ನಂತನ ಬಸ್ನ ಗಾಜನ್ನು ಕಲ್ಲೆಸೆದು ಹಾನಿಗೊಳಿಸಿದ್ದನೆಂದು ಬಸ್ ಪ್ರಯಾಣಿಕರು ತಿಳಿಸಿದ್ದಾರೆ.

ಇದರಿಂದಾಗಿ ಬಸ್ ಪ್ರಯಾಣಿಕರು ಸುಮಾರು ಒಂದೂವರೆ ತಾಸುಗಳ ಕಾಲ ಸ್ಥಳದಲ್ಲೇ ನಿಲ್ಲಬೇಕಾಯಿತು. ಬಳಿಕ ಮಂಗಳೂರಿನಿಂದ ಇನ್ನೊಂದು ಬಸ್ಸನ್ನು ಕರೆಸಿ ಪ್ರಯಾಣಿಕರನ್ನು ಬೆಂಗಳೂರಿಗೆ ಕಳುಹಿಸಿಕೊಡಲಾಯಿತು. ಇದೇ ವೇಳೆ ರಾತ್ರಿ ಗಸ್ತಿನಲ್ಲಿದ್ದ ಪೊಲೀಸರು ಸ್ಥಳಕ್ಕಾಗಮಿಸಿ ಹಾನಿಗೊಳಗಾದ ಬಸ್ಸನ್ನು ಠಾಣೆಗೆ ತಂದು ನಿಲ್ಲಿಸಿದ್ದರು. ಬಸ್ಚಾಲಕ ನೀಡಿದ ದೂರಿನನ್ವಯ ಶನಿವಾರ ಬೆಳಿಗ್ಗೆ ಬಂಟ್ವಾಳ ನಗರ ಪೊಲೀಸರು ಆರೋಪಿ ಹಸೈನಾರ್ನನ್ನು ಠಾಣೆಗೆ ಕರೆಸಿಕೊಂಡು ರಾಜಿಸಂಧಾನದ ಮೂಲಕ ಪ್ರಕರಣವನ್ನು ಇತ್ಯರ್ಥಗೊಳಿಸಿ ರಾಜಮಯರ್ಾದೆ ನೀಡಿ ಕಳುಹಿಸಿಕೊಟ್ಟಿದ್ದಾರೆಂದು ಹೇಳಲಾಗಿದೆ.
ರೌಡಿಶೀಟರ್ ಆಗಿರುವ ಹಸೈನಾರ್ ಕೆಲ ಸಮಯದ ಹಿಂದೆ ಬ್ರಹ್ಮರಕೂಟ್ಲು ಟೋಲ್ಗೇಟ್ನಲ್ಲಿ ನಡೆದ ದಾಂಧಲೆ ಪ್ರಕರಣದಲ್ಲೂ ಆರೋಪಿಯಾಗಿ ಗುರುತಿಸಿಕೊಂಡಿದ್ದ. ಹಲವು ದಿನಗಳ ಬಳಿಕ ಬಂಧನಕ್ಕೊಳಗಾಗಿ ನ್ಯಾಯಾಲಯದ ಜಾಮೀನಿನ ಮೂಲಕ ಹೊರ ಬಂದಿದ್ದ. ಪೊಲೀಸರ ಈ ಕ್ರಮ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

By suddi9

Leave a Reply

Your email address will not be published. Required fields are marked *