ಬಂಟ್ವಾಳ : ದೇಶದಲ್ಲಿ ಶಾಂತಿ-ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ ಅನೈತಿಕ ಗೂಂಡಾಗಿರಿಗೆ ತಿಲಾಂಜಲಿ ನೀಡಬೇಕಾಗಿದೆ ಎಂದು ದ.ಕ. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಹೇಳಿದರು.
ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಸೆ 29 ರಂದು ಮಂಗಳೂರಿನಲ್ಲಿ “ಅನೈತಿಕ ಗೂಂಡಾಗಿರಿ ನಿಲ್ಲಿಸಿ” ಆಂದೋಲನದ ಅಂಗವಾಗಿ ನಡೆಯುವ ಪಾದಯಾತ್ರೆಯ ಬಂಟ್ವಾಳ ವಿಧಾನಸಭಾ ವ್ಯಾಪ್ತಿಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
26 Sep Youth Congress
ಶನಿವಾರ ಬಿ.ಸಿ.ರೋಡಿನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು ಮತೀಯವಾದಿ ಶಕ್ತಿಯನ್ನು ಯುವ ಕಾಂಗ್ರೆಸ್ ಖಂಡಿಸುತ್ತಾ ಬಂದಿದ್ದು, ಮುಂದಿನ ದಿನಗಳಲ್ಲಿ ಕೋಮು ಶಕ್ತಿಯನ್ನು ಸಂಪೂರ್ಣ ಮಟ್ಟ ಹಾಕುವುದೇ ಈ ಪಾದಯಾತ್ರೆಯ ಉದ್ದೇಶ ಎಂದರು.
ಜಿಲ್ಲಾ ಪಂಚಾಯತ್ ಸದಸ್ಯರುಗಳಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಎಂ.ಎಸ್. ಮುಹಮ್ಮದ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಬಿ.ಎಂ. ಅಬ್ಬಾಸ್ ಅಲಿ, ಮಾಯಿಲಪ್ಪ ಸಾಲಿಯಾನ್, ಪಕ್ಷ ಪ್ರಮುಖರಾದ ಪದ್ಮಶೇಖರ ಜೈನ್, ಐಡಾ ಸುರೇಶ್, ವಸಂತಿ ಚಂದಪ್ಪ, ಲುಕ್ಮಾನ್, ಜನಾರ್ದನ ಚೆಂಡ್ತಿಮಾರ್, ಪ್ರಶಾಂತ್ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಯುವ ಕಾಂಗ್ರೆಸ್‍ನಲ್ಲಿ ತೊಡಗಿಸಿಕೊಂಡು ಇದೀಗ ಕುಕ್ಕಿಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ ಆಯ್ಕೆಯಾದ ದಿನೇಶ್ ಪೂಜಾರಿ, ಚೆನ್ನೈತ್ತೋಡಿ ಗ್ರಾ.ಪಂ. ಅಧ್ಯಕ್ಷ ಯತೀಶ್ ಶೆಟ್ಟಿ, ಕನ್ಯಾನ ಗ್ರಾ.ಪಂ. ಸದಸ್ಯ ಅಬ್ದುಲ್ ಮಜೀದ್, ಬಾಳ್ತಿಲ ಗ್ರಾ.ಪಂ. ಸದಸ್ಯ ಪುರುಷೋತ್ತಮ ಪೂಜಾರಿ, ಬೋಳಿಯಾರು ಗ್ರಾ.ಪಂ. ಸದಸ್ಯ ವಿಶ್ವಜಿತ್ ಶೆಟ್ಟಿ ಅವರನ್ನು ಅಭಿನಂದಿಸಲಾಯಿತು.
ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಹೇಶ್ ನಾಯಕ್ ಸ್ವಾಗತಿಸಿ, ರವಿ ಕಕ್ಕೆಪದವು ವಂದಿಸಿದರು.
ಚಿತ್ರ : 26 ಸೆ ಯೂತ್ ಕಾಂಗ್ರೆಸ್

By suddi9

Leave a Reply

Your email address will not be published. Required fields are marked *