ಮುಂಬಯಿ: ಕೊಂಕಣಿ ಪ್ರಚಾರ ಸಂಚಾಲನ ಸಂಸ್ಥೆಯ ಒಂಬತ್ತನೇ ವಾರ್ಷಿಕ ಮಹಾಸಭೆಯು ಕಳೆದ ಶನಿವಾರ ಶಕ್ತಿನಗರದ ಕಲಾಂಗಣದಲ್ಲಿ ನಡೆಯಿತು. ಮಹಾಸಭೆಯಲ್ಲಿ 2015-18ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಸಲಾಯಿತು. ಕೊಂಕಣಿಯ ಯುವ ಕಾರ್ಯಕರ್ತ ಲಾರೆನ್ಸ್ ಡಿ’ಸೋಜ ಅವರನ್ನು ಸಂಚಾಲನದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಲುವಿ ಪಿಂಟೊ ವಾಲೆನ್ಶಿಯಾ (ಉಪಾಧ್ಯಕ್ಷ) ಜೇಮ್ಸ್ ಡಿ’ಸೋಜ, ಬೊಂದೆಲ್ (ಕಾರ್ಯದರ್ಶಿ) ಐವನ್ ಮಸ್ಕರೇನ್ಹಸ್, ಬಿಜಯ್ (ಜತೆ ಕಾರ್ಯದರ್ಶಿ), ಬ್ರಿಸ್ಟನ್ ಮಿರಾಂದಾ, ಕಿನ್ನಿಗೋಳಿ (ಖಜಾಂಚಿ) ವಿನ್ಸೆಂಟ್ ಮಸ್ಕರೇನ್ಹಸ್, ಮೂಡಬಿದ್ರೆ (ಸಾರ್ವಜನಿಕ ಸಂಪರ್ಕಾಧಿಕಾರಿ) ಮತ್ತು ವಂ. ಆಲ್ವಿನ್ ಸೆರಾವೊ, ಪಾದುವಾ (ಶಿಕ್ಷಣ ಸಂಚಾಲಕ). ಹಾಗೂ ರೊಯ್ ಕ್ಯಾಸ್ತೆಲಿನೊ, ಎರಿಕ್ ಒಝೇರಿಯೊ, ಸ್ಟ್ಯಾನಿ ಆಲ್ವಾರಿಸ್, ಸ್ಟ್ಯಾನ್ಲಿ ಡಿ’ಕುನ್ಹಾ, ರೊನಾಲ್ಡ್ ಗೋಮ್ಸ್, ಅನಿಲ್ ಡಿ’ಕುನ್ಹಾ, ಅಮೃತ್ ಶೆಣೈ ಮತ್ತು ರೀನಾ ಡಿ’ಸೋಜ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಆಯ್ಕೆಗೊಂಡರು.
2006ರಲ್ಲಿ ಆರಂಭವಾದ ಕೊಂಕಣಿ ಪ್ರಚಾರ ಸಂಚಾಲನವು ಶಾಲೆಗಳಲ್ಲಿ ಕೊಂಕಣಿ ಕಲಿಕೆಗಾಗಿ ಅಪಾರ ಶ್ರಮಗೈಯುತ್ತಿದೆ.
