ಮೂಡುಬಿದರೆ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್(ಎಸ್.ಕೆ.ಪಿ.ಎ) ಮೂಡುಬಿದರೆ ವಲಯದ ವತಿಯಿಂದ ಮಾಜಮಂದಿರದಲ್ಲಿ ನಡೆದ ಜಿಲ್ಲಾಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಉಳ್ಳಾಲ ವಲಯ ಫೋಟೋಗ್ರಾಫರ್ಸ್ ಪ್ರಥಮ ಹಾಗೂ ಸುಳ್ಯ ವಲಯದ ಫೋಟೋಗ್ರಾಫರ್ಸ್ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುರತ್ಕಲ್ ಫೋಟೋಗ್ರಾಫರ್ಸ್ ತಂಡವು ತೃತೀಯ ಸ್ಥಾನವನ್ನು ಪಡೆದಿದೆ.
ಪದಗ್ರಹಣ:
ಎಸ್.ಕೆ.ಪಿ.ಎ ಮೂಡುಬಿದರೆ ವಲಯದ ಪದಗ್ರಹಣ ಸಮಾರಂಭದಲ್ಲಿ ಮೂಡುಬಿದರೆ ವಲಯದ ಪ್ರಧಾನ ಧರ್ಮಗುರು ರೆ.ಫಾ ಅಸ್ಟಿನ್ ಪೀಟರ್ ಪೇರಿಸ್ ವಿಜೇತ ತಂಡಗಳಿಗೆ ಬಹುಮಾನ ವಿತರಿಸಲಾಯಿತು. ವಲಯದ ಹಿರಿಯ ಛಾಯಾಗ್ರಾಹಕರಾದ ಭಾನುಪ್ರಕಾಶ್ ಹಾಗೂ ರಾಮ ಕೋಟ್ಯಾನ್ ಅವರನ್ನು ಸನ್ಮಾನಿಸಲಾಯಿತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಹೊಸ್ಮಾರಿನ ನಿವಾಸಿ ದಿನಕರ್ ಪೂಜಾರಿ ಅವರಿಗೆ ಧನಸಹಾಯ ಮಾಡಲಾಯಿತು.
ಎಸ್.ಕೆ.ಪಿ.ಎ ಜಿಲ್ಲಾ ಉಪಾಧ್ಯಕ್ಷ ಪದ್ಮಪ್ರಸಾದ್ ಜೈನ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಎಸ್.ಕೆ.ಪಿ.ಎ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಧು ಮಂಗಳೂರು, ಜಿಲ್ಲಾ ಉಪಾಧ್ಯಕ್ಷ ಕರುಣಾಕರ ಎಲಿಯ ಮೊದಲಾದವರು ಉಪಸ್ಥಿತರಿದ್ದರು. ನಿಕಟಪೂರ್ವ ವಲಯಾಧ್ಯಕ್ಷ ವಿಲ್ಫ್ರೇಡ್ ಮೆಂಡೋನ್ಸಾ ಸ್ವಾಗತಿಸಿದರು. ಅಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ ವರದಿ ವಾಚಿಸಿದರು. ನಿತಿನ್ ಬೆಳುವಾಯಿ ಕಾರ್ಯಕ್ರಮ ನಿರೂಪಿಸಿದರು. ನೂತನ ಕಾರ್ಯದರ್ಶಿ ಸುನೀಲ್ ಕೋಟ್ಯಾನ್ ವಂದಿಸಿದರು.
