ಮೂಡುಬಿದರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರಂಗ ಅಧ್ಯಯನ ಕೇಂದ್ರ ವತಿಯಿಂದ ವಿದ್ಯಾಗಿರಿ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ನಾಲ್ಕು ದಿನಗಳ ಕನ್ನಡ ರಂಗೋತ್ಸವ ಸಂಪನ್ನಗೊಂಡಿದೆ.
ರಂಗೋತ್ಸವದ ಮೊದಲ ದಿನ ಉಡುಪಿಯ ರಂಗಭೂಮಿ ತಂಡದ ಕಲಾವಿದರಿಂದ ಕಾಲಚಕ್ರ ನಾಟಕ ಪ್ರದರ್ಶನಗೊಂಡಿತು. ಜೀವನಾನುಭವ ಹಾಗೂ ಹಿರಿಯರಿಗೆ ನೀಡುವ ಗೌರವದ ಕುರಿತ ಕಥಾಹಂದರವನ್ನು ಒಳಗೊಂಡ ಜಯವಂತ ದಳ್ವಿ ರಚನೆಯ ನಾಟಕವನ್ನು ಪ್ರದೀಪ್‍ಚಂದ್ರ ಕುತ್ಪಾಡಿ ನಿರ್ದೇಶಿಸಿದರು. ಎರಡನೇ ದಿನ ಉಡುಪಿ ರಂಗಭೂಮಿ ತಂಡದ ಕಲಾವಿದರು ಗಿರೀಶ್ ಕಾರ್ನಾಡ್ ರಚಿತ ನಾಗಮಂಡಲ ನಾಟಕವನ್ನು ಪ್ರದರ್ಶಿಸಿದರು. ಹೆಣ್ಣಿನ ಅಂತರಂಗದ ತುಮುಲಗಳನ್ನು ನಾಗಮಂಡಲ ನಾಟಕದ ಮೂಲಕ ಪ್ರದರ್ಶಿಸಲಾಯಿತು.
mbd_oct6_8 (Duthavakya)

mbd_oct6_8 ( barbarika)ಮೂರನೇ ದಿನ ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ವಿದ್ಯಾರ್ಥಿಗಳಿಂದ ಜೀವನ್ ರಾಮ್ ಸುಳ್ಯ ನಿರ್ದೇಶನದಲ್ಲಿ, ಭಾಸನ `ದೂತವಾಕ್ಯ’ ಹಾಗೂ ಶಶಿರಾಜ್ ರಾವ್ ಕಾವೂರು ರಚಿತ `ಬರ್ಬರೀಕ’ ನಾಟಕಗಳು ಪ್ರದರ್ಶನಗೊಂಡವು. ರಂಗಬೀಷ್ಮ ಬಿ.ವಿ ಕಾರಂತ್ ನಿರ್ದೇಶನದ ನಾಟಕಗಳ ರಂಗಗೀತೆಗಳನ್ನು ಸ್ವಪ್ನಶ್ರೀ ಧರ್ಮಸ್ಥಳ, ಅರುಧಂತಿ ಕೋಟೆ ಹಾಗೂ ಜೀವನ್‍ರಾಮ್ ಸುಳ್ಯ ಹಾಡಿದರು. ಕೃಷ್ಣ ಸಂದಾನ ಹಾಗೂ ದುರ್ಯೋಧನನ ದರ್ಪ `ದೂತವಾಕ್ಯ’ದ ಕಥಾವಸ್ತು. ಬುಡಕಟ್ಟು ಜನಾಂಗ ಹಾಗೂ ನಗರವಾಸಿಗಳ ನಡುವಿನ ಸಂಘರ್ಷ ಬರ್ಬರೀಕ ನಾಟಕದ ಮೂಲಕ ಅನಾವರಣಗೊಂಡಿತು.
ವರ್ತಮಾನದ ಮಹಿಳೆಯರ ತಲ್ಲಣಗಳನ್ನು ಪುರಣಾಕಥೆಗಳ ಚಿತ್ರಣದೊಂದಿಗೆ `ಮಹಿಳಾ ಭಾರತ’ ನಾಟಕವನ್ನು ಪ್ರದರ್ಶಿಸಲಾಯಿತು. ಅಭಿಲಾಷ್ ಎಸ್. ರೂಪಾಂತರಗೊಳಿಸಿದ ಕೆ.ಮಾಧವನ್ ರಚಿತ ಈ ನಾಟಕವನ್ನು ಡಾ.ಶ್ರೀಪಾದ ಭಟ್ ನಿರ್ದೇಶಿಸಿದರು. ಉಡುಪಿ ರಥಬೀದಿ ಗೆಳೆಯರು ನಾಟಕದಲ್ಲಿ ಅಭಿನಯಿಸಿದರು.
ರಂಗೋತ್ಸವದ ನಾಲ್ಕು ದಿನ 89 ಕಲಾವಿದರು ಅಭಿನಯಿಸಿದರು. ಸುಮಾರು 4,800 ಮಂದಿ ಕಲಾಸಕ್ತರು ರಂಗೋತ್ಸವ ನಾಟಕಗಳನ್ನು ಸವಿದರು.

By suddi9

Leave a Reply

Your email address will not be published. Required fields are marked *