ಮೂಡುಬಿದರೆ: ಪ್ರಶಾಂತ್ ಪೂಜಾರಿಯವರ ನಿವಾಸಕ್ಕೆ ಭಾನುವಾರ ಸಂಜೆ ಗುರುಪುರ ವಜ್ರದೇಹಿ ಮಠದ ಶ್ರೀರಾಜಶೇಖಾರಾನಂದ ಸ್ವಾಮೀಜಿ ಹಾಗೂ ಬಲ್ಯೊಟ್ಟಿನ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಭೇಟಿ ನೀಡಿ ಮೃತರ ಹೆತ್ತವರು ಹಾಗೂ ಕುಟುಂಬಕ್ಕೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಪ್ರಶಾಂತ್‍ನ ಹೆತ್ತವರು ತಮ್ಮ ಅಳಲನ್ನು ತೋಡಿಕೊಂಡರು. ಆರೋಪಿಗಳ ಬಂಧನ, ಕಠಿಣ ಕ್ರಮಕ್ಕೆ ಒತ್ತಾಯಿಸಿ ತಮಗೆ ನ್ಯಾಯ ದೊರಕಿಸುವಂತೆ ವಿನಂತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಜ್ರದೇಹಿ ಶ್ರೀಗಳವರು ಸಮಾಜ ಪ್ರಶಾಂತ್ ಕುಟುಂಬದ ಜತೆಗಿರುತ್ತದೆ. ಅವರ ಆರ್ಥಿಕ ಸಂಕಷ್ಟಕ್ಕಾಗಿ 10 ಲಕ್ಷದ ಆರ್ಥಿಕ ನೆರವಿನ ನಿಧಿ ಕ್ರೋಢೀಕರಿಸಿ ನೀಡುವ ವಿಶ್ವಾಸ ವ್ಯಕ್ತಪಡಿಸಿದರು. ಬೆಳುವಾಯಿ ಪಂಚಾಯತ್ ಅಧ್ಯಕ್ಷ ಭಾಸ್ಕರ ಆಚಾರ್ಯ, ಶ್ರೀನಾಥ್ ಸುವರ್ಣ, ಸೋಮನಾಥ ಕೋಟ್ಯಾನ್, ಭರತ್ ಇರುವೈಲು ಮತ್ತಿತರರು ಜತೆಗಿದ್ದರು.

mbd_oct11_8
…
ಕರಿಂಜೆ ಶ್ರೀ ಖಂಡನೆ:
ಪ್ರಶಾಂತವಾಗಿದ್ದ ಮೂಡುಬಿದರೆಯ ಪರಿಸರದಲ್ಲಿ ಹಿಂದೂಗಳನ್ನು ದಮನಿಸುವ ,ಅವರ ಮೇಲೆ ದೌರ್ಜನ್ಯವೆಸಗುವ ಕೃತ್ಯ, ಹತ್ಯೆಯೂ ನಡೆದಿದೆ. ಪೋಲೀಸ್ ಇಲಾಖೆ ಈ ಕೃತ್ಯದ ಹಿಂದಿರುವ ಅಪರಾಧಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದೆ ಮೂಡುಬಿದರೆಯಲ್ಲಿ ಇಂತಹ ಕೃತ್ಯಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕಾಗಿದೆ. ಸರಕಾರವೂ ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಬಗ್ಗೆ ಸ್ಪಂದಿಸಬೇಕು. ಈ ಘಟನೆಯಲ್ಲಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ವಿಳಂಬವಾಗಿ ನ್ಯಾಯ ಸಿಗದೇ ಹೋದರೆ ಉಗ್ರವಾದ ಪ್ರತಿಭಟನೆ ಅನಿವಾರ್ಯವಾಗುತ್ತದೆ ಎಂದು ಕರಿಂಜೆ ಶ್ರೀ ಸತ್ಯನಾರಾಯಣ ಪುರದ ಶ್ರೀ ಮುಕ್ತಾನಂದ ಸ್ವಾಮೀಜಿ ಹೇಳಿದ್ದಾರೆ.
ಸಿಪಿಐಎಂ ಖಂಡನೆ:
ಪ್ರಶಾಂತ್ ಹತ್ಯೆಯನ್ನು ಮೂಡುಬಿದರೆ ವಲಯ ಸಿಪಿಐಎಂ ಖಂಡಿಸಿದೆ. ಈ ಕೃತ್ಯದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿದ ಸಿಪಿಐಎಂ, ಹತ್ಯೆಯ ಕಾರಣಕ್ಕೆ ಮತೀಯ ವೈಷಮ್ಯ, ಶಾಂತಿ ಕದಡುವ , ಸೊತ್ತು ಹಾನಿಗೈದಿರುವ ಕೃತ್ಯ ಯಾರಿಂದಾಗಿದ್ದರೂ ಅವರ ವಿರುದ್ಧವೂ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಮೂಡುಬಿದಿರೆಯ ಜನತೆ ಶಾಂತಿ ಸೌಹಾರ್ದತೆ ಕಾಪಾಡಬೇಕು ಮತ್ತು ಅಪಪ್ರಚಾರಕ್ಕೆ ಬಲಿಯಾಗದಂತೆ ಪಕ್ಷದ ಕಾರ್ಯದರ್ಶಿ ಯಾದವ ಶೆಟ್ಟಿ ಹೇಳಿಕೆ ನೀಡಿದ್ದಾರೆ.

By suddi9

Leave a Reply

Your email address will not be published. Required fields are marked *