`ಜೀವಾನುಭವದ ತಲ್ಲಣವೇ ನಾಟಕದ ಜೀವನಾಡಿ’
ಬಂಟ್ವಾಳ: ನಾಟಕ ರಂಗಭೂಮಿಗೆ ಜೀವನಾನುಭವದ ತಲ್ಲಣವೇ ಮುಖ್ಯ. ಜನರ ನಾಡಿಮಿಡಿತವನ್ನು ಪರಿಚಯಿಸುವ ಮೂಲಕ ನಾಟಕಕಾರ ಶ್ರೇಷ್ಠ ಕಲಾವಿದನಾಗಿ ಬೆಳೆಯುತ್ತಾನೆ ಎಂದು ಬಂಟ್ವಾಳ ತಾಲೂಕು ಕಸಾಪ ಅಧ್ಯಕ್ಷ, ಹಿರಿಯ ಪತ್ರಕರ್ತ ಜಯಾನಂದ ಪೆರಾಜೆ ಅವರು ಹೇಳಿದರು.

ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನದ ಸಭಾಂಗಣದಲ್ಲಿ ಭಾನುವಾರ ದಾಸಕೋಡಿ ತುಳುವ ಚಾವಡಿ ವತಿಯಿಂದ ಏರ್ನ ಬಂಗಾರ್ ತುಳು ನಾಟಕದ ಮುಹೂರ್ತ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಳೆದ ಸುಮಾರು 25 ವರ್ಷಗಳಿಂದ ನಾಟಕದ ವಿವಿಧ ಆಯಾಮಗಳಲ್ಲಿ ಸೇವೆ ಸಲ್ಲಿಸಿದ ನಾಟಕಕಾರ ಬಿ.ಆರ್.ಕಬಕ ಅವರ ಏರ್ನ ಬಂಗಾರ್ 25ನೇ ನಾಟಕ ಕಲಾಕೃತಿಯಾಗಿದೆ. ನೈಜ ಘಟನೆಯನ್ನು ಆಧರಿಸಿದ ಈ ನಾಟಕವು ತುಳು ರಂಗಭೂಮಿಗೆ ಹೊಸ ಪ್ರಯೋಗವಾಗಿದೆ ಎಂದರು.
ಮಾಜಿ ಎ.ರುಕ್ಮಯ ಪೂಜಾರಿ ದೀಪ ಬೆಳಗಿಸಿ ಉದ್ಘಾಟಿಸಿ, ಎಲ್ಲರನ್ನು ಆಕರ್ಷಿಸುವ ಜನಪ್ರಿಯಕಲೆಯಾಗಿರುವ ನಾಟಕ ಕ್ಷೇತ್ರಕ್ಕೆ ಪ್ರೋತ್ಸಾಹ ಅಗತ್ಯ. ಮನರಂಜನೆಯ ಜತೆಗೆ ಸಾಮಾಜಿಕ ಮತ್ತು ಸಾಂಸ್ಕøತಿಕ ಬದುಕಿನ ಪ್ರೇರಣೆಯಾಗಿದೆ ಎಂದರು. ಪ್ರಗತಿಪರ ಕೃಷಿಕ ರಾಜೇಶ್ ನಾೈಕ್ ಉಳಿಪ್ಪಾಡಿಗುತ್ತು, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಡಿ.ಎಂ.ಕುಲಾಲ್, ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ, ಮಾಜಿ ಉಪಾಧ್ಯಕ್ಷ ಬಿ.ಕೆ. ಪೂಜಾರಿ, ಸದಸ್ಯ ಶೇಖರ್ ಕೊಟ್ಟಾರಿ, ತಾಪಂ ಸದಸ್ಯ ದಿನೇಶ್ ಅಮ್ಟೂರು, ಪ್ರಮುಖರಾದ ಕೃಷ್ಣಪ್ಪ ಪೂಜಾರಿ ತೋಟ, ಸಾಹುಲ್ ಹಮೀದ್ ನಂದಾವರ, ಕೆ.ಕೃಷ್ಣಪ್ಪ ಪೂಜಾರಿ ನೀರಪಾದೆ, ಪುರುಷೋತ್ತಮ ತೋಟ, ನಾಟಿವೈದ್ಯ ಎಂ. ದಾಮೋದರ, ನಾಟಕ ನಿರ್ದೇಶಕ ಮಧು ಬಂಗೇರ ಕಲ್ಲಡ್ಕ ಉಪಸ್ಥಿತರಿದ್ದರು.
ಸನ್ಮಾನ: ನಾಟಿವೈದ್ಯ ಎಂ.ಧರ್ಮಪ್ಪ ಪಂಡಿತ್ ಕಲ್ಲಡ್ಕ, ಹಿರಿಯ ನಾಟಕ ಕಲಾವಿದ ಬಿ.ಆರ್.ಕುಲಾಲ್, ಉದ್ಯಮಿ ಪಿ.ದೇವಪ್ಪ ಶೆಟ್ಟಿ ಬಿ.ಸಿ.ರೋಡ್, ಮನೋಹರ ಪೂಜಾರಿ ಮಂಗಳೂರು, ಕೊರಗಪ್ಪ ಪಂಡಿತ್ ಕುದ್ರೆಬೆಟ್ಟು ಅವರನ್ನು ವೇದಿಕೆಯಲ್ಲಿ ಸನ್ಮಾನಿಸಲಾಯಿತು. ತುಳುವ ಚಾವಡಿ ಅಧ್ಯಕ್ಷ ಬಿ.ಆರ್.ಕಬಕ ಸ್ವಾಗತಿಸಿ, ರಮೇಶ್ ಕುದ್ರೆಬೆಟ್ಟು ವಂದಿಸಿದರು.