ಶ್ರೀಕೃಷ್ಣ ದೇವದ ಪ್ರತಿಷ್ಠಾಪನೆ-ಬ್ರಹ್ಮ ಕಲಶ ಆಚರಣಾ ಕಛೇರಿ ಶುಭಾರಂಭ
ಮುಂಬಯಿ: ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯಲ್ಲಿರುವ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ಮಠದ ವತಿಯಿಂದವಾರ್ಷಿಕ ದುರ್ಗಾ ನಮಸ್ಕಾರಪೂಜೆಯೊಂದಿಗೆ ನಾಡಹಬ್ಬ ದಸರಾ ಇಂದಿಲ್ಲಿ ಸೋಮವಾರ ಸಂಜೆ ವಿಜೃಂಭನೆಯಿಂದ ಆಚರಿಸಲ್ಪಟ್ಟಿತು. ಮಠದ ಆಡಳಿತಾಧಿಕಾರಿ ರಾಮದಾಸ ಉಪಾಧ್ಯಾಯ ಪೂಜಾಧಿಗಳನ್ನು ನೆರವೇರಿಸಿ ತೀರ್ಥ ಪ್ರಸಾದವನ್ನಿತ್ತು ಅನುಗ್ರಹಿಸಿದರು. ಇದೇ ಸಂದರ್ಭದಲ್ಲಿ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿಶ್ರೀಕೃಷ್ಣ ದೇವರ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶದ ಸೇವಾರ್ಥವಾಗಿ ರೂಪಿಸಿದ ಕಛೇರಿಯನ್ನು ಡಾ| ಎ.ಎಸ್ ರಾವ್ ಅವರು ಶ್ರೀಕೃಷ್ಣ ದೇವರ ಪ್ರತಿಮೆಗೆ ಪುಷ್ಪಾರ್ಚನೆಗೈದು ಶುಭಾರಂಭಗೊಳಿಸಿದರು.
Pejawara Mutt - Durga Namaskara-2

 

Pejawara Mutt - Durga Namaskara-5

Pejawara Mutt - Durga Namaskara-6

Pejawara Mutt - Durga Namaskara-A2

Pejawara Mutt - Durga Namaskara-B2

Pejawara Mutt - Durga Namaskara-B3ಉಡುಪಿ ಅಲ್ಲಿನ ಅಷ್ಠಮಠಗಳಲ್ಲಿ ಜಗದ್ಗುರು ಶ್ರೀ ಮಧ್ವಾಚಾರ್ಯ ಮಹಾ ಸಂಸ್ಥಾನದ ಉಡುಪಿ ಶ್ರೀ ಪೇಜಾವರ ಅಧೋಕ್ಷಜ ಮಠಧೀಶ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರು ಮೊತ್ತ ಮೊದಲ ಬಾರಿಗೆ ಐದನೇ ಪರ್ಯಾಯ ಸರ್ವಜ್ಞ ಜ್ಙಾನಪೀಠಾರೋಹಣ ಮಾಡುತ್ತಿದ್ದು, ಪೂರ್ವಭಾವಿ ಸಿದ್ಧತೆಯಾಗಿ ಮುಂಬಯಿ ಪೇಜಾವರ ಮಠದಲ್ಲಿ 2016ನೇ ಜನವರಿ 04ರ ಸೋಮವಾರ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿಶ್ರೀಕೃಷ್ಣ ದೇವರ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶ ನೆರವೇರಿಸಲಿದ್ದಾರೆ. ಅದೇ ದಿನ ಸಂಜೆ 4.00 ಗಂಟೆಗೆ ಉಡುಪಿಯಲ್ಲಿ ಪರ್ಯಾಯಪೂರ್ವಭಾವಿ ಸಾಂಪ್ರದಾಯಿಕ ಪುರಪ್ರವೇಶ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮಠದ ಬಿ.ಆರ್ ಗುರುಮೂರ್ತಿ, ಅವಿನಾಶ್ ಶಾಸ್ತ್ರಿ, ಕೃಷ್ಣ ಯಾದವ್ ಆಚಾರ್ಯ, ಟಿ.ಬಿ ಹುನ್ನೂರು, ರಾಮ ವಿಠಲ ಕಲ್ಲೂರಾಯ, ಮಠದ ಶಾಖಾಧಿಕಾರಿ ಪ್ರಕಾಶ್ ಆಚಾರ್ಯ ರಾಮಕುಂಜ, ಶ್ರೀಹರಿ ಭಟ್ ಮತ್ತು ನಿರಂಜನ್ ಗೋಗ್ಟೆ ಉಪಸ್ಥಿತರಿದ್ದು ನಾಡಿನ ಸಮಸ್ತ ಜನತೆಗೆ ದಸರಾ ಹಬ್ಬಕ್ಕೆ ಶುಭಾರೈಸಿದರು. ಶ್ರೀಕೃಷ್ಣ ದೇವದ ಪ್ರತಿಷ್ಠಾಪನೆ ಹಾಗೂ ಬ್ರಹ್ಮಕಲಶದ ಪ್ರಯುಕ್ತ ವಿವಿಧ ಸೇವೆಗಳು ನಡೆಸಲಾಗಿದ್ದು, ಬೆಳ್ಳಿ ಮತ್ತು ತಾಮ್ರದ ಕಲಶವನ್ನಿತ್ತು ಶ್ರೀದೇವರ ಸೇವೆಗೈಯಲು ಭಕ್ತಾಭಿಮಾನಿಗಳಿಗೆ ಮುಕ್ತ ಅವಕಾಶವಿದ್ದು ಪೂಜೆಯ ಬಳಿಕ ಬೆಳ್ಳಿಮತ್ತುತಾಮ್ರದ ಕಲಶಗಳೊಂದಿಗೆ ಪೇಜಾವರಶ್ರೀಗಳು ಫಲಮಂತ್ರಾಕ್ಷೆಗಳನ್ನಿತ್ತು ಹರಸಲಿದ್ದಾರೆ
ಎಂದು ಶ್ರೀಹರಿ ಭಟ್ ತಿಳಿಸಿದರು.

By suddi9

Leave a Reply

Your email address will not be published. Required fields are marked *