ಕನ್ನಡಿಗರೇ ನಿರಭಿಮಾನಿಗಳಾಗದಿರಿ: ಹಾಸ್ಯ ನಟ ಸಾಧೂ ಕೋಕಿಲ
ಮುಂಬಯಿ: ಕನ್ನಡದ ನೆಲ ಜಲಕ್ಕೆ ಧಕ್ಕೆ ಬಂದಾಗ ಕನ್ನಡಿಗರಾದ ನಾವು ಯಾವುದೇ ಹೋರಾಟಕ್ಕೆ ಸದಾ ಸಿದ್ಧರಾಗಿರಬೇಕು. ಕನ್ನಡಿಗರು ನಿರಭಿಮಾನಿಗಳಾಗದೇ ಕಣಕಣದಲ್ಲಿಯೂ ಕನ್ನಡಾಭಿಮಾನವನ್ನು ಮೈಗೂಡಿಸಿಕೊಂಡು ಕನ್ನಡ ಭಾಷೆಯನ್ನು ಪ್ರೀತಿಸಿ ಗೌರವಿಸಬೇಕು ಎಂದು ನಾಡಿನ ಖ್ಯಾತ ಹಾಸ್ಯ ನಟ, ಹಾಸ್ಯ ಬ್ರಹ್ಮ, ಕಾಮಿಡಿ ಕಿಂಗ್, ಚಲನಚಿತ್ರ ಸಂಗೀತ ನಿರ್ದೇಶಕರಾದ ಸಾಧೂ ಕೋಕಿಲ
ಕರೆ ನೀಡಿದರು. ಕೋಕಿಲರು ಪಟ್ಟಣದ ಶತಮಾನದ ಶಾಲೆಯ ಮೈದಾನದಲ್ಲಿ ಖಾಸಗೀ ಬಸ್‍ನಿಲ್ದಾಣದ ವಿನಾಯಕ ಗೆಳೆಯರ ಬಳಗದ ಸದಸ್ಯರು ಕ್ಷೇತ್ರದ ಶಾಸಕರು ಗೌರವ ಡಾಕ್ಟರೇಟ್ ಭಾಜನರಾಗಿ ತಾಲೂಕಿನ ಕೀರ್ತಿಯನ್ನು ಬೆಳಗಿದ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರು ಮಲ್ಲಿಗೆಯ ಪ್ರೇಮಕವಿ ಕೆ.ಎಸ್.ನರಸಿಂಹಸ್ವಾಮಿ ಅವರಿಗೆ ಜನ್ಮ ನೀಡಿರುವ ಹೆಮ್ಮೆಯ
ತಾಲೂಕಾದ ಕೆ.ಆರ್.ಪೇಟೆಯಲ್ಲಿ ಕನ್ನಡವು ಸುಭದ್ರವಾಗಿದೆ. ಕನ್ನಡ ಚಲನಚಿತ್ರಗಳು ಈ ಪಟ್ಟಣದಲ್ಲಿ ಶತದಿನೋತ್ಸವದ ಸಂಭ್ರಮವನ್ನು ಕಂಡಿವೆ. ಕನ್ನಡಿಗರ ಕಡ್ಡಾಯವಾಗಿ ಕನ್ನಡ ಭಾಷೆಯ ಚಲನಚಿತ್ರಗಳನ್ನು ಚಿತ್ರಮಂದಿರಕ್ಕೆ ಹೋಗಿ ನೋಡುವ ಮೂಲಕ ಕನ್ನಡ ಚಿತ್ರೋದ್ಯಮವನ್ನು ಬೆಂಬಲಿಸಿ ಮುನ್ನಡೆಸಬೇಕು.

Dr. Narayana R.Gowda

ಕ್ರಾಂತಿಯೋಗಿ ಸಂಗೊಳ್ಳಿ ರಾಯಣ್ಣ, ಮಯೂರ, ಭಭ್ರುವಾಹನ, ಹುಲಿಯ ಹಾಲಿನ ಮೇವು ಮೂಂತಾದ ಪೌರಾಣಿಕ ಚಲನ ಚಿತ್ರಗಳು ಕನ್ನಡ ಮಹತ್ವವನ್ನು ಸಾರುತ್ತಾ ನಾಡಿನ ಜನತೆಗೆ ನಮ್ಮ ಇತಿಹಾಸವನ್ನು ಪರಿಚಯ ಮಾಡಿಕೊಡುತ್ತಿವೆ. ಕನ್ನಡ ಭಾಷೆಯು ಶ್ರೀಮಂತ ಭಾಷೆಯಾಗಿದ್ದು 2ಸಾವಿರ ವರ್ಷಗಳಿಗೂ ಹೆಚ್ಚಿನ ಭವ್ಯವಾದ ಇತಿಹಾಸವನ್ನು ಹೊಂದಿವೆ. ವಿಶ್ವದ ಅತೀ ಹೆಚ್ಚಿನ ಜನರು ಬಳಸುವ ಜೀವಂತ ಭಾಷೆಗಳಲ್ಲಿ ಕನ್ನಡ ಭಾಷೆಯು ಮಹತ್ವದ ಸ್ಥಾನದಲ್ಲಿದೆ. ಆದ್ದರಿಂದ ಕನ್ನಡಿಗರಾದ ನಾವು ನಮ್ಮ ಸಂಸ್ಕ್ರತಿ ಪರಂಪರೆಯನ್ನು ಪ್ರೀತಿಸಿ ಗೌರವಿಸುವ ಬಗ್ಗೆ, ತಂದೆ ತಾಯಿಗಳು ಹಾಗೂ ಗುರು-ಹಿರಿಯರ ಬಗ್ಗೆ ಅಭಿಮಾನ ಹಾಗೂ ವಿನಯವಂತಿಕೆಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಧುಕೋಕಿಲ ಕರೆ ನೀಡಿದರು. ಮಂಡ್ಯ ಲೋಕಸಭಾ ಸದಸ್ಯ ಸಿ.ಎಸ್ ಪುಟ್ಟರಾಜು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಮುಂಬೈ ಮಹಾನಗರದಲ್ಲಿ ಶಾಸಕ ನಾರಾಯಣ ಗೌಡರು ಕಳೆದ 30ವರ್ಷಗಳಿಂದಲೂ ನಡೆಸುತ್ತಾ ಬಂದಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸಿ ನೀಡಿರುವ ಈ ಗೌರವ ಕ್ಷೇತ್ರದ ಶಾಸಕರಿಗೆ ಮಾತ್ರವಲ್ಲ, ಸಮಸ್ತ ತಾಲೂಕಿನ ಜನತೆಗೆ ಸಂದ ಗೌರವವಾಗಿದೆ. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಪಡಿಸುವ ಕನಸನ್ನು ಹೊತ್ತು ಬಂದಿರುವ ಗೌಡರು ಜನತೆಯ ನೋವು ನಲಿವುಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ಕ್ಷೇತ್ರದ ಜನತೆಯ ಪ್ರೀತಿ, ವಿಶ್ವಾಸ ಹಾಗೂ ಅಭಿಮಾನಕ್ಕೆ ಪಾತ್ರರಾಗಿರುವುದರಿಂದ ಮತ್ತೊಂದು ಅವಧಿಗೆ ಕ್ಷೇತ್ರದ ಶಾಸಕರಾಗಿ ಆಯ್ಕೆ ಮಾಡಿ ಜನತೆಯ ಸೇವೆಗೆ ಅನುವು ಮಾಡಿಕೊಡಬೇಕು. ಎಂದು ಪುಟ್ಟರಾಜು ನುಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ನಾರಾಯಣಗೌಡ ಮಾತನಾಡಿ ಮುಂಬೈ ನಗರಕ್ಕೆ ಹೊಟ್ಟೆ ಬಟ್ಟೆಗಾಗಿ ಹೋಗಿದ್ದ ನನ್ನ ಮೇಲೆ ವಿಶ್ವಾಸವಿಟ್ಟ ತಾಲೂಕಿನ ಜನತೆ ಕ್ಷೇತ್ರದ ಶಾಸಕನನ್ನಾಗಿ ಮಾಡಿ ಆಶೀರ್ವದಿಸಿದ್ದಾರೆ. ನನ್ನ ಗೌರವವು ಕ್ಷೇತ್ರದ ಜನತೆಗೆ ಹಾಗೂ ಮುಂಬೈ ಕನ್ನಡಿಗರಿಗೆ ಸಂದ ಗೌರವವಾಗಿದೆ ಎಂದು ಹೇಳಿದ ಶಾಸಕರು ಕನ್ನಡಿಗರನ್ನು ಪ್ರೀತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ಸಂಘಸಂಸ್ಥೆಗಳು ಇದೇ ಮಾದರಿಯಲ್ಲಿ ಮುನ್ನಡೆಸಬೇಕು ಎಂದು ಶಾಸಕ ನಾರಾಯಣಗೌಡ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಶಿಕ್ಷಣ ಮತ್ತು ಆರೋಗ್ಯಸ್ಥಾಯಿ ಸಮಿತಿಯ ಅಧ್ಯಕ್ಷ ವಿ. ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕಿಕ್ಕೇರಿಸುರೇಶ್, ಪುರಸಭೆಯ ಅಧ್ಯಕ್ಷ ಕೆ. ಗೌಸ್‍ಖಾನ್, ಮಾಜಿ ಅಧ್ಯಕ್ಷ ಕೆ.ಹೆಚ್ ರಾಮಕೃಷ್ಣ, ಸದಸ್ಯರಾದ ಕೆ.ಎಸ್ ಸಂತೋಷ್, ಕೆ.ಆರ್ ಹೇಮಂತ್‍ಕುಮಾರ್, ಡಿ.ಪ್ರೇಮಕುಮಾರ್, ಚೆಲುವರಾಜು, ಕೋಳಿ ನಾಗರಾಜು, ಹೆಚ್.ಆರ್ ಲೋಕೇಶ್, ಅತಿಥಿಗಳಾಗಿ ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *