ಮುಂಬೈ:ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಮತ್ತು ಬಿ. ಎಸ್. ಕೆ. ಬಿ. ಎಸೋಸಿಯೇಶನ್ , ಸಾಯನ್, ಗೋಕುಲದಲ್ಲಿ ಶರನ್ನವರಾತ್ರಿಯ ಪರ್ವ ಕಾಲದಲ್ಲಿ ಗುರುವಾರ ಅ.22 ಮಹಾನವಮಿಯಂದು ಸಾಯಂಕಾಲ ದೀಪಾರಾಧನೆ ಜರಗಲಿದೆ. ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಅಂಬಿಕಾ ಮಹಾಗಣಪತಿ ದೇವಸ್ಥಾನ, ವಿದ್ಯಾವಿಹಾರ್ ನ ಪ್ರಧಾನ ಅರ್ಚಕರಾದ ವೇದಮೂರ್ತಿ ಶ್ರೀ ಪೆರ್ಣಂಕಿಲ ಹರಿದಾಸ್ ಭಟ್ ಅವರ ಪ್ರಾಯೋಜಕತ್ವದಲ್ಲಿ ಸಂಜೆ 4.30 ರಿಂದ 6 ಗಂಟೆಯವರೆಗೆ ವಿದ್ವಾನ್ ಸುಧೀರ್ ರಾವ್, ಹಾಗೂ ವಿದುಷಿ ಮಾನಸಿ ಸುಧೀರ್ ರವರ ನಿರ್ದೇಶನದಲ್ಲಿ, ‘ನೃತ್ಯ ನಿಕೇತನ’ ಕೊಡವೂರು, ಉಡುಪಿ ಇವರಿಂದ ‘ನೃತ್ಯ ಸಿಂಚನ ‘ ಭರತನಾಟ್ಯ ಕಾರ್ಯಕ್ರಮ, ಹಾಗೂ ಸಂಜೆ 6 ರಿಂದ 7 ರ ವರೆಗೆ ಶ್ರೀ ನಾರಾಯಣ ಸರಳಾಯ, ಆಸ್ಥಾನ ಗಾಯಕರು, ಉಡುಪಿ ಶ್ರೀ ಕೃಷ್ಣ ಮಠ, ಮತ್ತು ವಿದ್ವಾನ್ ಸುಧೀರ್ ರಾವ್, ಕೊಡವೂರು ಇವರಿಂದ ” ದಾಸವಾಣಿ” ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ನಂತರ ಶಾರದಾ ಪೂಜೆ, ದೀಪಾರಾಧನೆ, ಮಂಗಳಾರತಿ, ತೀರ್ಥ -ಪ್ರಸಾದ ವಿತರಣೆ ಜರಗಲಿದೆ.