ಇಂದು ವಾರ್ಷಿಕ ವಿಜಯ ದಶಮಿ-ದಸರೋತ್ಸವ ಸಂಭ್ರಮ
ಮುಂಬಯಿ : ಜೆರಿಮೆರಿಯಲ್ಲಿನ ಶ್ರೀ ಉಮಾ ಮಹೇಶ್ವರೀ ದೇವಸ್ಥಾನದಲ್ಲಿ ವರ್ಷಂಪ್ರತೀಯಂತೆ ಈ ಬಾರಿಯೂ ವಾರ್ಷಿಕ ಶರನ್ನವರಾತ್ರಿ ಉತ್ಸವ ಆಚರಿಸುತ್ತಿದ್ದು, ಇಂದಿಲ್ಲಿ ಬುಧವಾರ ಬೆಳಿಗ್ಗೆ ಪುಣ್ಯಾಹ, ನವಕ ಪ್ರತಿಷ್ಠೆ, ಪಂಚಾಮೃತ ನವಕ ಅಭಿಷೇಕಗೈದು ದುರ್ಗಾಹೋಮ, ಭಜನೆ, ಮಹಾಪೂಜೆ ಇತ್ಯಾದಿ ಪೂಜೆಗಳೊಂದಿಗೆ ದುರ್ಗಾಷ್ಟಮಿ ಸಂಭ್ರಮಿಸಲಾಯಿತು.
Uma Maheshwari Jerimeri Dasara-4

Uma Maheshwari Jerimeri Dasara-5

Uma Maheshwari Jerimeri Dasara-6

Uma Maheshwari Jerimeri Dasara-14

Uma Maheshwari Jerimeri Dasara-A5

Uma Maheshwari Jerimeri Dasara-B1

Uma Maheshwari Jerimeri Dasara-B3

Uma Maheshwari Jerimeri Dasara-B4

Uma Maheshwari Jerimeri Dasara-C2ದೇವಸ್ಥಾನದ ಆಡಳಿತ ಮೊಕ್ತೇಸರ ಬಿ.ಕೆಶೀನಮತ್ತುಲಲಿತಾ ಶೀನ ಪೂಜಾರಿ ದಂಪತಿ ಮುಂದಾಳುತ್ವದಲ್ಲಿ ನೆರವೇರಿಸಲಾದ ದಸರೋತ್ಸವದಲ್ಲಿ ದೇವಸ್ಥಾನದ ಶಿಲಾಮಯ ಗುಡಿಯಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣ್ಯ ದೇವರ ಮತ್ತು ಶ್ರೀ ಉಮಾ ಮಹೇಶ್ವರೀ ದೇವಿಗೆ ಆರಾಧನೆಗೈದು ಪೂಜಿಸಲಾಯಿತು. ಅಂತೆಯೇ ಶ್ರೀ ಉಮಾ ಮಹೇಶ್ವರೀ ದೇವಿಗೆ ರಜತ ಪ್ರಭಾವಳಿ ಅರ್ಪಿಸಿ ಆರಾಧಿಸಲಾಯಿತು. ಪುರೋಹಿತ ವೇ| ಮೂ| ಶಂಕರನಾರಾಯಣ ಕಲ್ಲೂಂತ್ತಾಯ ಅವರು ದುರ್ಗಾಹೋಮ ನೆರವೇರಿಸಿದರು. ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ್ ಎನ್.ಉಡುಪ ಅವರು ಪ್ರತಿಷ್ಠಾಇತ ಸರ್ವ ದೇವರುಗಳಿಗೆ ಪೂಜೆ ನೆರವೇರಿಸಿ ಆರತಿಗೈದು ತೀರ್ಥಪ್ರಸಾದ ನೀಡಿ ನೆರೆದ ಸದ್ಭಕ್ತರನ್ನು ಹರಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸರಿತಾ, ಶ್ರೀಮತಿ ನಿಶಾ ಮತ್ತು ಕು| ನಿಖಿತಾ ಬಿ. ಶೀನ ಮತ್ತು ಪರಿವಾರ, ಬಿಎಸ್‍ಕೆಬಿ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಸೇವಾರ್ಥಿ
ಳಾದ ತೋನ್ಸೆ ಸಂಜೀವ ಪೂಜಾರಿ, ರವೀಂದ್ರ ಎ.ಅಮೀನ್, ರವಿ ಮೆಂಡನ್ ಕುರ್ಕಾಲು, ಪದ್ಮನಾಭ ಪೂಜಾರಿ ಚೆಂಬೂರು ಸೇರಿದಂತೆ ನೂರಾರು ಭಕ್ತಾಭಿಮಾನಿಗಳು ಉಪಸ್ಥಿತರಿದ್ದು ಶ್ರೀ ಉಮಾ ಮಹೇಶ್ವರೀ ದೇವಿಯನ್ನಾರಾಧಿಸಿದರು. ದಿನೇಶ್ ವಿ.ಕೋಟ್ಯಾನ್ ಜೆರಿಮೆರಿ ಬಳಗದ ವಾದ್ಯಘೋಷಗಳೊಂ ದಿಗೆ ಶ್ರೀ ಉಮಾ ಮಹೇಶ್ವರೀ ಭಜನಾ ಮಂಡಳಿ ಭಜನೆನಡೆಸಿದ್ದು, ಪುರೋಹಿತ ರಾಜೇಶ್ ಭಟ್ ಪುಣ್ಯಾಹ, ನವಕ ಪ್ರತಿಷ್ಠೆ, ಪಂಚಾಮೃತ ನವಕ ಅಭಿಷೇಕ, ಘಟಸ್ಥಾಪನೆ, ವಿವಿಧ ಪೂಜಾಧಿಗಳನ್ನು ನೆರವೇರಿಸಿದರು. ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಕಳೆದ ಒಂಭತ್ತು ದಿನಗಳಿಂದ ನಿರಂತರ ಯಾಗ, ಹವನ, ಮಧ್ಯಾಹ್ನ ಪೂಜೆ, ರಾತ್ರಿ ಪೂಜೆ, ಮಹಾಪೂಜೆ, ಮಹಾ ಮಂಗಳಾರತಿ ಮತ್ತು ಮಹಾಪ್ರಸಾದ ಇತ್ಯಾದಿಗಳೊಂದಿಗೆಮಹಾ ಅನ್ನಸಂತರ್ಪಣೆ ನೆರವೇರಿಸಿ ವಿಜಯ ದಶಮಿ ದಸರೋತ್ಸವಕ್ಕೆ ಸಿದ್ಧತೆ ನಡೆಸಲಾಯಿತು ಎಂದು ದೇವಸ್ಥಾನದ ಪ್ರಧಾನ ಆರ್ಚಕ ಶ್ರೀನಿವಾಸ್ ಎನ್.ಉಡುಪತಿಳಿಸಿದರು.

By suddi9

Leave a Reply

Your email address will not be published. Required fields are marked *