ನೃತ್ಯ ನಿಕೇತನ ಕೊಡವೂರು ಉಡುಪಿ ಬಳಗ ಪ್ರಸ್ತುತ ಪಡಿಸಿದ ನೃತ್ಯವೈಭವ
ಮುಂಬಯಿ: ಪೇಜಾವರ ಮಠ ಮುಂಬಯಿ ಶಾಖೆಯು ಕಳೆದ ಮಂಗಳವಾರ ಸಂಜೆ ಸಾಂತಾಕ್ರೂಜ್ ಪೂರ್ವದಲ್ಲಿನ ಪ್ರಭಾತ್ ಕಾಲೋನಿಯ ಅಲ್ಲಿನ ಶ್ರೀ ಪೇಜಾವರ ಮಠದ ಮುಂಬಯಿ ಶಾಖೆಯಲ್ಲಿ ನೃತ್ಯ ನಿಕೇತನ ಕೊಡವೂರು (ರಿ.) ಉಡುಪಿ ಸಂಸ್ಥೆಯ ವಿದ್ವಾನ್ ಸುಧೀರ್ ರಾವ್ ಮತ್ತು ವಿದುಷಿ ಮಾನಸಿ ನಿರ್ದೇಶನದಲ್ಲಿ ನೃತ್ಯ ಚಿಂತನ ಕಾರ್ಯಕ್ರಮವನ್ನು ಆಯೋಜಿಸಿತ್ತು. ಸಭಾಗೃಹದಲ್ಲಿ ಸುಧೀರ್ ನಾರಾಯಣ ಶರಳಾಯ ಅವರ ಹಾಡುಗಾರಿಕೆಯಲ್ಲಿ ಪ್ರಸ್ತುತಗೊಂಡ ನೃತ್ಯವೈಭವ ಕಾರ್ಯಕ್ರಮದ ಹಿಮ್ಮೇಳದಲ್ಲಿ ವಿದ್ವಾನ್ ಕೊಡವೂರು ಸುಧೀರ್ ರಾವ್ (ನಟ್ಟುವಾಂಗಂ), ದೇವೇಶ್ ಭಟ್ ಕಿದಿಯೂರು (ಮೃದಗಂ), ಶ್ರೀಧರ ಆಚಾರ್ಯ ಪಾಲೆಗಾರು (ವಾಯೋಲಿನ್) ವಾದನಗಳಲ್ಲಿ ಸಹಕರಿಸಿದರು.
Pejawara Mutt - Nrutya Chintana-2

Pejawara Mutt - Nrutya Chintana-3

Pejawara Mutt - Nrutya Chintana-5

Pejawara Mutt - Nrutya Chintana-6

Pejawara Mutt - Nrutya Chintana-7

Pejawara Mutt - Nrutya Chintana-8

Pejawara Mutt - Nrutya Chintana-A1

Pejawara Mutt - Nrutya Chintana-A2

Pejawara Mutt - Nrutya Chintana-B1ಪ್ರಕಾಶ್ ಕುಂಜಿಬೆಟ್ಟು ವರ್ಣಾಲಂಕಾರ ಗೈದರು. ವಿದುಷಿ ಶ್ರೀಮತಿಮಾನಸಿ ಸುಧೀರ್, ಕು| ಶಾಂಭವಿ, ಕು| ಶ್ರೇಯಾ ಆಚಾರ್ಯ, ಕು| ರಾಜೇಶ್ವರಿ ಪ್ರಭು, ಕು| ಅಮೃತ ಉಪಾಧ್ಯ, ಕು| ನಿಖಿತ, ಕು| ಶ್ರೇಯಾ ಭಟ್, ಕು| ಶ್ರೇಯಾ ಪೈ, ಕು| ಚೈತನ್ಯ, ಕು| ವಿಂದ್ಯಾ ಆಚಾರ್ಯ, ಕು| ಸಂಜನ, ಕು| ಅನಘ, ಕು| ಖುಷಿ, ಕು| ಶ್ರೇಯಾ ಶ್ಯಾನುಭಾಗ್, ಕು| ಪೂರ್ವಿ ಕಲ್ಯಾಣಿ, ಕು| ಸಾಧನ್, ಕು| ವೃಂದ, ಕು| ಸುರಭಿ ಸುಧೀರ್ ಮತ್ತಿತರ ಕಲಾವಿದೆಯರು ವೈವಿಧ್ಯಮತ ನೃತ್ಯಗಳನ್ನು ಸಾದರ ಪಡಿಸಿದರು. ಮಠದ ಡಾ| ಎ.ಎಸ್ ರಾವ್, ಆಡಳಿತಾಧಿಕಾರಿಗಳಾದ ಶ್ರೀಹರಿ ಭಟ್ ಮತ್ತುನಿರಂಜನ್ ಗೋಗ್ಟೆ, ಪುರೋಹಿತರು, ಸಿಬ್ಬಂದಿಗಳು ಹಾಗೂ ಬಹುಸಂಖ್ಯೆಯ ಕಲಾಭಿಮಾನಿಗಳು ಉಪಸ್ಥಿತರಿದ್ದು ಮಠದ ಪ್ರಧಾನ ವ್ಯವಸ್ಥಾಪಕರುಗಳಾದ ರಾಮದಾಸ ಉಪಾಧ್ಯಾಯ ಮತ್ತು ಪ್ರಕಾಶ್ ಆಚಾರ್ಯ ರಾಮಕುಂಜ ಅವರು ವಿದ್ವಾನ್ ಸುಧೀರ್ ರಾವ್ ಮತ್ತು ವಿದುಷಿ ಮಾನಸಿ ಮತ್ತು ಸರ್ವ ಕಲಾವಿದರಿಗೆ ಪುಷ್ಪಗುಪ್ಚಗಳನ್ನಿತ್ತು ಗೌರವಿಸಿದರು. ರಾಮದಾಸ ಉಪಾಧ್ಯಾಯ ಸ್ವಾಗತಿಸಿ ವಂದಿಸಿದರು.

By suddi9

Leave a Reply

Your email address will not be published. Required fields are marked *