ಮೂಡುಬಿದರೆ: ಪ್ರಶಾಂತ್ ಪೂಜಾರಿ ಕೊಲೆ ಆರೋಪಿಗಳು ಕಾಂಗ್ರೆಸ್ ಬೆಂಬಲಿತರಾಗಿರುವುದು ಮತ್ತು ಘಟನೆಯ ನಂತರ ಸಚಿವ ಅಭ ಯಚಂದ್ರ ಜೈನ್ ಪ್ರಶಾಂತ್ ಬಗ್ಗೆ ಬೇಜವಬ್ದಾರಿ ಹೇಳಿಕೆ ನೀಡುತ್ತಿದ್ದಾರೆ.
ಬಾಹುಬಲಿ ಚಲಚಲನಚಿತ್ರಕ್ಕೆ ಕಟ್ಟಪ್ಪ ಖಳನಾಯಕನಾದರೆ, ಅಭಯಚಂದ್ರ ಜೈನ್ ಮೂಡುಬಿದರೆ ಕಟ್ಟಪ್ಪ.ಮೂಡುಬಿದರೆಯಲ್ಲಿ ಅಭಯಚಂದ್ರ ಭಾಗವಹಿಸುವ ಎಲ್ಲ ಕಾರ್ಯಕ್ರಮಗಳಲ್ಲಿ ಬಿಜೆಪಿ ನಾಯಕರು ವೇದಿಕೆ ಹಂಚಿಕೊಳ್ಳದಿರಲು ತೀರ್ಮಾನಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ ಜಗದೀಶ್ ಅಧಿಕಾರಿ ಎಚ್ಚರಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಶಾಂತ್ ತನ್ನ ತಂದೆಯೊಂದಿಗೆ ಹೂವಿನ ವ್ಯಾಪಾರ ಮಾಡುತ್ತಿದ್ದು ಶ್ರಮಜೀವಿ. ಹಿಂದುತ್ವದ ರಕ್ಷಣೆಗಾಗಿ ಹೋರಾಟ ಮಾಡಿದ್ದಾನೆ. ಆತನ ವಿರುದ್ಧ ಒಂದು ಕ್ರಿಮಿನಲ್ ಕೇಸು ಫಿಕ್ಸ್ ಮಾಡಲಾಗಿದ್ದು, ನ್ಯಾಯಾಲಯದಲ್ಲೂ ಅದು ಸಾಬೀತಾಗಿಲ್ಲ. ಆದರೆ ಸಚಿವ ಅಭ0ುಚಂದ್ರ ಪ್ರಶಾಂತ್ 50 ಲಕ್ಷ ವೆಚ್ಚದ ಮನೆ ನಿರ್ಮಿಸಿದ್ದ, 20ಕ್ಕೂ ಹೆಚ್ಚು ಕ್ರಿಮಿನಲ್ ಕೇಸುಗಳಿದ್ದು ಆತ ಕಿಡಿಗೇಡಿ ಎಂದು ಚಿಕ್ಕಮಗಳೂರಿನಲ್ಲಿ ಮಾಧ್ಯಮಕ್ಕೆ ಹೇಳಿಕೆ ನೀಡಿರುವುದು ಅವರ ಸಣ್ಣತನಕ್ಕೆ ಸಾಕ್ಷಿಯಾ ಗಿದೆ. ಇದನ್ನು ಬಿಜೆಪಿ ಖಂಡಿಸುತ್ತದೆ. ಸಚಿವರ ಹೇಳಿಕೆಗೆ ದಾಖಲೆ ಒದಗಿಸಲಿ, ಇಲ್ಲವೆ ಸಾರ್ವಜನಿಕ ಕ್ಷಮೆಯಾ ಚಿಸಲಿ ಎಂದು ಆಗ್ರಹಿಸಿದರು.
ಅಭಯಚಂದ್ರರ ಹೇಳಿಕೆಯನ್ನು ಪಕ್ಷ ಗಂಭೀರವಾಗಿ ಪರಿಗಣಿಸುತ್ತದೆ. ಮೂಡುಬಿದರೆಗೆ ಬರುವ ಕರ್ನಾಟಕ ಸರ್ಕಾರದ ಯಾರೇ ಸಚಿವರಾಗಲಿ ಅವರಿಗೂ ಬಿಜೆಪಿ ಕರಿಪತಾಕೆ ಪ್ರದರ್ಶಿಸಿ ಪ್ರತಿಭಟನೆ ಪ್ರದರ್ಶಿಸಲಿದೆ ಎಂದು ಎಚ್ಚರಿಸಿದರು.
ಎಲ್ಲ ಧರ್ಮದವರ ಮತ ಪಡೆದು ಶಾಸಕರಾದ ಅಭಯಚಂದ್ರ ಈಗ ಅಲ್ಪ ಸಂಖ್ಯಾತರನ್ನು ಓಲೈಸುವುದಕ್ಕಾಗಿ ಹಿಂದೂ ದಮನಕಾರಿ ನೀತಿ ಅನುಸರಿಸುತ್ತಿದ್ದಾರೆ. ಇದರಿಂದಾಗಿ ಶಾಂತಿಪ್ರಿಯ ಮೂಡುಬಿದರೆಯಲ್ಲಿ ಗೊಂದಲ ಮತ್ತು ಆತಂಕ ಶುರುವಾಗಿದೆ. ಒಬ್ಬ ಹೂವಿನ ವ್ಯಾಪಾರಿಯ ಸಂಪಾದನೆಯ ಬಗ್ಗೆ ಮಾತನಾಡಿದ ಸಚಿವರು ತಮ್ಮ ಸಂಪತ್ತಿನ ವಿವರವನ್ನು ಸಾರ್ವಜನಿಕರ ಮುಂದಿಡಲು ತ ಯಾರಿದ್ದಾರೆಯೆ ಎಂದು ಅಧಿಕಾರಿ ಪ್ರಶ್ನಿಸಿದರು.
ಗೌರವಯುತ ಸ್ಥಾನದಲ್ಲಿರುವ ಅಭಯಚಂದ್ರ ಓಲೈಕೆಯ ರಾಜಕಾರಣ ಬಿಟ್ಟು ಸತ್ಯ ಮಾತನಾಡಲು ಕಲಿತರೆ ಮೂಡುಬಿದಿರೆಯಲ್ಲಿ ಶಾಂತಿ ಮರುಸ್ಥಾಪನೆಯಾಗುತ್ತದೆ ಎಂದು ಬಿಜೆಪಿ ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ಆಚಾರ್ಯ ಹೇಳಿದರು. ಪಕ್ಷದ ನಗರ ಅಧ್ಯಕ್ಷ ಲಕ್ಷ್ಮಣ ಪೂಜಾರಿ ಉಪಸ್ಥಿತರಿದ್ದರು.
ಅ.10ರಂದು ಹಾವೇರಿ ಜಿಲ್ಲೆಯಲ್ಲಿ ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಖಾದರ್ ಹಾಗೂ ಮೀನುಗಾರಿಕಾ ಸಚಿವ ಕೆ.ಅಭಯಚಂದ್ರ ಜೈನ್ ಭಾಗವಹಿಸುವುದಕ್ಕಿತ್ತು. ಆದರೆ ಅ.9ರಂದು ಪ್ರಶಾಂತ್ ಕೊಲೆಯಾದ ಕಾರಣ, ಖಾದರ್ ಅವರು ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾದ ಡಾ.ಜಿ.ಪರಮೇಶ್ವರ್ ಅವರಿಗೆ ಪತ್ರ ಬರೆದಿದ್ದಾರೆ. `ಮೂಡುಬಿದರೆಯಲ್ಲಿ ವ್ಯಕ್ತಿಯೋರ್ವನ ಕೊಲೆಯಾಗಿದ್ದು, ಪರಿಸರದಲ್ಲಿ ಅಹಿತಕರ ಘಟನೆ ನಡೆದಿದ್ದು, ಜಿಲ್ಲೆಯಾದ್ಯಂತ ಹರಡುವ ಸಂಭವವಿದೆ. ನಾನು ಹಾಗೂ ಅಭಯಚಂದ್ರ ಜೈನ್ ತುತರ್ಾಗಿ ಅಲ್ಲಿ ತೆರಳಬೇಕಾಗಿದ್ದರಿಂದ ಹಾವೇರಿ ಕಾರ್ಯಕ್ರಮಕ್ಕೆ ಬರಲು ಸಾಧ್ಯವಾಗಿಲ್ಲ ಎಂಬುದನ್ನು ಪತ್ರದಲ್ಲಿ ತಿಳಿಸಿದ್ದಾರೆ ಎಂದು ಜಗದೀಶ್ ಅಧಿಕಾರಿ ಪತ್ರದ ಪ್ರತಿಯನ್ನು ಮಾಧ್ಯಮದವರ ಮುಂದೆ ಪ್ರದಶರ್ಿಸಿದರು. ಆದರೆ ಮೂಡುಬಿದರೆಗೆ ಖಾದರ್ ಭೇಟಿ ನೀಡಿಲ್ಲ. ಸಚಿವ ಅಭಯಚಂದ್ರ ಜೈನ್ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಜೊತೆ ಗುಟ್ಟಾಗಿ ಸಭೆ ನಡೆಸಿದ್ದು ಬಿಟ್ಟರೆ ಕೊಲೆಯಾದ ಜಾಗ, ಪ್ರಶಾಂತ್ ಮನೆಗೆ ಭೇಟಿ ನೀಡಿಲ್ಲ. ಈ ಮೂಲಕ ಕಾಂಗ್ರೆಸ್ ವರಿಷ್ಠರಿಗೆ ಖಾದರ್ ಸುಳ್ಳು ಹೇಳಿದ್ದಾರೆ ಎಂದು ಅಧಿಕಾರಿ ಆರೋಪಿಸಿದರು.