ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮದ ಉದ್ಘಾಟನೆ
ಸುದ್ದಿ9 ಬಂಟ್ವಾಳ: ಸಮಾಜದ ಎಲ್ಲಾ ವರ್ಗದ ಜನರನ್ನು ಪ್ರೀತಿಸುವುದರೊಂದಿಗೆ ರಕ್ಷಿಸುವ ಕೆಲಸವನ್ನು ಬಿಲ್ಲವ ಸಮಾಜ ಮಾಡಬೇಕು. ಬೇರೆ ಸಮುದಾಯದವರಿಗೆೆ ಬುದ್ದಿಹೇಳುವ ಬದಲು ನಾವು ಮೊದಲು ಸಮಾಜಕ್ಕೆ ಮಾದರಿಯಾಗಿ ಕೆಲಸ ಮಾಡಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ಧನ ಪೂಜಾರಿ ಕಿವಿಮಾತು ಹೇಳಿದರು. ಅವರು ಬಿ.ಸಿ.ರೋಡಿನ ಗಾಣದಪಡ್ಪು ಶ್ರೀ ನಾರಾಯಣ ಗುರು ನಗರದ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ ಮತ್ತು ಯುವ ಬಿಲ್ಲವ ಸಮಾವೇಶವನ್ನು ಭಾನುವಾರ ಕೋಟಿ ಚೆನ್ನಯ್ಯ ವೇದಿಕೆಯಲ್ಲಿ ಉದ್ಘಾಟಿಸಿ ಮಾತಾಡಿದರು. ಕೇರಳದ ವರ್ಕಳ ಶಿವಗಿರಿ ಮಠದ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ಜಾತಿಯ ಹುಣ್ಣಿಗೆ ಧರ್ಮದ ಮುಲಾಮು ಮದ್ದಲ್ಲ, ಜಾತಿ ತಾರತಮ್ಯ ನಿವಾರಣೆಯೊಂದೆ ಇದಕ್ಕೆ ಪರಿಹಾರ ಈ ನಿಟ್ಟಿನಲ್ಲಿ ಬ್ರಹ್ಮಶ್ರೀನಾರಾಯಣ ಗುರುಗಳ ಸಂದೇಶ ನಿಜಾರ್ಥದಲ್ಲಿ ಅನುಷ್ಠಾನಗೊಳ್ಳಬೇಕಿದೆ ಎಂದು ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅಭಿಪ್ರಾಯಿಸಿದ್ದಾರೆ. ಇದೇ ವೇಳೆ “ಬಿವರ್ೆರ ತುಡರ್” ಸ್ಮರಣ ಸಂಚಿಕೆಯನ್ನು ಕನರ್ಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಜೆ.ಪಿ ನಾರಾಯಣ ಸ್ವಾಮಿ ಬಿಡುಗಡೆಗೊಳಿಸಿ ಮಾತನಾಡಿದರು ಸಮಾಜದಲ್ಲಿ ಗುರುತಿಸಿಕೊಂಡಿರುವ ನಾಯಕರು ತಾವು ಬೆಳೆಯುದರ ಜೊತೆಗೆ ಸಮುದಾಯದ ಯುವಕರಿಗೂ ಬೆಳೆಯಲು ಅವಕಾಶ ಮಾಡಿಕೊಡಬೇಕು ಎಂದರು. ಸೊರಬ ಶಾಸಕ ಮಧು ಬಂಗಾರಪ್ಪ, ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಉದ್ಯಮಿ ರಮೇಶ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ರವಿಚಂದ್ರ ಅತಿಥಿಗಳಾಗಿದ್ದರು. ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್, ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷ ಜಯ ಸಿ.ಸುವರ್ಣ, ಮಂಗಳೂರು ಜೆ.ವಿ. ಸನ್ಸ್ನ ಮಾಲಕ ಜೆ.ಸೀತಾರಾಮ, ಗುರು ಸಂದೇಶ ಯಾತ್ರೆಯ ಸಂಚಾಲಕ ಟಿ.ಶಂಕರ್ ಸುವರ್ಣ, ಯುವವಾಹಿನಿ ತಾಲೂಕು ಘಟಕದ ಕಾರ್ಯದಶರ್ಿ ನಾಗೇಶ ಎಲಬೆ ವೇದಿಕೆಯಲ್ಲಿದ್ದರು. ತಾಲೂಕು ಯುವವಾಹಿನಿ ಘಟಕದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ಸಭಾಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಯುವವಾಹಿನಿಯ ಮಾಜಿ ಅಧ್ಯಕ್ಷರುಗಳನ್ನು ಗೌರವಿಸಲಾಯಿತು. ರಜತ ಸಂಭ್ರಮದ ಸಂಚಾಲಕ ಜಿತೇಂದ್ರ ಜೆ.ಸುವರ್ಣ ಸ್ವಾಗತಿಸಿದರು. ಯುವವಾಹಿನಿಯ ಉಪಾಧ್ಯಕ್ಷ ರಾಜೇಶ್ ಸುವರ್ಣ ಪ್ರಸ್ತಾವನೆಗೈದರು. ಶ್ರೀಧರ ಅಮೀನ್ ವಂದಿಸಿದರು. ನರೇಂದ್ರ ಕೆರೆಕಾಡು, ಲೋಕೇಶ್ ಬೆತ್ತೋಡಿ ನಿರೂಪಿಸಿದರು.



