ಮೂಡುಬಿದರೆ: ಶಿರ್ತಾಡಿ ವಾಲ್ಪಾಡಿಯ ದಿ.ಹಿಲಾರಿ ಪಿಂಟೋ ಅವರ ಪತ್ನಿ ಸೆಲೆಸ್ತಿನ್ ಪಿಂಟೋ (84) ನ.12ರಂದು ನಿಧನ ಹೊಂದಿದರು. ವಾಮಂಜೂರು ಇಗರ್ಜಿಯ ಧರ್ಮಗುರು ಫಾ. ಸಿಪ್ರಿಯನ್ ಪಿಂಟೋ, ಶಿರ್ತಾಡಿ ಗ್ರಾ.ಪಂ. ಮಾಜಿ ಅಧ್ಯಕ್ಷ ಫ್ರೆಡ್ರಿಕ್ ಪಿಂಟೋ ಅವರ ಸಹಿತ ಆರು ಮಂದಿ ಪುತ್ರರು, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ.
