ಮೂಡುಬಿದಿರೆ: ಅಕ್ಟೋಬರ್ 9ರಂದು ಪ್ರಶಾಂತ್ ಕೊಲೆಯಾದ ದಿನ ಹಾಗೂ 10ರಂದು ಬಂದ್ ಆಗಿದ್ದ, ಮೂಡುಬಿದಿರೆ ತಿಂಗಳ ಬಳಿಕ ನ.13ರಂದು ಮತ್ತೊಮ್ಮೆ ಬಂದ್ ಆಗಿದೆ.
IMG_3362

IMG_3367

IMG_3372ನ.10ರಂದು ಟಿಪ್ಪು ಜಯಂತಿ ವೇಳೆ ಮಡಿಕೇರಿಯಲ್ಲಿ ವಿಹಿಂಪ ನಾಯಕ ಕುಟ್ಟಪ್ಪ ಹಾಗೂ ನ.12ರಂದು ಬಂಟ್ವಾಳದಲ್ಲಿ ಹರೀಶ್ ಎಂಬವರು ಹತ್ಯೆಗೀಡಾಗಿದ್ದು, ಕೆಲವು ಸಂಘಟನೆಗಳು ದ.ಕ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುವುದರಲ್ಲಿತ್ತು. ದ.ಕ ಜಿಲ್ಲಾಡಳಿತವು ನ.13ರಂದು ಸೆಕ್ಷನ್ ಜಾರಿಗೊಳಿಸಿದ ಹಿನ್ನಲೆಯಲ್ಲಿ ಮೂಡುಬಿದಿರೆಯಲ್ಲೂ ಬಂದ್ ಆಚರಿಸಲಾಗಿದೆ.
ಮೂಡುಬಿದಿರೆ ಪೇಟೆಯಲ್ಲಿ ಶುಕ್ರವಾರ ಮುಂಜಾನೆ ತೆರೆದಿದ್ದ ಹೊಟೇಲ್‍ಗಳನ್ನು ಪೊಲೀಸರು ಮುಚ್ಚಿಸಿದರು. ಬೆಳಿಗ್ಗೆ 11ಗಂಟೆಯಿಂದ ಸಂಪೂರ್ಣವಾಗಿ ಬಂದ್ ಮಾಡಲಾಗಿದ್ದು, ಮುಖ್ಯ ರಸ್ತೆಯಲ್ಲಿ ಆಟೋ, ಕಾರು ಹಾಗೂ ದ್ವಿಚಕ್ರ ವಾಹನಗಳು ಕಡಿಮೆ ಸಂಖ್ಯೆಯಲ್ಲಿ ಕಂಡು ಬಂದವು. ಶಾಲಾ ಕಾಲೇಜುಗಳು ತೆರೆಯಲಿಲ್ಲ.
ಮೂಡುಬಿದಿರೆ ಶುಕ್ರವಾರ ಸಂತೆಗೆ ಬಂದ್ ಕಾಡಿದೆ.

By suddi9

Leave a Reply

Your email address will not be published. Required fields are marked *