ಮೂಡುಬಿದಿರೆ: ನ.26ರಿಂದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುವ ಆಳ್ವಾಸ್ ನುಡಿಸಿರಿ-2015ರಲ್ಲಿ ಕನ್ನಡ ನಾಡು ನುಡಿ ಸಂಸ್ಕೃತಿಗಾಗಿ ಸೇವೆ ಸಲ್ಲಿಸಿದ 10 ಮಂದಿ ಸಾಧಕರಿಗೆ ಆಳ್ವಾಸ್ ನುಡಿಸಿರಿ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಸಮ್ಮೇಳನದ ರೂವಾರಿ ಡಾ.ಎಂ ಮೋಹನ ತಿಳಿಸಿದ್ದಾರೆ.
Sumithra Bai

Iswar Daidota

Leela Baipadithaya

mbd_nov17_4 Bannanje Govindachar

mbd_nov17_4 Honnappachar

Narayana Reddy 2

Pasha

R.K.Padmanabha

rajendrasingh babu photo

Sumatindra Nadig
ವೇದ ಸಾಹಿತ್ಯ, ಭಾರತೀಯ ತತ್ತ್ವ ಶಾಸ್ತ್ರಗಳಲ್ಲಿ ಸಹಿತ ವಿವಿಧ ಕ್ಷೇತ್ರದ ಸಾಧನೆ ಮಾಡಿರುವ ಪದ್ಮಶ್ರೀ ಡಾ. ಬನ್ನಂಜೆ ಗೋವಿಂದಾಚಾರ್ಯ, ಖ್ಯಾತ ಲೇಖಕ ಡಾ. ಸುಮತೀಂದ್ರ ನಾಡಿಗ, ಕನ್ನಡ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ, ನಿದರ್ೇಶಕ ಎಸ್.ವಿ.ರಾಜೇಂದ್ರ ಸಿಂಗ್ ಬಾಬು, ನರ್ಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರದ ಅಗ್ರಮಾನ್ಯ ಸಂಗೀತಕಾರ ವಿದ್ವಾನ್ ಆರ್.ಕೆ.ಪದ್ಮನಾಭ
ಮಹಿಳಾ ಅಧ್ಯಯನ ಮತ್ತು ಸ್ತ್ರೀವಾದಿ ಸಾಹಿತ್ಯ ವಿಮರ್ಶಕಿ ಡಾ. ಬಿ.ಎನ್.ಸುಮಿತ್ರಾ ಬಾಯಿ, ಹಿರಿಯ ಪತ್ರಕರ್ತ ಈಶ್ವರ ದೈತೋಟ, ಯಕ್ಷಗಾನ ಭಾಗವತರಾಗಿರುವ ಲೀಲಾವತಿ ಬೈಪಾಡಿತ್ತಾಯ, ಸಾವಯವ ಕೃಷಿಕ ವರ್ತೂರು ನಾರಾಯಣ ರೆಡ್ಡಿ, ಲೋಹ ಶಿಲ್ಪಿ ಹೊನ್ನಪ್ಪಚಾರ್, ಕರ್ಣಾಟಕ ಶಾಸ್ತ್ರೀಯ ಸಂಗೀತ ಶಾಸ್ತ್ರೀಯ ನೃತ್ಯ ಸಂಯೋಜಕ ಸೈಯದ್ ಸಲ್ಲಾವುದ್ದೀನ್ ಪಾಷ ಅವರಿಗೆ ಆಳ್ವಾಸ್ ಪ್ರಶಸ್ತಿ ನೀಡಿ ಗೌರವಿಸಲಾಗುವುದು
ನ.29ರಂದು ಪ್ರದಾನ:
ಆಳ್ವಾಸ್ ನುಡಿಸಿರಿ 2015ರ ಸಮಾರೋಪ ಸಮಾರಂಭದಲ್ಲಿ ನ.29ರಂದು ಮಧ್ಯಾಹ್ನ 3.30ಕ್ಕೆ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ಪುರಸ್ಕೃತರನ್ನು ‘ಆಳ್ವಾಸ್ ನುಡಿಸಿರಿ ಪ್ರಶಸ್ತಿ’ ಹಾಗೂ 25.000 ರೂ. ನಗದಿನೊಂದಿಗೆ ಗೌರವಿಸಲಾಗುವುದುಎಂದು ಮೋಹನ ಆಳ್ವ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

By suddi9

Leave a Reply

Your email address will not be published. Required fields are marked *