ಮುಂಬಯಿ: ಬೇಧ ಭಾವವಿಲ್ಲದ ಸೇವೆಯೇ ಭಾರತ್ ಬ್ಯಾಂಕ್: ಹಾವಂಜೆ ಶಿವರಾಮ ಶೆಟ್ಟಿ.
ಸಹಕಾರಿ ಬ್ಯಾಂಕ್ಸ್ ಅಸೋಸಿಯೇಶನ್ ಲಿಮಿಟೆಡ್ ಸಂಸ್ಥೆಯಿಂದ ಸತತ `ಸರ್ವೋತ್ಕೃಷ್ಟ ಬ್ಯಾಂಕ್’ ಪುರಸ್ಕೃತ ಭಾರತ್ ಕೋ.ಆಪರೇಟಿವ್ ಬ್ಯಾಂಕ್ (ಮುಂಬಯಿ) ಲಿಮಿಟೆಡ್ ತನ್ನ 82ನೇ ಶಾಖೆಯು ಗುಜರಾತ್ ರಾಜ್ಯದ ಸೂರತ್ ನಗರದ ವರಛ್ಚಾ ಅಲ್ಲಿನ ಸೆಂಟ್ರಲ್ ಬಜ್ಹಾರ್ ಕಾಂಪ್ಲೆಕ್ಸ್ ನಲ್ಲಿ ನ.19ರಂದು ಗುರುವಾರ ಶುಭಾರಂಭಗೊಳಿಸಿತು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಅಧ್ಯಕ್ಷರೂ ಹಾಗೂ ಭಾರತ್ ಬ್ಯಾಂಕ್ ಕಾರ್ಯಾಧ್ಯಕ್ಷ ಜಯ ಸಿ.ಸುವರ್ಣ ಅವರು ರಿಬ್ಬನ್ ಕತ್ತರಿಸಿ ಸೂರತ್ ನಗರದ ಜನತೆಗೆ ಭಾರತ್ ಬ್ಯಾಂಕ್ ಇದರ ಪ್ರಥಮ ಶಾಖೆಯನ್ನು ಸೇವಾರ್ಪಣೆ ಗೈದರು. ಸೂರತ್ ಹಿರಿಯ ಉದ್ಯಮಿ ಹಾವಂಜೆ ಶಿವರಾಮ ಶೆಟ್ಟಿ ಅವರು ಜ್ಯೋತಿ ಪ್ರಜ್ವಲಿಸಿ ಶಾಖೆಗೆ ವಿಧ್ಯುಕ್ತವಾಗಿ ಉದ್ಘಾಟಿಸಿದರು. ಉಪ ಕಾರ್ಯಾಧ್ಯಕ್ಷೆ ನ್ಯಾ| ರೋಹಿಣಿ ಜೆ.ಸಾಲಿಯಾನ್ ಎಟಿಎಂ ಸೇವೆ, ಬ್ಯಾಂಕ್ ಹಿರಿಯ ನಿರ್ದೇಶಕಿ ಪುಷ್ಪಲತಾ ಎನ್.ಸಾಲ್ಯಾನ್ ಸೇಪಾರ್ಲಾಕ್ ಮುಖ್ಯ ಕಾರ್ಯನಿರ್ವ ಹಣಾ ಅಧಿಕಾರಿ, ಆಡಳಿತ ನಿರ್ದೇಶಕ ಸಿ.ಆರ್ ಮೂಲ್ಕಿ ಕಂಪ್ಯೂಟರೀಕೃತ ಬ್ಯಾಂಕಿಂಗ್ ಸೇವೆಗೆ ಚಾಲನೆಯನ್ನಿತ್ತರು.
ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಸೂರತ್ ಶಾಸಕ ಕುಮಾರ್ ಕಣನೀ, ಬಿಲ್ಲವ ಸಂಘ ಸೂರತ್ ಗೌರವಾಧ್ಯಕ್ಷ ಕೃಷ್ಣ ಎಸ್.ಅಂಚನ್, ಅಧ್ಯಕ್ಷ ವಿಶ್ವನಾಥ್ ಪೂಜಾರಿ ಬಾಡೋಳಿ, ಉಪಾಧ್ಯಕ್ಷ ಪ್ರಭಾಕರ ಸುವರ್ಣ, ಕರ್ನಾಟಕ ಸಮಾಜ ಸೂರತ್ ಅಧ್ಯಕ್ಷ ಮನೋಜ್ ಸಿ.ಪೂಜಾರಿ, ಗೌರವಾಧ್ಯಕ್ಷ ರಾಮಚಂದ್ರ ಶೆಟ್ಟಿ ಗೌ| ಪ್ರ| ಕಾರ್ಯದರ್ಶಿ ವನಿತಾ ಎಸ್.ಶೆಟ್ಟಿ, ಮಹಿಳಾ ವಿಭಾಗಧ್ಯಕ್ಷೆ ಸೌಮ್ಯ ಪಿ.ಪೂಜಾರಿ, ಉಪಾಧ್ಯಕ್ಷ ಪ್ರಭಾಕರ ಸುವರ್ಣ, ದಯಾನಂದ ಬೋಂಟ್ರಾ ಬರೋಡಾ, ಸಹಾಯಕ ಪೋಲಿಸ್ ಆಯುಕ್ತರುಗಳಾದ ವಿ.ಬಿ ಪಾಟೀಲ್, ಹಿಮಾಂಶು ಸೋಲಂಕೆ, ಪೋಲಿಸ್ ಇನ್ಸ್ಪೆಕ್ಟರ್ ಸಿ.ಕೆ ಪಾಟೇಲ್, ಕಟ್ಟಡದ ಮಾಲಕ ರಾಜೇಂದ್ರ ಚೋಕವಾಲ, ಉದ್ಯಮಿಗಳಾದ ಸಾಧುೆಸ್.ಪೂಜಾರಿ ಬ್ರಹ್ಮಾವರ, ದಿನೇಶ್ ಎಸ್.ಪೂಜಾರಿ ಬ್ರಹ್ಮಾವರ, ಹರೀಶ್ ಲಕಾಣೆ ಸೇರಿದಂತೆ ಸ್ಥಾನೀಯ ನೂರಾರು ಗ್ರಾಹಕರು, ಹಿತೈಷಿಗಳು ಆಗಮಿಸಿ ಶಾಖೆಯ ಶ್ರೇಯೋಭಿವೃದ್ಧಿಗೆ ಶುಭ ಕೋರಿದರು.
ನಾನು ಭಾರತ್ ಬ್ಯಾಂಕ್ ಆರಂಭದ ಗ್ರಾಹಕನಾಗಿದ್ದು ಈ ವರೆಗೂ ದೀರ್ಘಾವಧಿಯ ಸೇವೆಯನ್ನು ಪಡೆದು ಧನ್ಯನೆಣಿಸಿದ್ದೇನೆ. ಈ ಬ್ಯಾಂಕ್ನ ಮುನ್ನಡೆಯಲ್ಲಿ ಶ್ರಮವೇ ಪ್ರಧಾನವಾಗಿದೆ. ಬೇಧಭಾವವಿಲ್ಲದ ಸೇವೆಯೊಂದಿಗೆ ಸರ್ವರನ್ನೂ ಸಮಾನರಾಗಿ ಕಾಣುವ ಏಕೈಕ ಬ್ಯಾಂಕ್ ಇದಾಗಿದ್ದು ಭವಿಷ್ಯತ್ತಿನಲ್ಲಿ ದೇಶವ್ಯಾಪಿ ಸೇವಾ ನಿರತವಾಗಿ ರಾಷ್ಟ್ರದ ಸಹಕಾರಿ ರಂಗದ ಅಗ್ರಗಣ್ಯ ಪಂಕ್ತಿಯಲ್ಲಿ ಮೆರೆಯಲಿ ಎಂದು ಹಾವಂಜೆ ಶಿವರಾಮ ಶೆಟ್ಟಿ ನುಡಿದರು.
ಉದ್ಯಮಿ ರಾಜೇಂದ್ರ ಭಾಯಿ ಮಾತನಾಡಿ ಆರ್ಥಿಕ ಕ್ಷೇತ್ರದಲ್ಲಿ ಶೀಘ್ರಗತಿಯಾಗಿ ಮುನ್ನಡೆಯುತ್ತಿರು ವ ಭಾರತ್ ಬ್ಯಾಂಕ್ ಉದ್ಯಮನಗರಿಗೆ ಕಾಲಿರಿಸುತ್ತಿರುವುದು ಅಭಿನಂದನೀಯ. ಈ ನಗರವು ಸರ್ವ ಉದ್ಯಮಿ, ಉದ್ಯಮಗಳನ್ನು ಬೆಳೆಸಿ ಸಾಧಕ ಉದ್ಯಮಶೀಲರನ್ನಾಗಿಸಿದ ನಾಡುಆಗಿದೆ. ಅಂತೆಯೇ ಈ ಬ್ಯಾಂಕು ಕೂಡಾ ಯಶಸ್ವೀಯಾಗಿ ಮುನ್ನಡೆಯಲಿದ್ದು, ಸ್ಥಾನೀಯ ಜನತೆಯ ಯೋಗದಾನ ಅವಶ್ಯವಿದೆ ಎಂದರು.
ರಾಷ್ಟ್ರದ ಆರ್ಥಿಕ ರಾಜಧಾನಿ ಮುಂಬಯಿಯಲ್ಲಿ ಆದಿಗೊಂಡು ಇದೀಗ ದೇಶದ ಉದ್ದಗಲಕ್ಕೂ ಸೇವೆಯನ್ನು ವಿಸ್ತಾರಿಸಿ ಮುನ್ನಡೆಯುವ ಭಾರತ್ ಬ್ಯಾಂಕ್ನ ಸೇವೆ ಸ್ತುತ್ಯಾರ್ಹ. ವ್ಯಾವಹಾರದೊಂದಿಗೆ ಸಂಬಂಧಗಳನ್ನು ಬೆಳೆಸಿ ಮುನ್ನಡೆಯುವ ಈ ಬ್ಯಾಂಕ್ ಮತ್ತಷ್ಟು ಉತ್ತರೋತ್ತರವಾಗಿ ಬೆಳೆದು ಸಾಧನಾಶೀಲ ಬ್ಯಾಂಕ್ ಆಗಲಿ ಎಂದು ದಯಾನಂದ ಬೋಂಟ್ರಾ ಹಾರೈಸಿದರು.
ವಿಶ್ವನಾಥ್ ಪೂಜಾರಿ ಮಾತನಾಡಿ ಸಹಕಾರಿ ವಲಯದಲ್ಲಿ ಭಾರತ್ ಬ್ಯಾಂಕ್ ಸೇವೆ ಅನುಕರಣೀಯ. ಸಾಮರಸ್ಯದ ಪ್ರತೀಕವಾಗಿ ಸೇವೆಯಲ್ಲಿ ತೊಡಗಿಸಿ ಕೊಂಡಿರುವ ನಮ್ಮ ಬ್ಯಾಂಕ್ ಹೊಸ ಅಧ್ಯಾಯನ ಬರೆಯುವಂತಾಗಲಿ ಎಂದರು.
ನಮ್ಮ ಕರ್ಮಭೂಮಿ ಸೂರತ್ ನಗರಕ್ಕೆ ಹೆಜ್ಜೆಯನ್ನಿರಿಸಿದ ಭಾರತ್ ಬ್ಯಾಂಕ್ ನಮ್ಮ ವ್ಯಾಪಾರ ವಾಹಿವಾಟುಗಳ ಮುನ್ನಡೆಗೆ ಆನೆಬಲ ತುಂಬಿದಂತಹಗಿದೆ. ಈ ಬ್ಯಾಂಕ್ನ ಸವರ್ೊತ್ಕೃಷ್ಟ ಸೇವೆ ನಾವು ತಿಳಿದಿದ್ದು ನಮ್ಮೆಲ್ಲರ ಜೊತೆಗೆ ಸಮಸ್ತ ಜನತೆಯ ಅಭ್ಯುದಯಕ್ಕೆ ಪೂರಕವಾಗ ಬಲ್ಲದು ಎಂದು ಮನೋಜ್ ಸಿ.ಪೂಜಾರಿ ಆಶಯ ವ್ಯಕ್ತ ಪಡಿಸಿದರು.
ಬ್ಯಾಂಕ್ನ ನಿರ್ದೇಶಕರುಗಳಾದ ನ್ಯಾ| ಎಸ್.ಬಿ ಅವಿೂನ್, ಚಂದ್ರಶೇಖರ ಎಸ್.ಪೂಜಾರಿ, ಆರ್.ಡಿ ಪೂಜಾರಿ, ಕೆ.ಬಿ ಪೂಜಾರಿ, ಗಂಗಾಧರ್ ಜೆ.ಪೂಜಾರಿ ಹಾಗೂ ಆಡಳಿತ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್ ಮೂಲ್ಕಿ ಬ್ಯಾಂಕ್ನ ಮುಖ್ಯ ಪ್ರಧಾನ ಪ್ರಬಂಧಕ ಅನಿಲ್ ಕುಮಾರ್ ಆರ್.ಅವಿೂನ್, ಮಹಾ ಪ್ರಂಬಧಕಿ ಶೋಭಾ ದಯಾನಂದ್, ಸುನೀಲ್ ಎ.ಗುಜರನ್ ಮತ್ತಿತರರು ಉಪಸ್ಥಿತರಿದ್ದು ಶುಭ ಕೋರಿದರು.
ಶ್ರೀ ಶೇಖರ್ ಶಾಂತಿ ಉಳ್ಳೂರು ಮತ್ತು ಶ್ರೀ ಧನಂಜಯ ಶಾಂತಿ ಉಳ್ಳೂರು ವಾಸ್ತುಪೂಜೆ, ಸತ್ಯನಾರಾಯಣ ಪೂಜೆ, ಗಣಹೋಮ, ದ್ವಾರಪೂಜೆಗಳನ್ನು ನೆರವೇರಿಸಿ ಹರಸಿದರು. ಗಂಗಾಧರ ಕಲ್ಲಾಡಿ ತೀರ್ಥ-ಪ್ರಸಾದ ವಿತರಿಸಿದರು. ಶಾಖೆಯ ಮುಖ್ಯಸ್ಥ ಪ್ರಶಾಂತ್ ಪಿ.ಪೂಜಾರಿ ಮತ್ತು ಶ್ರೀಮತಿ ಭಾರತಿ ಪ್ರಶಾಂತ್ ದಂಪತಿ ಪೂಜೆಯ ಯಜಮಾನತ್ವ ವಹಿಸಿದ್ದರು.
ಬ್ಯಾಂಕ್ನ ಉಪ ಪ್ರಧಾನ ಪ್ರಬಂಧಕ ಹಾಗೂ ಅಭಿವೃದ್ಧಿ ಮುಖ್ಯಸ್ಥ ಮೋಹನ್ದಾಸ್ ಹೆಜ್ಮಾಡಿ ಸ್ವಾಗತಿಸಿದರು. ಈ ಶುಭಾವಸರದಲ್ಲಿ ಕೃಷ್ಣ ಎಸ್.ಅಂಚನ್, ಮನೋಜ್ ಸಿ.ಪೂಜಾರಿ ಮತ್ತು ರಜಿತಾ ಮನೋಜ್ ದಂಪತಿಯನ್ನು ಜಯ ಸುವರ್ಣರು ಶಾಲು ಹೊದಿಸಿ, ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಮಹಾ ಪ್ರಂಬಧಕ ನಿತ್ಯಾನಂದ ಡಿ.ಕೋಟ್ಯಾನ್ ಬ್ಯಾಂಕ್ನ ಸುದೀರ್ಘಾವಧಿ ಸೇವೆ ಹಾಗೂ 82ನೇ ಶಾಖೆಯ ಸೇವಾರಂಭದ ಬಗ್ಗೆ ಸ್ಥೂಲವಾಗಿ ಮಾಹಿತಿಯನ್ನಿತ್ತರು ಹಾಗೂ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು. ಅಧಿಕಾರಿಗಳಾದ ಅರ್ನವಿಂದ ಸಿ.ಪೂಜಾರಿ, ಸಂಜೀವ ಎ.ಪೂಜಾರಿ, ಕಪಿಲ್ ಕೆ.ಪೂಜಾರಿ, ಸುನೀಲ್ ಎಸ್.ಸುವರ್ಣ, ವಿವೇಕ್ ಮೆಹ್ತಾ, ಕೃಷ್ಣ ಸೇತ್ನಾ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಶಾಖೆಯ ಮುಖ್ಯಸ್ಥ ಪ್ರಶಾಂತ್ ಪಿ.ಪೂಜಾರಿ ಕೃತಜ್ಞತೆ ಸಮರ್ಪಿಸಿದರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್










